ಬುಧವಾರ, ಜನವರಿ 4, 2017

Eeradye or arishina ele kadubu | ಈರಡ್ಯೆ ಅಥವಾ ಅರಿಶಿನ ಎಲೆ ಕಡುಬು ಮಾಡುವ ವಿಧಾನ

Eeradye or arishina ele kadubu

Eeradye or arishina ele kadubu | ಈರಡ್ಯೆ ಅಥವಾ ಅರಿಶಿನ ಎಲೆ ಕಡುಬು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1 ಕಪ್ ತೆಂಗಿನ ತುರಿ
  3. 1/2 ಕಪ್ ಬೆಲ್ಲ
  4. 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  5. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  6. 2 ಟೀಸ್ಪೂನ್ ತುಪ್ಪ 
  7. ಉಪ್ಪು ರುಚಿಗೆ ತಕ್ಕಷ್ಟು
  8. ಅರಿಶಿನ ಎಲೆಗಳು

ಈರಡ್ಯೆ ಅಥವಾ ಅರಿಶಿನ ಎಲೆ ಕಡುಬು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  3. ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ. 
  4. ತೆಂಗಿನ ತುರಿ, ಬೆಲ್ಲ ಮತ್ತು ಏಲಕ್ಕಿಯನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ ಹೂರಣ ಸಿದ್ಧ ಮಾಡಿಕೊಳ್ಳಿ. 
  5. ಇಷ್ಟು ಹೊತ್ತಿಗೆ ಅಕ್ಕಿ ಹಿಟ್ಟು ಬಿಸಿ ಆರಿರುತ್ತದೆ. ಆ ಹಿಟ್ಟನ್ನು ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು. 
  6. ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು, ಸ್ವಚ್ಛ ಮಾಡಿದ ಅರಿಶಿನದ ಎಲೆ ಮೇಲೆ ತಟ್ಟಿ. ಕೈ ಬೆರಳುಗಳಿಗೆ ತುಪ್ಪ ಸವರಿಕೊಳ್ಳಿ. 
  7. ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ. 
  8. ಸೆಕೆಯಲ್ಲಿ (ಆವಿಯಲ್ಲಿ) 10 - 12 ನಿಮಿಷ ಬೇಯಿಸಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...