ಬುಧವಾರ, ಮಾರ್ಚ್ 8, 2017

Mavinakayi chitranna recipe in Kannada | ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ

Mavinakayi chitranna recipe in Kannada

Mavinakayi chitranna recipe in Kannada | ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ 

ಮಾವಿನಕಾಯಿ ಚಿತ್ರಾನ್ನ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. ಒಂದು ಮಧ್ಯಮ ಗಾತ್ರದ ಮಾವಿನಕಾಯಿ
  3. 1/2 ಕಪ್ ತೆಂಗಿನ ತುರಿ
  4. 1/2 ಟೀಸ್ಪೂನ್ ಸಾಸಿವೆ
  5. 2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
  6. 1 ಟೀಸ್ಪೂನ್ ಉದ್ದಿನ ಬೇಳೆ
  7. 1 ಟೀಸ್ಪೂನ್ ಕಡ್ಲೆಬೇಳೆ
  8. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  9. 5 - 6 ಕರಿಬೇವಿನ ಎಲೆ
  10. 1/4 ಟೀಸ್ಪೂನ್ ಅರಿಶಿನ ಪುಡಿ
  11. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಮಸಾಲೆಗೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 2 - 4 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಮೆಂತೆ
  4. 5 - 6 ಕರಿಬೇವಿನ ಎಲೆ

ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಮಾವಿನಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು, ತುರಿದಿಟ್ಟುಕೊಳ್ಳಿ. ಮಾವಿನಕಾಯಿ ಹುಳಿ ನೋಡಿ ಬೇಕಾದಷ್ಟೇ ಉಪಯೋಗಿಸಿ. 
  3. ಒಂದು ಬಾಣಲೆಯಲ್ಲಿ "ಮಸಾಲೆಗೆ" ಪಟ್ಟಿ ಮಾಡಿದ ಪದಾರ್ಥಗಳನ್ನು (ಒಣ ಮೆಣಸು, ಸಾಸಿವೆ ಮತ್ತು ಮೆಂತೆ) ಮಧ್ಯಮ ಉರಿಯಲ್ಲಿ ಎಣ್ಣೆ ಹಾಕದೆ ಹುರಿಯಿರಿ. 
  4. ಸಾಸಿವೆ ಸಿಡಿದ ಮೇಲೆ, ಕರಿಬೇವಿನ ಎಲೆ ಹಾಕಿ ಹುರಿದು ಸ್ಟವ್ ಆಫ್ ಮಾಡಿ. 
  5. ಹುರಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. 
  6. ನಂತರ ಅದಕ್ಕೆ ತುರಿದ ಮಾವಿನಕಾಯಿ ಮತ್ತು ತೆಂಗಿನ ಕಾಯಿ ಹಾಕಿ ಅರೆಯಿರಿ. ಅರೆದ ಮಸಾಲೆಯನ್ನು ಪಕ್ಕಕ್ಕಿಡಿ. 
  7. ಈಗ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿಕೊಳ್ಳೋಣ. ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
  8. ಕಡಲೆಕಾಯಿ ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
  9. ಸಾಸಿವೆ ಸಿಡಿದ ಕೂಡಲೇ ಕರಿಬೇವಿನ ಎಲೆ, ಅರೆದ ಮಸಾಲೆ  ಮತ್ತು ಅರಿಶಿನ ಪುಡಿ ಹಾಕಿ ಚೆನ್ನಾಗಿ ಕಲಸಿ. ಸ್ಟೋವ್ ಆಫ್ ಮಾಡಿ.
  10. ನಂತರ ಬೇಯಿಸಿದ ಅನ್ನ ಮತ್ತು ಉಪ್ಪು ಸೇರಿಸಿ ಕಲಸಿ..
  11. ಚಪ್ಪಟೆಯಾದ ಸಟ್ಟುಗ ಬಳಸಿ ಚಿತ್ರಾನ್ನವನ್ನು ಕಲಸಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

1 ಕಾಮೆಂಟ್‌:

Related Posts Plugin for WordPress, Blogger...