ಸೋಮವಾರ, ಜುಲೈ 31, 2017

Eerulli gidada thambli in kannada | ಈರುಳ್ಳಿ ಗಿಡದ ತಂಬುಳಿ ಮಾಡುವ ವಿಧಾನ

Eerulli gidada thambli in kannada

Eerulli gidada thambli in kannada | ಈರುಳ್ಳಿ ಗಿಡದ ತಂಬುಳಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಸಣ್ಣ ಕಟ್ಟು ಈರುಳ್ಳಿ ಗಿಡ
  2. 1/2 ಟೀಸ್ಪೂನ್ ಜೀರಿಗೆ
  3. 1/2 ಟೀಸ್ಪೂನ್ ಕಾಳುಮೆಣಸು
  4. 1/2 ಕಪ್ ತೆಂಗಿನತುರಿ
  5. 1 ಕಪ್ ಮೊಸರು
  6. 1 ಒಣ ಮೆಣಸಿನಕಾಯಿ
  7. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  8. 1/4 ಟೀಸ್ಪೂನ್ ಸಾಸಿವೆ
  9. ಉಪ್ಪು ರುಚಿಗೆ ತಕ್ಕಷ್ಟು.

ಈರುಳ್ಳಿ ಗಿಡದ ತಂಬುಳಿ ಮಾಡುವ ವಿಧಾನ:

  1. ಈರುಳ್ಳಿ ಗಿಡವನ್ನು ಆಯ್ದು, ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. 
  3. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಗಿಡವನ್ನು ಹಾಕಿ.
  4. ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
  5. ಹುರಿದ ಪದಾರ್ಥಗಳು ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.  
  6. ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  7. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. 
  8. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ಜುಲೈ 27, 2017

Bili saaru recipe in Kannada | ಬಿಳಿ ಸಾರು ಮಾಡುವ ವಿಧಾನ

Bili saaru recipe in Kannada

Bili saaru recipe in Kannada | ಬಿಳಿ ಸಾರು ಮಾಡುವ ವಿಧಾನ 

ಬಿಳಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಹೆಸರುಬೇಳೆ
  2. 1.5 ಲೀ ನೀರು
  3. 2 ಚಮಚ ಲಿಂಬೆಹಣ್ಣಿನ ರಸ (ರುಚಿಗೆ ತಕ್ಕಂತೆ ಬದಲಾಯಿಸಿ)
  4. ಒಂದು ಚಿಟಿಕೆ ಅರಶಿನ ಪುಡಿ
  5. 1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  3. 1/4 ಟೀಸ್ಪೂನ್ ಸಾಸಿವೆ
  4. 1/4 ಟೀಸ್ಪೂನ್ ಜೀರಿಗೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1/4 ಟೀಸ್ಪೂನ್ ಜೀರಿಗೆ 
  4. ಒಂದು ದೊಡ್ಡ ಚಿಟಿಕೆ ಇಂಗು 
  5. 4 - 5 ಕರಿಬೇವಿನ ಎಲೆ
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಬಿಳಿ ಸಾರು ಮಾಡುವ ವಿಧಾನ:

  1. ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು, ಒಂದೆರಡು ಹನಿ ಎಣ್ಣೆ ಮತ್ತು ಅರಶಿನ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಟೊಮೇಟೊ ಮತ್ತು ಉಪ್ಪು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  3. ತೆಂಗಿನತುರಿ, ಜೀರಿಗೆ,  ಸಾಸಿವೆ ಮತ್ತು ಹಸಿರು ಮೆಣಸಿನ ಕಾಯಿಯನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. 
  4. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೆಸರುಬೇಳೆ ಮತ್ತು ಟೊಮ್ಯಾಟೊಗೆ ಸೇರಿಸಿ. 
  5. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  6. ಸ್ಟವ್ ಆಫ್ ಮಾಡಿದ ಮೇಲೆ ಲಿಂಬೆ ಹಣ್ಣಿನ ರಸ ಸೇರಿಸಿ. 
  7. ಎಣ್ಣೆ, ಒಣಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. 

ಸೋಮವಾರ, ಜುಲೈ 24, 2017

Heerekayi sippe dose recipe in Kannada | ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ

Heerekayi sippe dose recipe in Kannada

Heerekayi sippe dose recipe in Kannada | ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1.5 ಕಪ್ ಕತ್ತರಿಸಿದ ಹೀರೆಕಾಯಿ ಸಿಪ್ಪೆ
  3. 1/4 ಕಪ್ ತೆಂಗಿನ ತುರಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ 
  5. 1/2 ಟೀಸ್ಪೂನ್ ಜೀರಿಗೆ 
  6. 2 ಕೆಂಪು ಮೆಣಸಿನಕಾಯಿ 
  7. ಸಣ್ಣ ಗೋಲಿ ಗಾತ್ರದ ಹುಣಸೆ ಹಣ್ಣು 
  8. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ) 
  9. ಉಪ್ಪು ರುಚಿಗೆ ತಕ್ಕಷ್ಟು

ಹೀರೆಕಾಯಿ ಸಿಪ್ಪೆ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ, ಬೆಲ್ಲ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. 
  3. ನಂತರ ಅದಕ್ಕೆ ಹೀರೆಕಾಯಿ ಸಿಪ್ಪೆ ಹಾಕಿ ಸ್ವಲ್ಪ ತರಿತರಿಯಾಗಿ ಅರೆಯಿರಿ.  
  4. ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ತೆಳುವಾದ ಮಿಲ್ಕ್ ಶೇಕ್ ನಂತಿರಲಿ. 
  5. ದೋಸೆ ಕಲ್ಲು ಅಥವಾ ಹಂಚನ್ನು ಬಿಸಿ ಮಾಡಿ. ಒಂದು ಸೌಟು ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯೊಂದಿಗೆ ಬಡಿಸಿ. 

ಗುರುವಾರ, ಜುಲೈ 20, 2017

Roasted kadlekai chat recipe in Kannada | ಹುರಿದ ಕಡ್ಲೇಕಾಯಿ ಚಾಟ್ ಮಾಡುವ ವಿಧಾನ

Roasted kadlekai chat recipe in Kannada

Roasted kadlekai chat recipe in Kannada | ಹುರಿದ ಕಡ್ಲೇಕಾಯಿ ಚಾಟ್ ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್  ನೆಲಗಡಲೆ ಅಥವಾ ಕಡ್ಲೆಕಾಯಿ
  2. 1 ಸಣ್ಣದಾಗಿ ಕೊಚ್ಚಿದ ಈರುಳ್ಳಿ
  3. 1 ಸಣ್ಣದಾಗಿ ಕೊಚ್ಚಿದ ಟೊಮೆಟೊ
  4. 1 ತುರಿದ ಸಣ್ಣ ಗಾತ್ರದ ಕ್ಯಾರೆಟ್
  5. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ ( ಬೇಕಾದಲ್ಲಿ - ಹೆಚ್ಚಿನ ಖಾರಕ್ಕಾಗಿ)
  7. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
  8. 1/4 ಟೀಸ್ಪೂನ್ ಚಾಟ್ ಮಸಾಲಾ (ಬೇಕಾದಲ್ಲಿ)
  9. ಉಪ್ಪು ರುಚಿಗೆ ತಕ್ಕಷ್ಟು

ಹುರಿದ ಕಡ್ಲೇಕಾಯಿ ಚಾಟ್ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಕಡ್ಲೆಕಾಯಿಯನ್ನು ಗರಿಗರಿಯಾಗುವವರೆಗೆ ಹುರಿಯಿರಿ. 
  2. ಆ ಸಮಯದಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ನೀರು, ಉಪ್ಪು ಮತ್ತು ಇಂಗು ಹಾಕಿ, ಉಪ್ಪು-ಇಂಗಿನ ನೀರು ತಯಾರಿಸಿ. 
  3. ಅದನ್ನು ಹುರಿಯುತ್ತಿರುವ ಕಡ್ಲೆಕಾಯಿಗೆ ಹಾಕಿ ಪುನಃ ಗರಿಗರಿಯಾಗುವವರೆಗೆ ಹುರಿಯಿರಿ. 
  4. ದೊಡ್ಡ ಬಟ್ಟಲಿನಲ್ಲಿ ಸಣ್ಣದಾಗಿ ಕೊಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಹೆಚ್ಚಿದ ಕೊತ್ತಂಬರಿ ಸೊಪ್ಪು , ಹಸಿರು ಮೆಣಸಿನ ಕಾಯಿ (ಬೇಕಾದಲ್ಲಿ) ಮತ್ತು ಟೊಮೆಟೊ ತೆಗೆದುಕೊಳ್ಳಿ. 
  5. ನಂತರ ಹುರಿದ ಕಡ್ಲೇಕಾಯಿ ಅಥವಾ ಶೇಂಗಾ ಸೇರಿಸಿ. 
  6. ಈಗ ಅಚ್ಚ ಖಾರದ ಪುಡಿ, ಉಪ್ಪು ಮತ್ತು ಚಾಟ್ ಮಸಾಲಾ ಸೇರಿಸಿ.
  7. ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.

ಮಂಗಳವಾರ, ಜುಲೈ 18, 2017

Bakery style peda recipe in Kannada | ಬೇಕರಿ ಶೈಲಿಯ ಪೇಡ ಮಾಡುವ ವಿಧಾನ

Bakery style peda recipe in Kannada

Bakery style peda recipe in Kannada | ಬೇಕರಿ ಶೈಲಿಯ ಪೇಡ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹಾಲಿನ ಪುಡಿ
  2. 1 ಕಪ್ ಹಾಲು
  3. 0.25 ಕಪ್ ಮೈದಾ 
  4. 1/3 ಕಪ್ ಸಕ್ಕರೆ
  5. 2 ಟೇಬಲ್ ಚಮಚ ತುಪ್ಪ
  6. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  7. ಒಂದು ದೊಡ್ಡ ಚಿಟಿಕೆ ಕೇಸರಿ (ಬೇಕಾದಲ್ಲಿ)
  8.  ಒಂದು ಚಿಟಿಕೆ ಜಾಯಿಕಾಯಿ ಪುಡಿ (ಬೇಕಾದಲ್ಲಿ)

ಬೇಕರಿ ಶೈಲಿಯ ಪೇಡ ಮಾಡುವ ವಿಧಾನ:

  1. ಒಂದು ನಾನ್ ಸ್ಟಿಕ್ ಕಡಾಯಿಯಲ್ಲಿ ಹಾಲಿನಪುಡಿ, ಸಕ್ಕರೆ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ (ಬೇಕಾದಲ್ಲಿ) ಮತ್ತು ಕೇಸರಿಯನ್ನು (ಬೇಕಾದಲ್ಲಿ)ತೆಗೆದುಕೊಳ್ಳಿ.
  2. ಅದಕ್ಕೆ ಹಾಲು ಹಾಕಿ ಗಂಟಿಲ್ಲದಂತೆ ಕಲಸಿ. 
  3. ನಂತರ ಕಡಾಯಿಯನ್ನು ಸ್ಟವ್ ಮೇಲಿರಿಸಿ, ಮಗುಚುತ್ತಾ ಮೈದಾ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ. ಗಂಟಿಲ್ಲದಂತೆ ಮಗುಚಿ. 
  4. ನಂತರ ನಿರಂತರವಾಗಿ ಮಧ್ಯಮ ಉರಿಯಲ್ಲಿ ಮಗುಚಲು ಪ್ರಾರಂಭಿಸಿ. 
  5. ಸ್ವಲ್ಪ ಗಟ್ಟಿಯಾದ ನಂತರ ತುಪ್ಪ ಹಾಕಿ ಮಗುಚುವುದನ್ನು ಮುಂದುವರೆಸಿ.
  6. ಸ್ವಲ್ಪ ಸಮಯದಲ್ಲಿ ತಳ ಬಿಡಲು ಪ್ರಾರಂಭವಾಗುತ್ತದೆ.  ಮೆತ್ತಗಿನ ಮುದ್ದೆಯಾಗುವವರೆಗೆ ಮಗುಚುವುದನ್ನು ಮುಂದುವರೆಸಿ. ಆಗ ಸ್ಟವ್ ಆಫ್ ಮಾಡಿ. ಸ್ವಲ್ಪ ಮಿಶ್ರಣವನ್ನು ತೆಗೆದು ಉಂಡೆ ಮಾಡಿದಾಗ ಕೈಗೆ ಅಂಟಬಾರದು. 
  7. ಬಿಸಿ ಆರಿದ ಮೇಲೆ ಪೇಡ ಗಳನ್ನು ತಯಾರಿಸಿ. ಪೇಡ ಮಾಡುವಾಗ ಕೈಗೆ ಅಂಟುತ್ತಿದ್ದರೆ ಪುನಃ ಒಲೆಯ ಮೇಲಿಟ್ಟು ಒಂದೆರಡು ನಿಮಿಷ ಮಗುಚಿ. ಬಿಸಿ ಆರಿದ ಮೇಲೆ ಪೇಡ ತಯಾರಿಸಿ. 
  8. ಬಿಸಿ ಸಂಪೂರ್ಣ ಆರಿದ ಮೇಲೆ ಸವಿದು ಆನಂದಿಸಿ. 

ಶುಕ್ರವಾರ, ಜುಲೈ 14, 2017

Halasina beejada saaru recipe in Kannada | ಹಲಸಿನ ಬೀಜದ ಸಾರು ಮಾಡುವ ವಿಧಾನ

Halasina beejada saaru recipe in Kannada

Halasina beejada saaru recipe in Kannada | ಹಲಸಿನ ಬೀಜದ ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 15 - 20 ಹಲಸಿನ ಬೀಜ
  2. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  3. 1 - 2 ಟೀಸ್ಪೂನ್ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
  4. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
  5. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ.

ಮಸಾಲೆಗೆ ಬೇಕಾಗುವ ಪದಾರ್ಥಗಳು (ಅಥವಾ ರಸಂ ಪೌಡರ್ ಬಳಸಬಹುದು):

  1. 2 - 4 ಒಣ ಮೆಣಸಿನಕಾಯಿ 
  2. 2 ಚಮಚ ಕೊತ್ತಂಬರಿ ಬೀಜ ಅಥವಾ ಧನಿಯಾ
  3. 1/2 ಟೀಸ್ಪೂನ್ ಜೀರಿಗೆ
  4. 1/4 ಟೀಸ್ಪೂನ್ ಮೆಂತ್ಯ
  5. 5 - 6 ಕಾಳು ಮೆಣಸು
  6. ಇಂಗು ಒಂದು ಚಿಟಿಕೆ
  7. 1/4 ಕಪ್ ತೆಂಗಿನ ತುರಿ
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ 
  2. 1/2 ಚಮಚ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. ಇಂಗು ಒಂದು ಚಿಟಿಕೆ
  5. 5 - 6 ಕರಿಬೇವಿನ ಎಲೆ
  6. 2 ಟೀಸ್ಪೂನ್ ಅಡುಗೆ ಎಣ್ಣೆ

ಹಲಸಿನ ಬೀಜದ ಸಾರು ಮಾಡುವ ವಿಧಾನ:

  1. ಹಲಸಿನ ಬೀಜವನ್ನು ಸ್ವಲ್ಪ ಜಜ್ಜಿ ಸಿಪ್ಪೆ ತೆಗೆಯಿರಿ. 
  2. ಕುಕ್ಕರ್ ನಲ್ಲಿ ಮೆತ್ತಗಾಗುವವರೆಗೆ ಬೇಯಿಸಿ, ಮಿಕ್ಸಿಯಲ್ಲಿ ಹಾಕಿ ಅರೆದುಕೊಳ್ಳಿ
  3. ಅರೆದ ಹಲಸಿನ ಬೀಜವನ್ನು ಒಂದು ಪಾತ್ರೆಗೆ ಹಾಕಿ. 
  4. ಉಪ್ಪು, ಅರಿಶಿನ ಪುಡಿ, ಹುಣಿಸೆ ರಸ, ಬೆಲ್ಲ ಮತ್ತು ಎರಡು ಕಪ್ ನೀರು ಹಾಕಿ, ಮಗುಚಿ, ಕುದಿಯಲು ಇಡೀ. 
  5. ಅದೇ ಸಮಯದಲ್ಲಿ ತೆಂಗಿನತುರಿ ಬಿಟ್ಟು, ಉಳಿದ ಎಲ್ಲ ಮಸಾಲೆ ಪದಾರ್ಥಗಳನ್ನು ಹುರಿದು (ಬದಲಾಗಿ ರಸಂ ಪೌಡರ್ ಬಳಸಬಹುದು), ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
  6. ಅರೆದ ಮಸಾಲೆಯನ್ನು ಬೇಯುತ್ತಿರುವ ಹಲಸಿನಬೀಜದ ಪೇಸ್ಟ್ ಗೆ ಹಾಕಿ. . 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  8. ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚಎಣ್ಣೆ, ಒಣ ಮೆಣಸು, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ಮಾಡಿ. 
  9. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಜುಲೈ 12, 2017

Halasina hannina gatti and kadubu recipe in Kannada | ಹಲಸಿನ ಹಣ್ಣಿನ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

Halasina hannina gatti recipe in Kannada

Halasina hannina gatti and kadubu recipe in Kannada | ಹಲಸಿನ ಹಣ್ಣಿನ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

ಹಲಸಿನ ಹಣ್ಣಿನ ಗಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಕಪ್ ಹಲಸಿನ ಹಣ್ಣು 
  2. 0.5 ಕಪ್ ತೆಂಗಿನ ತುರಿ 
  3. 1 ಕಪ್ ಅಕ್ಕಿ
  4. 1/4 ಕಪ್ ಬೆಲ್ಲ (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  5. ಉಪ್ಪು ರುಚಿಗೆ ತಕ್ಕಷ್ಟು. 
  6. ಬಾಳೆಎಲೆ

ಹಲಸಿನ ಹಣ್ಣಿನ ಕಡುಬಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಕಪ್ ಹಲಸಿನ ಹಣ್ಣು
  2. 1 ಕಪ್ ಅಕ್ಕಿ
  3. ಉಪ್ಪು ರುಚಿಗೆ ತಕ್ಕಷ್ಟು.

ಹಲಸಿನ ಹಣ್ಣಿನ ಗಟ್ಟಿ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ. 
  2. ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಕೊಳ್ಳಿ. 
  3. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು, ತೆಂಗಿನತುರಿ, ಬೆಲ್ಲ ಮತ್ತು ಉಪ್ಪು ಹಾಕಿ ಸ್ವಲ್ಪ ತರಿ ತರಿಯಾಗಿ ಅರೆಯಿರಿ. ಗಮನಿಸಿ ನೀರು ಸೇರಿಸಬೇಡಿ. 
  4. ಹಿಟ್ಟು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ತೆಳು ಅನಿಸಿದಲ್ಲಿ , ಸ್ವಲ್ಪ ರವೇ ಸಹ ಸೇರಿಸಬಹುದು. 
  5. ಈಗ ಬಾಳೆಎಲೆ ತೆಗೆದುಕೊಂಡು, ಒಂದು ಹಿಡಿ ಹಿಟ್ಟನ್ನು ಹಾಕಿ, ಬಾಳೆಎಲೆಯನ್ನು ಪ್ಯಾಕೆಟ್ ನಂತೆ ಮಡಚಿ. 
  6. ನಂತರ 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ತುಪ್ಪ, ಜೇನುತುಪ್ಪ, ಕಾಯಿಹಾಲು ಅಥವಾ ಚಟ್ನಿಯೊಂದಿಗೆ ಬಡಿಸಿ.

ಹಲಸಿನ ಹಣ್ಣಿನ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿ. 
  2. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ಉಪ್ಪು ಹಾಕಿ ತರಿ ತರಿಯಾಗಿ ಅರೆಯಿರಿ. ಈ ವಿಧಾನದಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಬಹುದು. 
  3. ಹಿಟ್ಟು ಇಡ್ಲಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು. 
  4. ಈಗ ಅಂಚಿರುವ ಬಟ್ಟಲಿನಲ್ಲಿ ಅಥವಾ ತಟ್ಟೆಯಲ್ಲಿ ಹಿಟ್ಟನ್ನು ಹಾಕಿ.
  5. 30 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬೇಕಾದ ಆಕಾರಕ್ಕೆ ಕತ್ತರಿಸಿ. ಬಿಸಿಯಾಗಿರುವಾಗಲೇ ತುಪ್ಪ ಮತ್ತು ತೆಂಗಿನಕಾಯಿ+ಕೊತ್ತಂಬರಿ ಬೀಜ ದ ಚಟ್ನಿಯೊಂದಿಗೆ ಬಡಿಸಿ.

ಮಂಗಳವಾರ, ಜುಲೈ 11, 2017

Paduvalakai jeerige kootu recipe in Kannada | ಪಡುವಲಕಾಯಿ ಕಲಾಸು ಮಾಡುವ ವಿಧಾನ

Paduvalakai kalasu recipe in Kannada

Paduvalakai jeerige kootu recipe in Kannada | ಪಡುವಲಕಾಯಿ  ಕಲಾಸು ಮಾಡುವ ವಿಧಾನ

ಪಡುವಲಕಾಯಿ ಕೂಟು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಣ್ಣ ಗಾತ್ರದ ಪಡುವಲಕಾಯಿ 
  2. 1 - 2 ಹಸಿರು ಮೆಣಸಿನಕಾಯಿ 
  3. ಒಂದು ಚಿಟಿಕೆ ಅರಶಿನ ಪುಡಿ 
  4. 1 ನಿಂಬೆ ಗಾತ್ರದ ಬೆಲ್ಲ
  5. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ 
  2. 2 ಟೀಸ್ಪೂನ್ ಅಕ್ಕಿ
  3. 1/2 ಟೀಸ್ಪೂನ್ ಜೀರಿಗೆ 
  4. 1 ಹಸಿರುಮೆಣಸಿನಕಾಯಿ (ಬೇಕಾದಲ್ಲಿ)

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಪಡುವಲಕಾಯಿ ಅಥವಾ ಪಟ್ಲಕಾಯಿ ಕಲಾಸು ಮಾಡುವ ವಿಧಾನ:

  1. ಪಡುವಲಕಾಯಿಯನ್ನು ಹೊರಗಿನ ಸಿಪ್ಪೆ ಹೆರೆಸಿ, ತೊಳೆದು ಸಣ್ಣದಾಗಿ ಕತ್ತರಿಸಿ. ನಡುವಿನ ಬೀಜ ಇರುವ ಭಾಗವನ್ನು ಹಾಕುವುದು ಬೇಡ. 
  2. ಕತ್ತರಿಸಿದ ಪಡುವಲಕಾಯಿ, ಅರಶಿನ, ಉಪ್ಪು, ಸೀಳಿದ ಹಸಿರು ಮೆಣಸಿನಕಾಯಿ, ಬೆಲ್ಲ ಮತ್ತು ನೀರು ಹಾಕಿ ಬೇಯಿಸಿ. 
  3. ಜೀರಿಗೆ, ತೆಂಗಿನ ತುರಿ ಮತ್ತು ತೊಳೆದ ಅಕ್ಕಿಯನ್ನು ಮಿಕ್ಸಿಯಲ್ಲಿ ಅರೆಯಿರಿ. ಬೇಕಾದಲ್ಲಿ ಒಂದು ಹಸಿರುಮೆಣಸಿನಕಾಯಿ ಸೇರಿಸಬಹುದು. ಆದರೆ ಈ ಸಾಂಬಾರ್ ಕಡಿಮೆ ಖಾರವಿದ್ದು ಸ್ವಲ್ಪ ಸಿಹಿಯಾಗಿದ್ದರೆ ಚೆನ್ನ. 
  4. ಬೇಯಿಸಿದ ಪಡುವಲಕಾಯಿಗೆ ಅರೆದ ಮಸಾಲೆ ಹಾಕಿ.
  5. ಬೇಕಾದಲ್ಲಿ ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ. 
  6. ಈ ಸಾಂಬಾರ್ ಸ್ವಲ್ಪ ದಪ್ಪ ಇರಬೇಕು. ಒಂದು ಕುದಿ ಕುದಿಸಿ, ಸ್ಟವ್ ಆಫ್ ಮಾಡಿ.
  7. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ಜುಲೈ 10, 2017

Ananas palya recipe in Kannada | ಅನಾನಸ್ ಪಲ್ಯ ಮಾಡುವ ವಿಧಾನ

Ananas palya recipe in Kannada

Ananas palya recipe in Kannada | ಅನಾನಸ್ ಪಲ್ಯ ಮಾಡುವ ವಿಧಾನ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್)

  1. 1 ಸಣ್ಣ ಗಾತ್ರದ ಅನಾನಸ್
  2. 1 ದೊಡ್ಡ ನಿಂಬೆ ಗಾತ್ರದ ಬೆಲ್ಲ
  3. 4 ಟೀಸ್ಪೂನ್ ಅಡುಗೆ ಎಣ್ಣೆ
  4. 1/2 ಟೀಸ್ಪೂನ್ ಸಾಸಿವೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1/4 ಟೀಸ್ಪೂನ್ ಅರಶಿನ ಪುಡಿ
  8. 4-5 ಕರಿ ಬೇವಿನ ಎಲೆ
  9. 1-2 ಹಸಿ ಮೆಣಸಿನ ಕಾಯಿ
  10. 1 ಟೀಸ್ಪೂನ್ ಸಾರಿನ ಹುಡಿ (1/2 ಟೀಸ್ಪೂನ್ ಅಚ್ಚ ಖಾರದ ಪುಡಿ+ 1/2 ಟೀಸ್ಪೂನ್ ಧನಿಯಾ ಪುಡಿ+ 1/4 ಟೀಸ್ಪೂನ್ ಜೀರಿಗೆ ಪುಡಿ)
  11. 1/4 ಕಪ್ ತೆಂಗಿನ ತುರಿ
  12. ಉಪ್ಪು ರುಚಿಗೆ ತಕ್ಕಷ್ಟು.

ಅನಾನಸ್ ಪಲ್ಯ ಮಾಡುವ ವಿಧಾನ:

  1. ಅನಾನಸನ್ನು ಸಿಪ್ಪೆ ತೆಗೆದು, ಸಣ್ಣದಾಗಿ ಕತ್ತರಿಸಿ. 
  2. ಬಾಣಲೆ ಬಿಸಿ ಮಾಡಿ, ಎಣ್ಣೆ, 1/2 ಚಮಚ ಸಾಸಿವೆ, ಉದ್ದಿನ ಬೇಳೆ ಮತ್ತು ಕಡ್ಲೆಬೇಳೆ ಹಾಕಿ.
  3. ಸಾಸಿವೆ ಸಿಡಿದ  ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ.
  4. ಈಗ ಕತ್ತರಿಸಿದ ಅನಾನಸನ್ನು ಹಾಕಿ. 2 ನಿಮಿಷ ಹುರಿಯಿರಿ. ಅರಿಶಿನ ಪುಡಿ, ಉಪ್ಪು, ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ. ಕುದಿಯಲು ಶುರುವಾದ ಕೂಡಲೇ ಉರಿ ಕಡಿಮೆ ಮಾಡಿ. ಮುಚ್ಚಳವನ್ನು ಮುಚ್ಚಿ ಬೇಯಿಸಿ. ಆಗಾಗ್ಯೆ ಮಗುಚುತ್ತಾ ಇರಿ. 
  5. ಅನಾನಸ್ ಬೆಂದ ಕೂಡಲೇ ಸಾರಿನ ಪುಡಿ ಮತ್ತು ತೆಂಗಿನತುರಿ ಸೇರಿಸಿ, ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಬುಧವಾರ, ಜುಲೈ 5, 2017

Southe gatti recipe in Kannada | ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

Southe gatti recipe in Kannada

Southe gatti recipe in Kannada | ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಸಣ್ಣಗೆ ಹೆಚ್ಚಿದ ಅಥವಾ ತುರಿದ ಸೌತೆಕಾಯಿ
  2. 0.5 - 1 ಕಪ್ ತೆಂಗಿನ ತುರಿ
  3. 1 ಕಪ್ ಅಕ್ಕಿ (ನಾನು ದೋಸೆ ಅಕ್ಕಿ ಉಪಯೋಗಿಸಿದ್ದೇನೆ)
  4. ಉಪ್ಪು ರುಚಿಗೆ ತಕ್ಕಷ್ಟು.
  5. ಬಾಳೆಎಲೆ

ಸೌತೆಕಾಯಿ ಗಟ್ಟಿ ಅಥವಾ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಸಿದು, ನೀರಾರಲು ಬಿಡಿ. 
  2. ಬಾಳೆಎಲೆಯನ್ನು ತೊಳೆದು, ಆವಿಯಲ್ಲಿ ಅಥವಾ ಸ್ಟವ್ ಮೇಲೆ ಹಿಡಿದು ಬಾಡಿಸಿಕೊಳ್ಳಿ. 
  3. ಅಕ್ಕಿ ಒಣಗಿದ ಮೇಲೆ, ಮಿಕ್ಸಿಯಲ್ಲಿ ಸಣ್ಣನೆ ಪುಡಿ ಮಾಡಿಕೊಳ್ಳಿ. ಅಕ್ಕಿ ಪುಡಿಯು ಸ್ವಲ್ಪ ತರಿ ತರಿಯಿರುವ ಅಕ್ಕಿ ಹಿಟ್ಟಿನಂತಿರಲಿ.
  4. ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆದು ಅಕ್ಕಿ ಹಿಟ್ಟಿಗೆ ಸೇರಿಸಿ. 
  5. ನಂತರ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅಥವಾ ತುರಿದು ಅಕ್ಕಿ ಹಿಟ್ಟಿಗೆ ಸೇರಿಸಿ. 
  6. ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಉಪ್ಪನ್ನು ಹಾಕಿ. 
  7. ಎಲ್ಲವನ್ನು ಚೆನ್ನಾಗಿ ಕಲಸಿ. ಹಿಟ್ಟು ಸುಲಭವಾಗಿ ಬೀಳುವಷ್ಟು ನೀರಾಗಿರಬೇಕು.  ಆದರೆ ಕೈಗಳಿಂದ ತೆಗೆದು ಹಾಕುವಷ್ಟು ಗಟ್ಟಿಯಾಗಿರಬೇಕು.   
  8. ಈಗ ಬಾಳೆಎಲೆ ತೆಗೆದುಕೊಂಡು, ಒಂದು ಹಿಡಿ ಹಿಟ್ಟನ್ನು ಹಾಕಿ, ಬಾಳೆಎಲೆಯನ್ನು ಪ್ಯಾಕೆಟ್ ನಂತೆ ಮಡಚಿ.
  9. 20 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ.

Related Posts Plugin for WordPress, Blogger...