ಸೋಮವಾರ, ಅಕ್ಟೋಬರ್ 30, 2017

Shenga or Kadlekai chutney recipe in Kannada | ಶೇಂಗಾ ಚಟ್ನಿ ಮಾಡುವ ವಿಧಾನ

Shenga or Kadlekai chutney recipe in Kannada

Shenga or Kadlekai chutney recipe in Kannada |  ಶೇಂಗಾ ಚಟ್ನಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ
  2. 2-4 ಒಣ ಮೆಣಸಿನಕಾಯಿ
  3. 3 - 4 ಬೇಳೆ ಬೆಳ್ಳುಳ್ಳಿ 
  4. 3 - 4 ಕರಿಬೇವಿನ ಎಲೆ
  5. 1/4 ಕಪ್ ತೆಂಗಿನ ತುರಿ
  6. ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣ ಮೆಣಸಿನಕಾಯಿ ಅಥವಾ ಹಸಿ ಮೆಣಸಿನಕಾಯಿ
  3. 3 - 4 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಶೇಂಗಾ ಚಟ್ನಿ ಮಾಡುವ ವಿಧಾನ:

  1. ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಅರ್ಧ ಕಪ್ ಶೇಂಗಾ ಅಥವಾ ನೆಲಗಡಲೆ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. (ಗಮನಿಸಿ, ಶೇಂಗಾ ಮತ್ತು ತೆಂಗಿನ ತುರಿಯ ಪ್ರಮಾಣವನ್ನು ನಿಮ್ಮಿಷ್ಟದಂತೆ ಬದಲಾಯಿಸಬಹುದು.) 
  2. ನೆಲಗಡಲೆ ಕಂದು ಬಣ್ಣಕ್ಕೆ ತಿರುಗಿ, ಗರಿ-ಗರಿಯಾದಾಗ ಒಣಮೆಣಸು ಮತ್ತು ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಒಂದೆರಡು ನಿಮಿಷ ಹುರಿಯಿರಿ. 
  3. ಕೊನೆಯಲ್ಲಿ ಕರಿಬೇವು ಮತ್ತು ತೆಂಗಿನ ತುರಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ. 
  4. ಉಪ್ಪು, ಹುಣಿಸೇಹಣ್ಣು ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆಯಿರಿ. 
  5. ಅದನ್ನು ಒಂದು ಬಟ್ಟಲಿಗೆ ಹಾಕಿ. ಈ ಚಟ್ನಿ ಸ್ವಲ್ಪ ತೆಳ್ಳಗಿರಬೇಕು. ಅಗತ್ಯವಿದ್ದಷ್ಟು ನೀರು ಸೇರಿಸಿ. 
  6. ಎಣ್ಣೆ, ಸಾಸಿವೆ, ಒಣಮೆಣಸು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

ಗುರುವಾರ, ಅಕ್ಟೋಬರ್ 26, 2017

Bili holige recipe in Kannada | ಬಿಳಿ ಹೋಳಿಗೆ ಮಾಡುವ ವಿಧಾನ

Bili holige recipe in Kannada

Bili holige recipe in Kannada | ಬಿಳಿ ಹೋಳಿಗೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು (8 ಚಪಾತಿ ಗಾಗುವಷ್ಟು)
  2. 4 ಟೇಬಲ್ ಚಮಚ ಅಡುಗೆ ಎಣ್ಣೆ
  3. ಉಪ್ಪು ರುಚಿಗೆ ತಕ್ಕಷ್ಟು.

ತುಂಬಿಸಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿಹಿಟ್ಟು
  2. 2 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ, ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  3. 1 ಟೀಸ್ಪೂನ್ಎಣ್ಣೆ
  4. ಉಪ್ಪು ರುಚಿಗೆ ತಕ್ಕಷ್ಟು.

ಬಿಳಿ ಹೋಳಿಗೆ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು ಮತ್ತು ಉಪ್ಪನ್ನು ತೆಗೆದುಕೊಳ್ಳಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. 
  3. ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಪುನಃ ಕಲಸಿ, ಮುಚ್ಚಿಡಿ. 
  4. ಒಂದು ಬಾಣಲೆಯಲ್ಲಿ ನೀರು, ಎಣ್ಣೆ ಮತ್ತು ಉಪ್ಪನ್ನು ಹಾಕಿ ಕುದಿಯಲು ಇಡಿ. 
  5. ಕುದಿಯಲು ಪ್ರಾರಂಭವಾದ ಕೂಡಲೇ ಅಕ್ಕಿಹಿಟ್ಟನ್ನು ಹಾಕಿ ಒಂದೆರಡು ನಿಮಿಷ ಮಗುಚಿ. 
  6. ಸ್ಟವ್ ಆಫ್ ಮಾಡಿ. ಬಿಸಿ ಆರುವವರೆಗೆ ಮುಚ್ಚಿಡಿ. 
  7. ಬಿಸಿ ಆರಿದ ಮೇಲೆ ಕೈಗೆ ಎಣ್ಣೆ ಮುಟ್ಟಿಸಿಕೊಂಡು ಚೆನ್ನಾಗಿ ನಾದಿ. ಗಮನಿಸಿ ಹಿಟ್ಟು ಮೃದುವಾಗಿರಬೇಕು. 
  8. ಈಗ ಬಿಳಿ ಹೋಳಿಗೆ ಮಾಡಲು, ಎಣ್ಣೆ ಅಥವಾ ಹಿಟ್ಟನ್ನು ಮುಟ್ಟಿಕೊಂಡು, ಒಂದುಸಣ್ಣನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಚಪ್ಪಟೆ ಮಾಡಿ. ಅದರೊಳಗೆ ಒಂದು ಅಕ್ಕಿ ಹಿಟ್ಟಿನ ಉಂಡೆಯನ್ನು ಇರಿಸಿ.
  9. ತುದಿಗಳನ್ನು ಒಟ್ಟಿಗೆ ತಂದು ರವೆಯನ್ನು ಒಳಗೆ ಸೇರಿಸಿ.
  10. ಸಾಕಷ್ಟು ಎಣ್ಣೆ ಅಥವಾ ಗೋಧಿ ಹಿಟ್ಟನ್ನು ಬಳಸಿ ಅಕ್ಕಿ ಹಿಟ್ಟು ಸೇರಿಸಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
  11. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಹೋಳಿಗೆಯನ್ನು ತವಾ ಮೇಲೆ ಹಾಕಿ. 
  12. ಎರಡು ಬದಿ ಕಾಯಿಸಿ. ಬೇಕಾದಲ್ಲಿ ಕಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಯಾವುದೇ ಗೊಜ್ಜು ಅಥವಾ ಸೀಕರಣೆ ಯೊಂದಿಗೆ ಬಡಿಸಿ.

ಶುಕ್ರವಾರ, ಅಕ್ಟೋಬರ್ 20, 2017

Kara sev mixture recipe in Kannada | ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ

Kara sev mixture recipe in Kannada

Kara sev mixture recipe in Kannada | ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ

ವಿಡಿಯೋ ವೀಕ್ಷಿಸಲು ಈ ಚಿತ್ರದ ಮೇಲೆ ಕ್ಲಿಕ್ಕಿಸಿ

ಸೇವ್ ಮಾಡಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡ್ಲೆಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. 1/2 ಟೀಸ್ಪೂನ್ ಓಮ ಕಾಳು ಅಥವಾ ಅಜವೈನ್
  4. 1/2 ಟೀಸ್ಪೂನ್ ಉಪ್ಪು 
  5. ದೊಡ್ಡ ಚಿಟಿಕೆ ಇಂಗು
  6. 1 ಟೇಬಲ್ ಚಮಚ ಬಿಸಿ ಎಣ್ಣೆ
  7. ಎಣ್ಣೆ ಖಾರ ಸೇವ್ ಕಾಯಿಸಲು

ಮಿಕ್ಸ್ಚರ್ ಮಾಡಲು ಬೇಕಾಗುವ ಪದಾರ್ಥಗಳು:

  1. 4 ಟೇಬಲ್ ಚಮಚ ಕಡಲೆಕಾಯಿ ಅಥವಾ ಶೇಂಗಾ
  2. 4 ಟೇಬಲ್ ಚಮಚ ಹರಿಗಡಲೇ ಅಥವಾ ಪುಟಾಣಿ
  3. 1 ಎಸಳು ಕರಿಬೇವು
  4. 1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  5. 1 ಟೀಸ್ಪೂನ್ ಎಣ್ಣೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಂತೆ 
  7. 7 - 8 ಗೋಡಂಬಿ (ಬೇಕಾದಲ್ಲಿ)
  8. 1 ಟೇಬಲ್ ಚಮಚ ಒಣಗಿದ ತೆಂಗಿನಕಾಯಿ ಚೂರುಗಳು (ಬೇಕಾದಲ್ಲಿ)

ಖಾರ ಸೇವ್ ಮಿಕ್ಸ್ಚರ್ ಮಾಡುವ ವಿಧಾನ:

  1. ಓಮ ಅಥವಾ ಅಜವೈನವನ್ನು ಜಜ್ಜಿ ಸಣ್ಣ ಪುಡಿ ಮಾಡಿ. 
  2. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಜಜ್ಜಿದ ಓಮ ಮತ್ತು ಉಪ್ಪನ್ನು ಹಾಕಿ. 
  3. 1 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ. 
  4. ಸ್ವಲ್ಪ ಸ್ವಲ್ಪ ನೀರು ಹಾಕಿ ದಪ್ಪ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಮೆತ್ತಗಿರಲಿ. 
  5. ಸಣ್ಣ ಸಣ್ಣ ತೂತುಗಳಿರುವ ಸೇವ್ ಮಾಡುವ ಅಚ್ಚಿಗೆ ಹಿಟ್ಟನ್ನು ಹಾಕಿ. 
  6.  ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬಿಸಿ ಎಣ್ಣೆಗೆ ನೇರವಾಗಿ ಒತ್ತಿ. 
  7. ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಬಿಸಿ ಆರಿದ ಮೇಲೆ ಸ್ವಲ್ಪ ಪುಡಿ ಮಾಡಿಟ್ಟುಕೊಳ್ಳಿ. 
  8. ಇನ್ನೊಂದು ಬಾಣಲೆಯಲ್ಲಿ ನೆಲಗಡಲೆ ಅಥವಾ ಶೇಂಗಾವನ್ನು ಹುರಿಯಿರಿ. ಕರಿಬೇವನ್ನು ಸೇರಿಸಿ ಹುರಿಯಿರಿ. 
  9. ನೆಲಗಡಲೆ ಹುರಿದ ಮೇಲೆ ಹುರಿಗಡಲೆ ಮತ್ತು ಅಚ್ಚಖಾರದ ಪುಡಿ ಸೇರಿಸಿ, ಸ್ಟವ್ ಆಫ್ ಮಾಡಿ. 
  10. ಒಮ್ಮೆ ಮಗುಚಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಂದು ಚಿಟಿಕೆ ಉಪ್ಪು ಸಾಕಾಗಬಹುದು. 
  11. ಇದನ್ನು ಪುಡಿ ಮಾಡಿದ ಸೇವ್ ಗೆ ಸೇರಿಸಿ. ಚೆನ್ನಾಗಿ ಕಲಸಿ. 

ಮಂಗಳವಾರ, ಅಕ್ಟೋಬರ್ 17, 2017

Chiroti recipe in Kannada | ಚಿರೋಟಿ ಮಾಡುವ ವಿಧಾನ

Chiroti recipe in Kannada

Chiroti recipe in Kannada | ಚಿರೋಟಿ ಮಾಡುವ ವಿಧಾನ 

Chiroti video

ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೈದಾ ಹಿಟ್ಟು 
  2. 1/4 ಕಪ್ ಚಿರೋಟಿ ರವೇ 
  3. 1  ಟೇಬಲ್ ಚಮಚ ತುಪ್ಪ (ಹೆಚ್ಚು ಗರಿಗರಿ ಬೇಕಾದಲ್ಲಿ ಹೆಚ್ಚು ತುಪ್ಪ ಹಾಕಿ)
  4. ಉಪ್ಪು ರುಚಿಗೆ ತಕ್ಕಷ್ಟು
  5. ಸಕ್ಕರೆ ಪುಡಿ ಕೊನೆಯಲ್ಲಿ ಉದುರಿಸಲು
  6. ಸಿಹಿ ಹಾಲು ಅಥವಾ ಬಾದಾಮಿ ಹಾಲು (ಬೇಕಾದಲ್ಲಿ)
  7. ಕರಿಯಲು ಎಣ್ಣೆ

ಹಿಟ್ಟು ಮತ್ತು ತುಪ್ಪದ ಪೇಸ್ಟ್ ಗೆ ಬೇಕಾಗುವ ಪದಾರ್ಥಗಳು:

  1. 3 ಟೇಬಲ್ ಚಮಚ ಅಕ್ಕಿಹಿಟ್ಟು ಅಥವಾ ಮೈದಾ ಹಿಟ್ಟು ಅಥವಾ ಕಾರ್ನ್ ಫ್ಲೋರ್
  2. 3 ಟೇಬಲ್ ಚಮಚ ತುಪ್ಪ ಅಥವಾ ಪೇಸ್ಟ್ ಮಾಡಲು ಬೇಕಾದಷ್ಟು

ಚಿರೋಟಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಚಿರೋಟಿ ರವೇ, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಟ್ಟಿಯಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮುಚ್ಚಳ ಮುಚ್ಚಿ ೩೦ ನಿಮಿಷ ನೆನೆಯಲು ಬಿಡಿ. 
  3. ನಂತ್ರ ೫ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ. 
  4. ಅಕ್ಕಿಹಿಟ್ಟು ಮತ್ತು ತುಪ್ಪದ ಪೇಸ್ಟ್ ಮಾಡಿಕೊಳ್ಳಿ. ಅಕ್ಕಿಹಿಟ್ಟು ನಯವಾಗಿರಬೇಕು. ಇಲ್ಲವಾದಲ್ಲಿ  ಮೈದಾ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಬಳಸಿ. 
  5. ಎಲ್ಲ ಉಂಡೆಗಳನ್ನು ಲಟ್ಟಿಸಿಟ್ಟುಕೊಳ್ಳಿ. 
  6. ನಂತರ ಲಟ್ಟಿಸಿದ ಒಂದು ಚಪಾತಿಯ ಮೇಲೆ ಹಿಟ್ಟು ಮತ್ತು ತುಪ್ಪದ ಪೇಸ್ಟ್ ಹಚ್ಚಿ. ಇನ್ನೊಂದು ಚಪಾತಿಯನ್ನಿಡಿ. ಪುನಃ ಪೇಸ್ಟ್ ಹಚ್ಚಿ. ಹೀಗೆ ೫ ಚಪಾತಿಗಳನ್ನಿಟ್ಟು ಪೇಸ್ಟ್ ಹಚ್ಚಿ. 
  7. ಆಮೇಲೆ ಅವುಗಳನ್ನು ಸುರುಳಿಯಾಕಾರಕ್ಕೆ ಸುತ್ತಿ. 
  8. ಚಾಕುವಿನಿಂದ ಏಳೆಂಟು ತುಂಡುಗಳಾಗಿ ಕತ್ತರಿಸಿ. ೧೫ ನಿಮಿಷ ಬಿಡಿ. 
  9. ನಂತ್ರ ಪೂರಿಯಷ್ಟು ದೊಡ್ಡ ಚಿರೋಟಿ ಲಟ್ಟಿಸಿ. 
  10. ಬಿಸಿಯಾದ ಎಣ್ಣೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. 
  11. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು, ಮೇಲಿನಿಂದ ಸಕ್ಕರೆ ಪುಡಿಯನ್ನುಉದುರಿಸಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ. 
  12. ಸಕ್ಕರೆ ಪಾಕವನ್ನು ಸಹ ಹಾಕಬಹುದು. ಇಲ್ಲವೇ ಹಾಲಿನೊಂದಿಗೆ ಬಡಿಸಿ. 

ಸೋಮವಾರ, ಅಕ್ಟೋಬರ್ 16, 2017

Kara sev recipe in Kannada | ಖಾರ ಸೇವ್ ಮಾಡುವ ವಿಧಾನ

Kara sev recipe in Kannada

Kara sev recipe in Kannada | ಖಾರ ಸೇವ್ ಮಾಡುವ ವಿಧಾನ

ವಿಡಿಯೋ ವೀಕ್ಷಿಸಲು ಈ ಚಿತ್ರದ ಮೇಲೆ ಕ್ಲಿಕ್ಕಿಸಿ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡ್ಲೆಹಿಟ್ಟು
  2. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  3. 1/2 ಟೀಸ್ಪೂನ್ ಓಮ ಕಾಳು ಅಥವಾ ಅಜವೈನ್
  4. 1/2 ಟೀಸ್ಪೂನ್ ಉಪ್ಪು 
  5. ದೊಡ್ಡ ಚಿಟಿಕೆ ಇಂಗು
  6. 1 ಟೇಬಲ್ ಚಮಚ ಬಿಸಿ ಎಣ್ಣೆ
  7. ಎಣ್ಣೆ ಖಾರ ಸೇವ್ ಕಾಯಿಸಲು

ಖಾರ ಸೇವ್ ಮಾಡುವ ವಿಧಾನ:

  1. ಓಮ ಅಥವಾ ಅಜವೈನವನ್ನು ಜಜ್ಜಿ ಸಣ್ಣ ಪುಡಿ ಮಾಡಿ. 
  2. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು, ಜಜ್ಜಿದ ಓಮ ಮತ್ತು ಉಪ್ಪನ್ನು ಹಾಕಿ. 
  3. 1 ಟೇಬಲ್ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ. 
  4. ಸ್ವಲ್ಪ ಸ್ವಲ್ಪ ನೀರು ಹಾಕಿ ದಪ್ಪ ಪೇಸ್ಟ್ ನಂತಹ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಮೆತ್ತಗಿರಲಿ. 
  5. ಸಣ್ಣ ಸಣ್ಣ ತೂತುಗಳಿರುವ ಸೇವ್ ಮಾಡುವ ಅಚ್ಚಿಗೆ ಹಿಟ್ಟನ್ನು ಹಾಕಿ. 
  6.  ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬಿಸಿ ಎಣ್ಣೆಗೆ ನೇರವಾಗಿ ಒತ್ತಿ. 
  7. ಮಧ್ಯಮ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ.

ಶುಕ್ರವಾರ, ಅಕ್ಟೋಬರ್ 13, 2017

coconut and milk powder ladoo recipe in Kannada | ಕೊಬ್ಬರಿ ಮತ್ತು ಹಾಲಿನಪುಡಿಯ ಲಾಡೂ ಮಾಡುವ ವಿಧಾನ

Coconut and milk powder ladoo recipe in Kannada

Coconut and milk powder ladoo recipe in Kannada | ಕೊಬ್ಬರಿ ಮತ್ತು ಹಾಲಿನಪುಡಿಯ ಲಾಡೂ ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹಾಲಿನ ಪುಡಿ
  2. 3/4 ಕಪ್ ಕೊಬ್ಬರಿ ಪುಡಿ ಅಥವಾ ತೆಂಗಿನತುರಿ 
  3. 1/4 ಕಪ್ ಕೊಬ್ಬರಿ ಪುಡಿ ಉದುರಿಸಲು
  4. 1/2 - 1/3 ಕಪ್ ಸಕ್ಕರೆ
  5. 1/3 ಕಪ್ ಹಾಲು
  6. 1 ಟೇಬಲ್ ಚಮಚ ತುಪ್ಪ
  7. 1 ಟೇಬಲ್ ಚಮಚ ಕತ್ತರಿಸಿದ ಗೋಡಂಬಿ
  8. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ


ಕೊಬ್ಬರಿ ಮತ್ತು ಹಾಲಿನಪುಡಿಯ ಲಾಡೂ ಮಾಡುವ ವಿಧಾನ:

  1. ಒಂದು ನಾನ್ ಸ್ಟಿಕ್ ಕಡಾಯಿಯಲ್ಲಿ ತುಪ್ಪ, ಹಾಲು ಮತ್ತು ಸಕ್ಕರೆ ತೆಗೆದುಕೊಂಡು ಬಿಸಿ ಮಾಡಲು ಇಡಿ. ಒಮ್ಮೆ ಮಗುಚಿ. 
  2. ಕೂಡಲೇ ಹಾಲಿನಪುಡಿ ಸೇರಿಸಿ ಮಂದ ಉರಿಯಲ್ಲಿ ಮಗುಚುತ್ತಾ ಇರಿ.
  3. ಹಾಲಿನಪುಡಿ ಗಂಟಿಲ್ಲದಂತೆ ಕರಗಿ ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ಕೊಬ್ಬರಿ ಪುಡಿ ಹಾಕಿ. ತೆಂಗಿನತುರಿ ಹಾಕುವುದಾದಲ್ಲಿ ಮಿಕ್ಸಿಯಲ್ಲಿ ಪುಡಿ ಮಾಡಿ ಹಾಕಿ. 
  4. ಸಣ್ಣ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ.
  5. ಸ್ವಲ್ಪ ಸಮಯದಲ್ಲಿ ಮೆತ್ತಗಿನ ಮುದ್ದೆಯಾಗುತ್ತದೆ. 
  6. ಗೋಡಂಬಿ ಮತ್ತು ಏಲಕ್ಕಿ ಪುಡಿ ಹಾಕಿ  ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  7. ಬಿಸಿ ಆರಿದ ಮೇಲೆ ಸ್ವಲ್ಪ ಮಿಶ್ರಣವನ್ನು ತೆಗೆದು ಉಂಡೆ ಮಾಡಿ. ನಂತ್ರ ಕೊಬ್ಬರಿ ಪುಡಿಯಲ್ಲಿ ಹೊರಳಾಡಿಸಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ. 
  8. ಹೆಚ್ಚು ದಿನ ಇಡಬೇಕಾದಲ್ಲಿ ಫ್ರಿಡ್ಜ್ ನಲ್ಲಿಡಿ. 

ಗುರುವಾರ, ಅಕ್ಟೋಬರ್ 12, 2017

Basale soppu sambar recipe in Kannada | ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ

Basale soppu sambar recipe in Kannada

Basale soppu sambar recipe in Kannada | ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಟ್ಟು ಬಸಳೆ ಸೊಪ್ಪು 
  2. 1/4 ಕಪ್ ಅಲಸಂದೆ ಕಾಳು ಅಥವಾ ಹುರಿದ ಹುರುಳಿಕಾಳು
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಕೊತ್ತಂಬರಿ ಬೀಜ
  4. 1/2 ಟೀಸ್ಪೂನ್ ಸಾಸಿವೆ
  5. 2 ಬೇಳೆ ಬೆಳ್ಳುಳ್ಳಿ 
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬಸಳೆ ಸೊಪ್ಪು ಸಾಂಬಾರ್ ಮಾಡುವ ವಿಧಾನ: 

  1. ಬಸಳೆ ಎಲೆ ಮತ್ತು ದಂಟನ್ನು ಬೇರೆ ಮಾಡಿ ತೊಳೆಯಿರಿ. ದಂಟನ್ನು ಬೆರಳುದ್ದ ಕತ್ತರಿಸಿ. ಸೊಪ್ಪನ್ನು ಸಣ್ಣಗೆ ಕತ್ತರಿಸಿ.
  2. ಒಂದು ಕುಕ್ಕರ್ ನಲ್ಲಿ ಅಲಸಂದೆ ಕಾಳನ್ನು (ಅಥವಾ ಹುರಿದ ಹುರುಳಿಕಾಳು) ತೆಗೆದುಕೊಂಡು ತೊಳೆಯಿರಿ. ಅದಕ್ಕೆ ಕತ್ತರಿಸಿದ ಬಸಳೆ ಸೊಪ್ಪಿನ ದಂಟನ್ನು ಹಾಕಿ, ಅರ್ಧ ಲೋಟ ನೀರು ಹಾಕಿ, ಒಂದು ವಿಷಲ್ ಮಾಡಿ. 
  3. ನಂತರ ಅದಕ್ಕೆ ಕತ್ತರಿಸಿದ ಸೊಪ್ಪು, ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ. 
  4. ಅರ್ಧ ಲೋಟ ನೀರು ಹಾಕಿ ಪುನಃ ಒಂದು ವಿಷಲ್ ಮಾಡಿ ಬೇಯಿಸಿ ಕೊಳ್ಳಿ. 
  5. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ ಮತ್ತು ಸಾಸಿವೆಯನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  6. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  7. ಕೊನೆಯಲ್ಲಿ ಬೆಳ್ಳುಳ್ಳಿ ಹಾಕಿ ಒಂದು ಸುತ್ತು ಅರೆದು ತೆಗೆಯಿರಿ. 
  8. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಉಪ್ಪು ಮತ್ತು ಹುಣಿಸೆರಸ ಹಾಕಿ.
  9. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. 
  10. ಒಣ ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಅಕ್ಟೋಬರ್ 11, 2017

Sihi kumbalakai chutney recipe in Kannada | ಸಿಹಿಕುಂಬಳಕಾಯಿ ಚಟ್ನಿ ಮಾಡುವ ವಿಧಾನ

Sihi kumbalakai chutney recipe in Kannada

Sihi kumbalakai chutney recipe in Kannada | ಸಿಹಿಕುಂಬಳಕಾಯಿ ಚಟ್ನಿ ಮಾಡುವ ವಿಧಾನ 

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 kg ಚೀನಿಕಾಯಿ ಅಥವಾ ಸಿಹಿ ಕುಂಬಳಕಾಯಿ
  2. 2-4 ಒಣ ಮೆಣಸಿನಕಾಯಿ
  3. 1 ಟಿಸ್ಪೂನ್ ಎಳ್ಳು 
  4. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡ್ಲೆಬೇಳೆ
  5. ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
  6. 1/2 ಟಿಸ್ಪೂನ್ ಬೆಲ್ಲ 
  7. 1/2 ಕಪ್ ತೆಂಗಿನ ತುರಿ
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಉದ್ದಿನಬೇಳೆ
  3. 3 - 4 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಸಿಹಿಕುಂಬಳಕಾಯಿ ಚಟ್ನಿ ಮಾಡುವ ವಿಧಾನ:

  1. ಚೀನಿಕಾಯಿ ಅಥವಾ ಸಿಹಿ ಕುಂಬಳಕಾಯಿಯನ್ನು ಸಿಪ್ಪೆ ತೆಗೆದು, ತೊಳೆದು ಕತ್ತರಿಸಿಟ್ಟು ಕೊಳ್ಳಿ.
  2. ಕತ್ತರಿಸಿದ ಸಿಹಿ ಕುಂಬಳಕಾಯಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಸ್ವಲ್ಪ ನೀರನ್ನು ಕುಕ್ಕರ್ ಗೆ ಹಾಕಿ ಬೇಯಿಸಿ. 
  3. ಒಂದು ಬಾಣಲೆ ಬಿಸಿಮಾಡಿ, ಅದಕ್ಕೆ ಕೆಂಪು ಮೆಣಸಿನಕಾಯಿ ಮತ್ತು ಎಳ್ಳನ್ನು ಹಾಕಿ ಹುರಿಯಿರಿ. ಕಡ್ಲೆಬೇಳೆ ಹಾಕುವುದಾದಲ್ಲಿ ಅದನ್ನು ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ. 
  4. ಬೇಯಿಸಿದ ಸಿಹಿ ಕುಂಬಳಕಾಯಿ ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ. ತೆಂಗಿನ ತುರಿ, ಹುರಿದ ಪದಾರ್ಥಗಳು ಮತ್ತು ಹುರಿಗಡಲೆ (ಕಡ್ಲೆಬೇಳೆ ಹಾಕದಿದ್ದಲ್ಲಿ) ಸೇರಿಸಿ. ನುಣ್ಣನೆ ಅರೆಯಿರಿ. 
  5. ಎಣ್ಣೆ, ಸಾಸಿವೆ, ಕರಿಬೇವು ಮತ್ತು ಉದ್ದಿನಬೇಳೆಯ ಒಗ್ಗರಣೆ ಕೊಡಿ. ಬಿಸಿ ಬಿಸಿ ಅನ್ನ ಅಥವಾ ದೋಸೆಯೊಂದಿಗೆ ಬಡಿಸಿ.

ಮಂಗಳವಾರ, ಅಕ್ಟೋಬರ್ 10, 2017

Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ

Southe pundi or unde kadubu recipe in Kannada

Southe pundi or unde kadubu recipe in Kannada | ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಉತ್ತಮ ಗುಣಮಟ್ಟದ ದೋಸೆ ಅಕ್ಕಿ
  2. 1/2 ಕಪ್ ತೆಂಗಿನ ತುರಿ
  3. 1/2ಮುಳ್ಳು ಸೌತೆಕಾಯಿ
  4. 2.5 ಕಪ್ ನೀರು 
  5. ಉಪ್ಪು ರುಚಿಗೆ ತಕ್ಕಷ್ಟು


ಸೌತೆ ಪುಂಡಿ ಅಥವಾ ಉಂಡೆ ಕಡುಬು ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು, ನೀರು ಬಗ್ಗಿಸಿ, ನೀರಾರಲು ಬಿಡಿ. 
  2. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಕೆಲವು ಸೆಕೆಂಡ್ ಗಳ ಕಾಲ ಮಿಕ್ಸಿ ಮಾಡಿದರೆ ಸಾಕಾಗುತ್ತದೆ. 
  3. ಮುಳ್ಳುಸೌತೆಯನ್ನು ಮತ್ತು ತೆಂಗಿನಕಾಯಿಯನ್ನು ತುರಿದಿಡಿ. 
  4. ಒಂದು ಬಾಣಲೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಯಲು ಇಡಿ. 
  5. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಮೊದಲಿಗೆ ತುರಿದ ಮುಳ್ಳು ಸೌತೆ ಮತ್ತು ತೆಂಗಿನ ತುರಿ ಹಾಕಿ. 
  6. ನಂತ್ರ ಅಕ್ಕಿ ತರಿ ಅಥವಾ ರವೆಯನ್ನು ಹಾಕುತ್ತಾ ದೋಸೆ ಸಟ್ಟುಗ ಉಪಯೋಗಿಸಿ ಗಂಟಾಗದಂತೆ ಮಗುಚಿ. 
  7. ಮಧ್ಯಮ ಉರಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ. ತುಂಬ ಗಟ್ಟಿಯಾಗುವುದು ಬೇಡ. ಸಟ್ಟುಗ ಬೀಳದೆ ನೇರ ನಿಲ್ಲುವಷ್ಟು ಗಟ್ಟಿ ಆದರೆ ಸಾಕು. ಸ್ಟವ್ ಆಫ್ ಮಾಡಿ.
  8. ಸ್ವಲ್ಪ ಬಿಸಿ ಆರಿದ ಮೇಲೆ, ಕೈಗೆ ನೀರು ಮುಟ್ಟಿಸಿಕೊಂಡು, ಸಣ್ಣ ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡಿ, ಹೆಬ್ಬೆರಳಿಂದ ಒಂದು ಗುಳಿಯನ್ನು ಮಾಡಿ. ಅಥವಾ ನಿಮ್ಮಿಷ್ಟದಂತೆ ಚಪ್ಪಟೆ ಅಥವಾ ಗೋಲಾಕಾರದಲ್ಲೂ ಮಾಡಬಹುದು. 
  9. ಸೆಕೆಯಲ್ಲಿ (ಆವಿಯಲ್ಲಿ) 15 ನಿಮಿಷ ಬೇಯಿಸಿ. ಬೇಯಿಸುವ ಸಮಯ ಕಡುಬಿನ ಪ್ರಮಾಣದ ಮೇಲೆ ಬದಲಾಗಬಹುದು. ಚಟ್ನಿ, ಸಾಂಬಾರ್ ಅಥವಾ ಸಾರಿನಿಂದಿಗೆ ಸವಿದು ಆನಂದಿಸಿ.

ಶುಕ್ರವಾರ, ಅಕ್ಟೋಬರ್ 6, 2017

Instant neer dose recipe in Kannada | ದಿಢೀರ್ ನೀರ್ ದೋಸೆ ಮಾಡುವ ವಿಧಾನ

Instant neer dose recipe in Kannada

Instant neer dose recipe in Kannada | ದಿಢೀರ್ ನೀರ್ ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 1 ಟೇಬಲ್ ಚಮಚ ತೆಂಗಿನ ತುರಿ
  3. ಉಪ್ಪು ರುಚಿಗೆ ತಕ್ಕಷ್ಟು

ದಿಢೀರ್ ನೀರ್ ದೋಸೆ ವಿಡಿಯೋ

ದಿಢೀರ್ ನೀರ್ ದೋಸೆ ಮಾಡುವ ವಿಧಾನ:

  1. ಮಿಕ್ಸಿ ಜಾರಿನಲ್ಲಿ ಅಕ್ಕಿ ಹಿಟ್ಟು ಮತ್ತು ತೆಂಗಿನ ತುರಿ ತೆಗೆದುಕೊಳ್ಳಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣನೆ ಅರೆಯಿರಿ. 
  2. ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  3. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ.
  4. ಕಬ್ಬಿಣದ ಕಾವಲಿ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ನಾನ್-ಸ್ಟಿಕ್ ತವವನ್ನು ಸಹ ಬಳಸಬಹುದು. 
  5. ಸಣ್ಣ ಈರುಳ್ಳಿ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. 
  7. ನೀರ್ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ನಂತರ ಮತ್ತೆ ಪ್ರಯತ್ನಿಸಿ. ಕಾವಲಿ ಮೇಲೆಯೇ ದೋಸೆಯನ್ನು ಮಡಿಸಿ. ಚಟ್ನಿಯೊಂದಿಗೆ ಸವಿದು ಆನಂದಿಸಿ.

ಗುರುವಾರ, ಅಕ್ಟೋಬರ್ 5, 2017

Bendekai palya recipe in Kannada | ಬೆಂಡೆಕಾಯಿ ಪಲ್ಯ ಮಾಡುವ ವಿಧಾನ

Bendekai palya recipe in Kannada

Bendekai palya recipe in Kannada | ಬೆಂಡೆಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕೆಜಿ ಬೆಂಡೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 2 - 3 ಟೇಬಲ್ ಚಮಚ ಅಡುಗೆ ಎಣ್ಣೆ
  5. 1 ಒಣ ಮೆಣಸಿನಕಾಯಿ
  6. 1 - 2 ಹಸಿರು ಮೆಣಸಿನಕಾಯಿ
  7. 4 - 5 ಕರಿಬೇವಿನ ಎಲೆ
  8. 2 - 3 ಎಸಳು ಬೆಳ್ಳುಳ್ಳಿ ಅಥವಾ ಚಿಟಿಕೆ ಇಂಗು
  9. 1 ಮಧ್ಯಮ ಗಾತ್ರದ ಈರುಳ್ಳಿ
  10. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  11. 2 ಟೇಬಲ್ ಚಮಚ ಮೊಸರು ಅಥವಾ 1 ಟೇಬಲ್ ಚಮಚ ನಿಂಬೆರಸ
  12. ಉಪ್ಪು ರುಚಿಗೆ ತಕ್ಕಷ್ಟು

ಬೆಂಡೆಕಾಯಿ ಪಲ್ಯ ಮಾಡುವ ವಿಧಾನ:

  1. ಬೆಂಡೆಕಾಯಿಯನ್ನು ತೊಳೆದು, ಕತ್ತರಿಸಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನೂ ಕತ್ತರಿಸಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಒಣ ಮೆಣಸಿನಕಾಯಿ ಹಾಕಿ.  
  4. ನಂತರ  ಕರಿಬೇವಿನ ಎಲೆ, ಹೆಚ್ಚಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ.  
  5. ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.  
  6. ನಂತ್ರ ಕತ್ತರಿಸಿದ ಬೆಂಡೆಕಾಯಿ ಹಾಕಿ ದೊಡ್ಡ ಉರಿಯಲ್ಲಿ ಎರಡು ನಿಮಿಷ ಹುರಿಯಿರಿ.
  7. ಉರಿ ಕಡಿಮೆ ಮಾಡಿ, ಅರಿಶಿನ ಮತ್ತು ಮೊಸರು ಹಾಕಿ. 
  8. ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  9. ಕೊನೆಯಲ್ಲಿ ಉಪ್ಪು ಹಾಕಿ, ಚೆನ್ನಾಗಿ ಮಗುಚಿ ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...