ಬುಧವಾರ, ನವೆಂಬರ್ 29, 2017

Masala puri recipe in Kannada | ಮಸಾಲೆ ಪುರಿ ಮಾಡುವ ವಿಧಾನ

Masala puri recipe in Kannada

Masala puri recipe in Kannada |  ಮಸಾಲೆ ಪುರಿ ಮಾಡುವ ವಿಧಾನ

ಮಸಾಲೆ ಪುರಿ ವಿಡಿಯೋ

ಪ್ರಮಾಣ: 4 ಪ್ಲೇಟ್ ಗಾಗುವಷ್ಟು

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 20 - 25 ಪೂರಿ ಅಥವಾ ಪಾಪಡಿ (ಚಾಟ್ಗಳಿಗಾಗಿ ಬಳಸಲಾಗುತ್ತದೆ)
  2. 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ 
  3. 2 ಸಣ್ಣದಾಗಿ ಹೆಚ್ಚಿದ ಟೊಮೆಟೊ 
  4. 4 ಟೇಬಲ್ ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 
  5. 4 ಟೇಬಲ್ ಚಮಚ ಸೇವ್

ಗ್ರೇವಿಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಒಣ ಬಟಾಣಿ 
  2. 1/2 ಆಲೂಗಡ್ಡೆ 
  3. 1/2 ಕ್ಯಾರೆಟ್ (ಬೇಕಾದಲ್ಲಿ) 
  4. 1 - 2 ಹಸಿರು ಮೆಣಸು 
  5. 2 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. 1 ಟೇಬಲ್ ಚಮಚ ಕತ್ತರಿಸಿದ ಪುದಿನ 
  7. 1 ಕತ್ತರಿಸಿದ  ಈರುಳ್ಳಿ  
  8. 4 - 5 ಎಸಳು ಬೆಳ್ಳುಳ್ಳಿ 
  9. 1 cm ಉದ್ದದ ಶುಂಠಿ 
  10. 1 ಕತ್ತರಿಸಿದ ಟೊಮೆಟೊ 
  11. 1/2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ) 
  12. 1 ಟೀಸ್ಪೂನ್ ಪಾವ್ ಬಾಜಿ ಪುಡಿ 
  13. 1/2 ಟೀಸ್ಪೂನ್ ಗರಂ ಮಸಾಲಾ ಪುಡಿ 
  14. 1/2 ಚಮಚ ಚಾಟ್ ಮಸಾಲಾ 
  15. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  16. ನಿಮ್ಮ ರುಚಿಗೆ ತಕ್ಕಂತೆ ಉಪ್ಪು

ಮಸಾಲೆ ಪುರಿ ಮಾಡುವ ವಿಧಾನ:

  1. ಮೊದಲಿಗೆ ಗ್ರೇವಿ ತಯಾರಿಸೋಣ. ಬಟಾಣಿಯನ್ನು ರಾತ್ರೆಯಿಡಿ ನೆನೆಸಿಡಿ. 
  2. ನೆನೆಸಿದ ಬಟಾಣಿ, ಆಲೂಗಡ್ಡೆ ಮತ್ತು ಕ್ಯಾರಟ್ ನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ತೆಗೆದು ಕೊಂಡು ಮಧ್ಯಮ ಉರಿಯಲ್ಲಿ ಹುರಿಯಿರಿ. 
  4. ಈರುಳ್ಳಿ ಮೆತ್ತಗಾದ ಮೇಲೆ ಹಸಿರು ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಪುದಿನ ಹಾಕಿ ಹುರಿಯಿರಿ.
  5. ಕೊನೆಯಲ್ಲಿ ಟೊಮೇಟೊ ಹಾಕಿ ಹುರಿಯಿರಿ.  ಸ್ಟವ್ ಆಫ್ ಮಾಡಿ. 
  6. ಬಟಾಣಿ, ಆಲೂಗಡ್ಡೆ ಮತ್ತು ಕ್ಯಾರಟ್ ಬೆಂದ ನಂತ್ರ... ಬೇಯಿಸಿದ ಆಲೂಗಡ್ಡೆ, ಕ್ಯಾರಟ್ ಮತ್ತು ಎರಡು ಸೌಟಿನಷ್ಟು ಬಟಾಣಿಯನ್ನು ಹುರಿದ ಪದಾರ್ಥಗಳೊಂದಿಗೆ ಸೇರಿಸಿ ನುಣ್ಣನೆ ಅರೆಯಿರಿ. 
  7. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಮಸಾಲೆ ಪುಡಿಗಳನ್ನು ಸೇರಿಸಿ (ಅಚ್ಚಖಾರದ ಪುಡಿ, ಪಾವ್ ಬಾಜಿ ಪುಡಿ, ಗರಂ ಮಸಾಲಾ ಪುಡಿ, ಚಾಟ್ ಮಸಾಲಾ,  ಅರಿಶಿನ ಪುಡಿ). ಉಪ್ಪನ್ನೂ ಸೇರಿಸಿ. 
  8. ಉಳಿದ ಬೇಯಿಸಿದ ಬಟಾಣಿಯನ್ನೂ ಬೇಯಿಸಿದ ನೀರಿನೊಂದಿಗೆ ಸೇರಿಸಿ. 
  9. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಗ್ರೇವಿ ತಯಾರಾಯಿತು. 
  10. ಸರ್ವಿಂಗ್ ಪ್ಲೇಟ್ ನಲ್ಲಿ ಪೂರಿಗಳನ್ನ ತೆಗೆದುಕೊಂಡು ಪುಡಿಮಾಡಿ. 
  11. ಮೇಲಿನಿಂದ 4 ಸೌಟಿನಷ್ಟು ತಯಾರಿಸಿದ ಗ್ರೇವಿಯನ್ನು ಹಾಕಿ. 
  12. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ. ಕೂಡಲೇ ಬಡಿಸಿ. ಸವಿದು ಆನಂದಿಸಿ. 

ಮಂಗಳವಾರ, ನವೆಂಬರ್ 28, 2017

Gatti avalakki oggarane recipe in Kannada | ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ

Gatti avalakki oggarane recipe in Kannada

Gatti avalakki oggarane recipe in Kannada | ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಗಟ್ಟಿ ಅವಲಕ್ಕಿ
  2. 1/4 ಕಪ್ ತೆಂಗಿನ ತುರಿ
  3. 1 ಟೀಸ್ಪೂನ್  ಸಕ್ಕರೆ
  4. 1/4 ಟೀಸ್ಪೂನ್ ಅರಿಶಿನ
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
  4. 1 ಟೀಸ್ಪೂನ್ ಉದ್ದಿನ ಬೇಳೆ
  5. 1 ಟೀಸ್ಪೂನ್ ಕಡಲೆಬೇಳೆ
  6. 7 - 8 ಗೋಡಂಬಿ (ಬೇಕಾದಲ್ಲಿ)
  7. 4 - 6 ಕರಿಬೇವಿನ ಎಲೆ
  8. 2 ಟೇಬಲ್ ಚಮಚ ಅಡುಗೆ ಎಣ್ಣೆ

ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ:

  1. ದಪ್ಪ ಅಥವಾ ಗಟ್ಟಿ ಅವಲಕ್ಕಿಯನ್ನು ಮಿಕ್ಸಿ ಜಾರಿನಲ್ಲಿ ದೊಡ್ಡದಾಗಿ ಪುಡಿ ಮಾಡಿ. 
  2. ಪುಡಿ ಮಡಿದ ಅವಲಕ್ಕಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ.  ನೀರು ಹಾಕಿ ತೊಳೆದು, ಬಸಿದಿಡಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ , ಉದ್ದಿನ ಬೇಳೆ, ಕಡಲೆಬೇಳೆ, ಗೋಡಂಬಿ ಮತ್ತು ಕಡಲೆಕಾಯಿ (ಶೇಂಗಾ) ಬಳಸಿಕೊಂಡು ಒಗ್ಗರಣೆ ಮಾಡಿ. 
  4. ನಂತರ ಕರಿಬೇವು ಸೇರಿಸಿ.
  5. ಪುಡಿಮಾಡಿ ತೊಳೆದಿಟ್ಟ ಅವಲಕ್ಕಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕಲಸಿ. 
  6. ಒಂದೆರಡು ನಿಮಿಷ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ. ತುಂಬ ಪುಡಿ ಪುಡಿ ಅಥವಾ ಒಣ ಒಣ ಎನಿಸಿದರೆ ಸ್ವಲ್ಪ ನೀರು ಚಿಮುಕಿಸಿ. 
  7. ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಗುಚಿ. 
  8. ಕೊನೆಯಲ್ಲಿ ತೆಂಗಿನ ತುರಿ ಸೇರಿಸಿ ಕಲಸಿ. ಸರಳ ಮತ್ತು ರುಚಿಕರ ಅವಲಕ್ಕಿಯನ್ನು ತಿಂದು ಆನಂದಿಸಿ.

ಶುಕ್ರವಾರ, ನವೆಂಬರ್ 24, 2017

Easy siridhanya recipes in Kannada | ಸಿರಿಧಾನ್ಯದ ಅಡಿಗೆ ಮಾಡುವ ವಿಧಾನ

Easy siridhanya recipes in Kannada

Easy siridhanya recipes in Kannada | ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಸಿರಿಧಾನ್ಯ
  1. 1 ಕಪ್ ಮೊಸರು
  2. 1/4 ಚಮಚ ಸಾಸಿವೆ 
  3. 1/2 ಟೀಸ್ಪೂನ್ ಉದ್ದಿನ ಬೇಳೆ 
  4. 2 ಕರಿಬೇವಿನ ಎಲೆ 
  5. 1 ಹಸಿರು ಮೆಣಸಿನಕಾಯಿ ಅಥವಾ ಮಜ್ಜಿಗೆ ಮೆಣಸು
  6. ಸ್ವಲ್ಪ ಶುಂಠಿ ಸಣ್ಣಗೆ ಕತ್ತರಿಸಿದ್ದು
  7. ಒಂದು ಚಿಟಿಕೆ ಇಂಗು
  8. 2 ಟೀ ಚಮಚ ಅಡುಗೆ ಎಣ್ಣೆ 
  9. ಉಪ್ಪು ರುಚಿಗೆ ತಕ್ಕಷ್ಟು
  1. 1/2 ಕಪ್ ಹಾಲು
  2. ಸಕ್ಕರೆ ರುಚಿಗೆ ತಕ್ಕಷ್ಟು
  3. 2 ಟೀ ಚಮಚ ತುಪ್ಪ
  4. 1 ಟೇಬಲ್ ಚಮಚ ಒಣದ್ರಾಕ್ಷಿ
  1. 1 ಕಪ್ ಬಿಸಿ ನೀರು
  2. 1 ಟೀ ಚಮಚ ತುಪ್ಪ
  3. ಉಪ್ಪು ರುಚಿಗೆ ತಕ್ಕಷ್ಟು
  4. ಉಪ್ಪಿನಕಾಯಿ

ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ:

  1. ಮೊದಲಿಗೆ ಯಾವುದೇ ಸಿರಿಧಾನ್ಯವನ್ನು ಮೆತ್ತಗೆ ಬೇಯಿಸಿಟ್ಟು ಕೊಳ್ಳಿ. ನಾನು 1/2 ಕಪ್ ಸಿರಿಧಾನ್ಯಕ್ಕೆ 1.5 ಕಪ್ ನೀರು ಬಳಸಿದ್ದೇನೆ. 
  2. ಮೊದಲನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಮೊಸರು ಮತ್ತು ಉಪ್ಪು ಹಾಕಿ ಕಲಸಿ. 
  3. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗಿನ ಒಗ್ಗರಣೆ ಕೊಡಿ.  
  4. ಎರಡನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಹಾಲು ಮತ್ತು ಸಕ್ಕರೆ ಹಾಕಿ ಕಲಸಿ. 
  5. ತುಪ್ಪದಲ್ಲಿ ಒಣದ್ರಾಕ್ಷಿ ಹುರಿದು ಸೇರಿಸಿ. 
  6. ಉಳಿದ ಸಿರಿಧಾನ್ಯವನ್ನು ಮೂರನೇ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಬಿಸಿನೀರು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. ಉಪ್ಪಿನಕಾಯಿಯೊಂದಿಗೆ ಸವಿಯಿರಿ. 

ಗುರುವಾರ, ನವೆಂಬರ್ 23, 2017

Ananas kesari bath recipe in Kannada | ಅನಾನಸ್ ಕೇಸರಿಬಾತ್ ಮಾಡುವ ವಿಧಾನ

Ananas kesari bath recipe in Kannada

Ananas kesari bath recipe in Kannada | ಅನಾನಸ್ ಕೇಸರಿಬಾತ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್)

  1. 1 ಕಪ್ ಮಧ್ಯಮ ರವೆ ಅಥವಾ ಉಪ್ಪಿಟ್ಟು ರವೇ
  2. 1 ಕಪ್ ಸಣ್ಣಗೆ ಹೆಚ್ಚಿದ ಅನಾನಸ್
  3. 2.5 ಕಪ್ ನೀರು
  4. 1.25 ಕಪ್ ಸಕ್ಕರೆ
  5. 0.25 - 0.5 ಕಪ್ ತುಪ್ಪ (1 ಕಪ್ ವರೆಗೆ ಹಾಕಬಹುದು)
  6. ಚಿಟಿಕೆ ಕೇಸರಿ ದಳ ಅಥವಾ ಬಣ್ಣ ಅಥವಾ ಅರಶಿನ ಪುಡಿ
  7. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  8. 5-6 ಗೋಡಂಬಿ
  9. 8-10 ಒಣ ದ್ರಾಕ್ಷಿ (ಬೇಕಾದಲ್ಲಿ)

ಅನಾನಸ್ ಕೇಸರಿಬಾತ್ ಪಾಕವಿಧಾನ:

  1. ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಮತ್ತು ಹೆಚ್ಚಿದ ಅನಾನಸ್ ಹಣ್ಣು ಹಾಕಿ ಹುರಿಯಿರಿ. 
  2. ಅದಕ್ಕೆ ಸಕ್ಕರೆ, ಕೇಸರಿ ದಳ, ನೀರು ಮತ್ತು ಏಲಕ್ಕಿ ಪುಡಿ ಹಾಕಿ ಕುದಿಯಲು ಇಡಿ. 
  3. ಇನ್ನೊಂದು ಬಾಣಲೆಯಲ್ಲಿ ಉಳಿದ ತುಪ್ಪ, ಗೋಡಂಬಿ, ದ್ರಾಕ್ಷಿ(ಬೇಕಾದಲ್ಲಿ) ಮತ್ತು ರವೇ ಹಾಕಿ ಹುರಿಯಲು ಪ್ರಾರಂಭಿಸಿ. ಸ್ಟೋವ್ ಮಧ್ಯಮ ಉರಿಯಲ್ಲಿರಲಿ. 
  4. ಒಳ್ಳೆಯ ಘಮ ಅಥವಾ ರವೆ ಅಲ್ಲಲ್ಲಿ ಬಿಳಿಯಾದಾಗ ಉರಿ ತಗ್ಗಿಸಿ. 
  5. ಇಷ್ಟರೊಳಗೆ ಇನ್ನೊಂದು ಬಾಣಲೆಯ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ.
  6. ಚೆನ್ನಾಗಿ ಮಗುಚಿ. ದಪ್ಪ ಪೇಸ್ಟ್ ನ ಹದಕ್ಕೆ ಬಂದ ಕೂಡಲೇ ಸ್ಟೋವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ. ನೆನಪಿಡಿ ೪ - ೫ ನಿಮಿಷದೊಳಗೆ ಪೇಸ್ಟ್ ನ ಹದಕ್ಕೆ ಬರುತ್ತದೆ. ಬಿಸಿ ಅಥವಾ ತಣ್ಣಗೆ ಬಡಿಸಿ.

ಬುಧವಾರ, ನವೆಂಬರ್ 22, 2017

Thondekai palya recipe in Kannada | ತೊಂಡೆಕಾಯಿ ಪಲ್ಯ ಮಾಡುವ ವಿಧಾನ

Thondekai palya recipe in Kannada

Thondekai palya recipe in Kannada | ತೊಂಡೆಕಾಯಿ ಪಲ್ಯ ಮಾಡುವ ವಿಧಾನ 

ತೊಂಡೆಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 kg ತೊಂಡೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  7. 1 ದೊಡ್ಡ ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  10. ಉಪ್ಪು ರುಚಿಗೆ ತಕ್ಕಷ್ಟು
  11. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 3 ಒಣ ಮೆಣಸಿನಕಾಯಿ
  3. 1/2 ಟೀಸ್ಪೂನ್ ಸಾಸಿವೆ

ತೊಂಡೆಕಾಯಿ ಪಲ್ಯ ಮಾಡುವ ವಿಧಾನ:

  1. ತೊಂಡೆಕಾಯಿಯನ್ನು ತೊಳೆದು, ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  4. ಅದಕ್ಕೆ ಕತ್ತರಿಸಿದ ತೊಂಡೆಕಾಯಿ ಹಾಕಿ.  1/2 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  5. ಬೇಯುತ್ತಾ ಬಂದಾಗ ಉಪ್ಪು ಮತ್ತು ಬೆಲ್ಲ ಹಾಕಿ ಮಗುಚಿ.
  6. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸಿನಕಾಯಿ ಹಾಕಿ, ನೀರು ಹಾಕದೆ ಪುಡಿ ಮಾಡಿ. 
  7. ಪುಡಿ ಮಾಡಿದ ಮಸಾಲೆಯನ್ನು ಬೇಯುತ್ತಿರುವ ತೊಂಡೆ ಕಾಯಿಗೆ ಹಾಕಿ. 
  8. ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ನವೆಂಬರ್ 20, 2017

Belgaum Kunda recipe in Kannada | ಬೆಳಗಾಂ ಕುಂದಾ ಮಾಡುವ ವಿಧಾನ

Belgaum Kunda recipe in Kannada

Belgaum Kunda recipe in Kannada | ಬೆಳಗಾಂ ಕುಂದಾ ಮಾಡುವ ವಿಧಾನ

ಬೆಳಗಾಂ ಕುಂದಾ ವಿಡಿಯೋ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಲೀ ಹಾಲು
  2. 1/2 + 1/4 ಕಪ್ ಸಕ್ಕರೆ
  3. 1/2 ಕಪ್ ಮೊಸರು (ಹುಳಿಯಿಲ್ಲದ್ದು)
  4. 2 ಏಲಕ್ಕಿ ಪುಡಿಮಾಡಿದ್ದು


ಬೆಳಗಾಂ ಕುಂದಾ ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಹಾಲನ್ನು ಕುದಿಯಲು ಇಡಿ. 
  2. ಹಾಲು ಸುಮಾರು 1/4  ಭಾಗದಷ್ಟಾಗುವವರೆಗೆ ಆಗಾಗ್ಯೆ ಮಗುಚುತ್ತಾ ಕುದಿಸಿ. 
  3. ನಂತರ ಮೊಸರನ್ನು ಸೇರಿಸಿ ಕುದಿಸುವುದನ್ನು ಮುಂದುವರೆಸಿ.  
  4. ಹಾಲು ಒಡೆಯಲು ಪ್ರಾರಂಭವಾದಾಗ ಸಕ್ಕರೆ ಸೇರಿಸಿ ಕುದಿಸುವುದನ್ನು ಮುಂದುವರೆಸಿ.
  5. ಇನ್ನೊಂದು ಬಾಣಲೆಯಲ್ಲಿ ಉಳಿದ 1/4 ಕಪ್  ಸಕ್ಕರೆ ಹಾಕಿ ಬಿಸಿ ಮಾಡಿ. 
  6. ನೀರು ಹಾಕದೆ ಕಂದುಬಣ್ಣಕ್ಕೆ ತಿರುಗುವವರೆಗೆ ಬಿಸಿಮಾಡಿ. 
  7. ಇದನ್ನು ಕುದಿಯುತ್ತಿರುವ ಹಾಲು+ಸಕ್ಕರೆ+ಮೊಸರು ಇರುವ ಬಾಣಲೆಗೆ ಹಾಕಿ. 
  8. ಹೆಚ್ಚಿನ ನೀರಾರುವವರೆಗೆ ಕುದಿಸಿ.
  9. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ.

ಶುಕ್ರವಾರ, ನವೆಂಬರ್ 17, 2017

Sorekai palya recipe in Kannada | ಸೋರೆಕಾಯಿ ಪಲ್ಯ ಮಾಡುವ ವಿಧಾನ

Sorekai palya recipe in Kannada

Sorekai palya recipe in Kannada | ಸೋರೆಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೋರೆಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
  7. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  8. 1 ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  11. ಉಪ್ಪು ರುಚಿಗೆ ತಕ್ಕಷ್ಟು
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. 1 - 2 ಟೀಸ್ಪೂನ್ ನಿಂಬೆರಸ

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 1 ಟೀಸ್ಪೂನ್ ಸಾರಿನ ಪುಡಿ । ಪಲ್ಯದ ಪುಡಿ । ಅಚ್ಚಖಾರದ ಪುಡಿ । ಹಸಿರು ಮೆಣಸಿನಕಾಯಿ
  3. 4 - 5 ಕರಿಬೇವಿನ ಎಲೆ (ಬೇಕಾದಲ್ಲಿ)
  4. 1/2 ಟೀಸ್ಪೂನ್ ಸಾಸಿವೆ

ಸೋರೆಕಾಯಿ ಪಲ್ಯ ಮಾಡುವ ವಿಧಾನ:

  1. ಸೋರೆಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು,  ಕತ್ತರಿಸಿ. ಬೀಜ ಬೆಳೆದಿದ್ದರೆ ತೆಗೆಯಿರಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  4. ಅದಕ್ಕೆ ಕತ್ತರಿಸಿದ ಸೊರೆಕಾಯಿ ಹಾಕಿ. 
  5. ಉಪ್ಪು ಮತ್ತು ಬೆಲ್ಲ ಹಾಕಿ ಮಗುಚಿ.
  6. 1/4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಸಾರಿನ ಪುಡಿ ಅಥವಾ ಪಲ್ಯದ ಪುಡಿ ಹಾಕಿ, ನೀರು ಹಾಕದೆ ಪುಡಿ ಮಾಡಿ. 
  8. ಪುಡಿ ಮಾಡಿದ ಮಸಾಲೆಯನ್ನು ಬೇಯುತ್ತಿರುವ ಸೋರೆಕಾಯಿಗೆ ಹಾಕಿ. 
  9. ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. 
  10. ಕೊನೆಯಲ್ಲಿ ನಿಂಬೆರಸ ಸೇರಿಸಿ (ಬೇಕಾದಲ್ಲಿ). ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಗುರುವಾರ, ನವೆಂಬರ್ 16, 2017

Shenga hindi recipe in Kannada | ಶೇಂಗಾ ಹಿಂಡಿ ಮಾಡುವ ವಿಧಾನ

Shenga hindi recipe in Kannada

Shenga chutney pudi recipe in Kannada | ಶೇಂಗಾ ಹಿಂಡಿ ಮಾಡುವ ವಿಧಾನ 

Shenga chutney powder video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಕಡಲೆಕಾಯಿ ಅಥವಾ ಶೆಂಗಾ
  2. 1 - 2 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ) 
  3. 1/4 ಟೀಸ್ಪೂನ್ ಜೀರಿಗೆ 
  4. 4 - 5 ಕರಿಬೇವಿನ ಎಲೆ (ಬೇಕಾದಲ್ಲಿ) 
  5. 4 - 5 ಬೇಳೆ ಬೆಳ್ಳುಳ್ಳಿ 
  6. 1/2 ಟೀಸ್ಪೂನ್ ಸಕ್ಕರೆ 
  7. ನಿಮ್ಮ ರುಚಿಗೆ ತಕ್ಕಂತೆ ಉಪ್ಪು


ಶೇಂಗಾ ಹಿಂಡಿ ಮಾಡುವ ವಿಧಾನ:

  1. ಒಂದು ಬಾಣಲೆಯನ್ನು ಬಿಸಿ ಮಾಡಿ. ಕಡಲೆಕಾಯಿ ಅಥವಾ ಶೇಂಗಾವನ್ನು ಮಧ್ಯಮ ಉರಿಯಲ್ಲಿ ಅಲ್ಲಲ್ಲಿ ಕೆಂಪಗಾಗುವವರೆಗೆ ಹುರಿದು ತೆಗೆದಿಡಿ.
  2. ಹುರಿದ ಶೇಂಗಾ ಬಿಸಿ ಆರಿದ ಮೇಲೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಸೇರಿಸಿ ಪುಡಿ ಮಾಡಿ. ಮಿಕ್ಸಿಯಲ್ಲಿ ಬುರ್-ಬುರ್ ಮಾಡಿ ಪುಡಿ ಮಾಡಿ. ಪುಡಿ ಸ್ವಲ್ಪ ತರಿತರಿಯಾಗಿರಲಿ.  
  3. ನಂತರ ಅದಕ್ಕೆ ಸಕ್ಕರೆ, ಉಪ್ಪು ಮತ್ತು ಅಚ್ಚಖಾರದ ಪುಡಿ ಸೇರಿಸಿ ಪುನಃ ಒಂದೆರಡು ಸುತ್ತು ಮಿಕ್ಸಿ ಮಾಡಿ. 
  4. ತಯಾರಾದ ಚಟ್ನಿ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ. ಬಿಸಿ ಆರಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ. 


ಸೋಮವಾರ, ನವೆಂಬರ್ 13, 2017

Chutney pudi recipe in Kannada | ಚಟ್ನಿ ಪುಡಿ ಮಾಡುವ ವಿಧಾನ

Chutney pudi recipe in Kannada

Chutney pudi recipe in Kannada | ಚಟ್ನಿ ಪುಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
  2. 2 - 4 ಎಸಳು ಕರಿಬೇವು 
  3. 1/2 ಕಪ್ ಕಡಲೆಬೇಳೆ 
  4. 1/3 ಕಪ್ ಉದ್ದಿನ ಬೇಳೆ 
  5. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  6. 2 ಟೀಸ್ಪೂನ್ ಕೊತ್ತಂಬರಿ ಬೀಜ
  7. 1/2 ಟೀಸ್ಪೂನ್ ಇಂಗಿನ ಪುಡಿ
  8. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
  9. 2 ಟೀಸ್ಪೂನ್ ಅಡುಗೆ ಎಣ್ಣೆ

ಚಟ್ನಿ ಪುಡಿ ಮಾಡುವ ವಿಧಾನ:

  1. ಒಂದು ಬಾಣಲೆಯನ್ನು ಬಿಸಿ ಮಾಡಿ. ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
  2. ನಂತರ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  3. ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  4.  ಕರಿಬೇವನ್ನು ಗರಿಗರಿ ಯಾಗುವವರೆಗೆ ಹುರಿಯಿರಿ.
  5. ಅದಕ್ಕೆ ಇಂಗು ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿದು ತೆಗೆದಿಡಿ. 
  6. ನಂತರ ಒಣ ಕೊಬ್ಬರಿ ಯನ್ನು ಹುರಿದು ತೆಗೆದಿಡಿ. 
  7. ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಗುರುವಾರ, ನವೆಂಬರ್ 9, 2017

Hesarubele thove recipe in Kannada | ಹೆಸರುಬೇಳೆ ತೊವೆ ಮಾಡುವ ವಿಧಾನ

Hesarubele thove recipe in Kannada

Hesarubele thove recipe in Kannada | ಹೆಸರುಬೇಳೆ ತೊವೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಹೆಸರುಬೇಳೆ
  2. 1 ಲೀ ನೀರು
  3. 1 ಸಣ್ಣ ಟೊಮೇಟೊ
  4. 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  5. 1 cm ಉದ್ದದ ಶುಂಠಿ
  6. ಒಂದು ಚಿಟಿಕೆ ಅರಶಿನ ಪುಡಿ
  7. 1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
  8. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 1/4 ಟೀಸ್ಪೂನ್ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. ಒಂದು ದೊಡ್ಡ ಚಿಟಿಕೆ ಇಂಗು 
  4. 4 - 5 ಕರಿಬೇವಿನ ಎಲೆ
  5. 1 ಟೀಸ್ಪೂನ್ ಅಡುಗೆ ಎಣ್ಣೆ

ಹೆಸರುಬೇಳೆ ತೊವೆ ಮಾಡುವ ವಿಧಾನ:

  1. ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು, ಒಂದೆರಡು ಹನಿ ಎಣ್ಣೆ ಮತ್ತು ಅರಶಿನ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಟೊಮೇಟೊ, ಹಸಿರುಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  3. ತೆಂಗಿನತುರಿ ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. 
  4. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೆಸರುಬೇಳೆ ಮತ್ತು ಟೊಮ್ಯಾಟೊಗೆ ಸೇರಿಸಿ. 
  5. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. 
  6. ಎಣ್ಣೆ, ಒಣಮೆಣಸು, ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಕೊಡಿ. ಬಿಸಿ ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. 

ಬುಧವಾರ, ನವೆಂಬರ್ 8, 2017

Cabbage dose recipe in Kannada | ಎಲೆಕೋಸು ದೋಸೆ ಮಾಡುವ ವಿಧಾನ

Cabbage dose recipe in Kannada

Cabbage dose recipe in Kannada | ಎಲೆಕೋಸು ದೋಸೆ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ದೋಸೆ ಅಕ್ಕಿ
  2. 1 ಕಪ್ ಸಣ್ಣಗೆ ಕತ್ತರಿಸಿದ ಎಲೆಕೋಸು
  3. 1 ಮಧ್ಯಮ ಗಾತ್ರದ ಈರುಳ್ಳಿ
  4. 1/4 ಕಪ್ ತೆಂಗಿನ ತುರಿ
  5. 1 ಟೀಸ್ಪೂನ್ ಕೊತ್ತಂಬರಿ ಬೀಜ 
  6. 1/2 ಟೀಸ್ಪೂನ್ ಜೀರಿಗೆ 
  7. 2 ಕೆಂಪು ಮೆಣಸಿನಕಾಯಿ 
  8. ಸಣ್ಣ ಗೋಲಿ ಗಾತ್ರದ ಹುಣಸೆ ಹಣ್ಣು 
  9. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ) 
  10. ಉಪ್ಪು ರುಚಿಗೆ ತಕ್ಕಷ್ಟು

ಎಲೆಕೋಸು ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ, ಬೆಲ್ಲ ಮತ್ತು ಹುಣಸೆ ಹಣ್ಣು ಹಾಕಿ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ.  
  3. ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ತೆಳುವಾದ ಮಿಲ್ಕ್ ಶೇಕ್ ನಂತಿರಲಿ. 
  4. ಅದಕ್ಕೆ ಸಣ್ಣಗೆ ಹೆಚ್ಚಿದ ಎಲೆಕೋಸು ಮತ್ತು ಈರುಳ್ಳಿಯನ್ನು ಸೇರಿಸಿ. 
  5. ದೋಸೆ ಕಲ್ಲು ಅಥವಾ ಹಂಚನ್ನು ಬಿಸಿ ಮಾಡಿ. ಒಂದು ಸೌಟು ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. 
  7. ದೋಸೆಯನ್ನು ಮಗುಚಿ ಇನ್ನೊಂದು ಬದಿ ಕಾಯಿಸಿ. 
  8. ಬಿಸಿ ಬಿಸಿ ದೋಸೆಯನ್ನು ತುಪ್ಪ ಮತ್ತು ಚಟ್ನಿಯೊಂದಿಗೆ ಬಡಿಸಿ. 

Beetroot halwa recipe in Kannada | ಬೀಟ್ರೂಟ್ ಹಲ್ವಾ ಮಾಡುವ ವಿಧಾನ

Beetroot halwa recipe in Kannada

Beetroot halwa recipe in Kannada |ಬೀಟ್ರೂಟ್ ಹಲ್ವಾ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಬೀಟ್ರೂಟ್ ತುರಿ ಅಥವಾ 1 ದೊಡ್ಡ ಗಾತ್ರದ ಬೀಟ್ರೂಟ್
  2. 1 ಕಪ್ ಹಾಲು
  3. 1/4 ಕಪ್ ಸಕ್ಕರೆ
  4. 2 ಟೇಬಲ್ ಸ್ಪೂನ್ ತುಪ್ಪ
  5. 1 ಟೇಬಲ್ ಸ್ಪೂನ್ ಗೋಡಂಬಿ ಕತ್ತರಿಸಿದ್ದು
  6. 1/4 ಟೀಸ್ಪೂನ್ ಏಲಕ್ಕಿ ಪುಡಿ

ಬೀಟ್ರೂಟ್ ಹಲ್ವಾ ಮಾಡುವ ವಿಧಾನ:

  1. ಬೀಟ್ರೂಟ್ ನ್ನು ತೊಳೆದು, ಸಿಪ್ಪೆ ತೆಗೆದು ತುರಿದುಕೊಳ್ಳಿ.
  2. ಒಂದು ಬಾಣಲೆಯಲ್ಲಿ ಒಂದು ಟೇಬಲ್ ಚಮಚ ತುಪ್ಪ ಹಾಕಿ. ಬಿಸಿ ಮಾಡಿ. 
  3. ಬೀಟ್ರೂಟ್ ತುರಿ ಹಾಕಿ, ಬೀಟ್ರೂಟ್ ಮೆತ್ತಗಾಗುವವರೆಗೆ ಹುರಿಯಿರಿ.
  4. ನಂತರ ಹಾಲು ಸೇರಿಸಿ.
  5. ದೊಡ್ಡ ಮಧ್ಯಮ ಉರಿಯಲ್ಲಿ ಆಗಾಗ್ಯೆ ಮಗುಚುತ್ತಾ ಬೇಯಿಸಿ. 
  6. ಹಾಲು ಕಡಿಮೆ ಆದಾಗ ಸಕ್ಕರೆ ಸೇರಿಸಿ. 
  7. ಹಲ್ವಾ ನೀರಾರುತ್ತ ಬಂದಾಗ ಕತ್ತರಿಸಿದ ಗೋಡಂಬಿ ಮತ್ತು ಇನ್ನೊಂದು ಟೇಬಲ್ ಚಮಚ ತುಪ್ಪ ಹಾಕಿ. 
  8. ಆಗಾಗ್ಯೆ ಮಗುಚುತ್ತಾ ಇರಿ. ಉರಿ ಕಡಿಮೆ ಇರಲಿ. 
  9. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಮಗುಚಿ. 
  10. ಹಲ್ವಾದ ನೀರು ಸಂಪೂರ್ಣ ಆರುತ್ತಾ ಬಂದಾಗ ಸ್ಟೋವ್ ಆಫ್ ಮಾಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.

ಶುಕ್ರವಾರ, ನವೆಂಬರ್ 3, 2017

Cutlet recipe in Kannada | ಕಟ್ಲೆಟ್ ಮಾಡುವ ವಿಧಾನ

Cutlet recipe in Kannada

Cutlet recipe in Kannada | ಕಟ್ಲೆಟ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಆಲೂಗಡ್ಡೆ
  2. 1/2 ಕಪ್ ಹಸಿ ಬಟಾಣಿ 
  3. 1/2 ಟೀಸ್ಪೂನ್ ಜೀರಿಗೆ 
  4. 1 ಈರುಳ್ಳಿ 
  5. 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ 
  6. 1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು 
  7. 1 ಟೇಬಲ್ ಚಮಚ ನುಣ್ಣಗೆ ಕತ್ತರಿಸಿದ ಪುದಿನ (ಬೇಕಾದಲ್ಲಿ) 
  8. 1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ 
  9. 1/2 ಟೀಸ್ಪೂನ್ ಗರಂ ಮಸಾಲಾ 
  10. 1 ಟೀಸ್ಪೂನ್ ನಿಂಬೆ ರಸ (ಬೇಕಾದಲ್ಲಿ) 
  11. 4 ಬ್ರೆಡ್
  12. 2 ಟೇಬಲ್ ಚಮಚ ಜೋಳದ ಹಿಟ್ಟು
  13. ಉಪ್ಪು ರುಚಿಗೆ ತಕ್ಕಷ್ಟು 
  14. ಎಣ್ಣೆ ಕಾಯಿಸಲು

ಕಟ್ಲೆಟ್ ಮಾಡುವ ವಿಧಾನ:

  1. ಆಲೂಗಡ್ಡೆ ಮತ್ತು ಹಸಿಬಟಾಣಿಯನ್ನು ಬೇಯಿಸಿಕೊಳ್ಳಿ. ಆಲೂಗಡ್ಡೆ ಸಿಪ್ಪೆ ತೆಗೆಯಿರಿ. ಎರಡನ್ನು ಮ್ಯಾಶ್ ಮಾಡಿ ಅಥವಾ ಹಿಸುಕಿ.  
  2.  2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ಜೀರಿಗೆ ಹಾಕಿ. 
  3. ಜೀರಿಗೆ ಸಿಡಿದ ಮೇಲೆ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ. 
  4. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೇರಿಸಿ ಹುರಿಯಿರಿ. 
  5. ಬೇಯಿಸಿ, ಹಿಸುಕಿದ ಆಲೂಗಡ್ಡೆ ಮತ್ತು ಹಸಿಬಟಾಣಿ ಹಾಕಿ ಕಲಸಿ. 
  6. ನಂತರ ಅಚ್ಚ ಖಾರದ ಪುಡಿ, ಉಪ್ಪು ಮತ್ತು ಗರಂ ಮಸಾಲಾ ಸೇರಿಸಿ ಕಲಸಿ. ಬೇಕಾದಲ್ಲಿ ನಿಂಬೆರಸ ಹಾಕಿ. ಸ್ಟವ್ ಆಫ್ ಮಾಡಿ. 
  7. ಎರಡು ಬ್ರೆಡ್ ನ್ನು ನೀರಿನಲ್ಲಿ ಹಾಕಿ, ಹಿಂಡಿ ತೆಗೆದು ಸೇರಿಸಿ ಕಲಸಿ.  
  8. ನಂತ್ರ ಒಂದು ಬಟ್ಟಲಿನಲ್ಲಿ ಜೋಳದ ಹಿಟ್ಟು ಮತ್ತು ನೀರು ಹಾಕಿ ತೆಳುವಾದ ದೋಸೆ ಹಿಟ್ಟಿನಂತೆ ಮಾಡಿಕೊಳ್ಳಿ. 
  9. ಉಳಿದ ಎರಡು ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟು ಕೊಳ್ಳಿ. 
  10. ಮಸಾಲೆ ಹಾಕಿ ಸಿದ್ದ ಪಡಿಸಿದ ಆಲೂಗಡ್ಡೆ ಮಿಶ್ರಣದಿಂದ ಚಪ್ಪಟೆಯಾದ ಕಟ್ಲೇಟ್ ಗಳನ್ನೂ ಮಾಡಿಕೊಳ್ಳಿ. 
  11. ಅದನ್ನು ಮೊದಲು ಜೋಳದ ಹಿಟ್ಟಿನಲ್ಲಿ ಅದ್ದಿ ತೆಗೆದು, ನಂತ್ರ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ. ಹೀಗೆ ಎಲ್ಲ ಕಟ್ಲೇಟ್ ಗಳನ್ನೂ ಸಿದ್ದ ಪಡಿಸಿಕೊಳ್ಳಿ. 
  12. ದೋಸೆ ಕಾವಲಿಯಲ್ಲಿ ಸ್ವಲ್ಪ ಎಣ್ಣೆ ಚಿಮುಕಿಸಿ ಬಿಸಿ ಮಾಡಿ. 
  13. ತಯಾರಿಸದ ಕಟ್ಲೇಟ್ ನ್ನು ಅಗತ್ಯವಿದ್ದಷ್ಟು ಎಣ್ಣೆ ಚಿಮುಕಿಸಿ ಎರಡು ಬದಿ ಕಾಯಿಸಿ. ಬಿಸಿ ಬಿಸಿಯಾಗಿ ಬಡಿಸಿ. 


ಗುರುವಾರ, ನವೆಂಬರ್ 2, 2017

Matvadi palya recipe in Kannada | ಮಟವಾಡಿ ಪಲ್ಯ ಮಾಡುವ ವಿಧಾನ

Matvadi palya recipe in Kannada

Matvadi palya recipe in Kannada | ಮಟವಾಡಿ ಪಲ್ಯ ಮಾಡುವ ವಿಧಾನ 

ಮಾಟವಾಡಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1ಕಪ್ ತೊಗರಿಬೇಳೆ 
  2. 4 ಕಪ್ ಹೆಚ್ಚಿದ ಮೆಂತ್ಯ ಸೊಪ್ಪು
  3. 2 - 4 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ 
  4. 1 " ಉದ್ದದ ಶುಂಠಿ
  5. 1/2 ಕಪ್ ತೆಂಗಿನತುರಿ 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 4 ಟೇಬಲ್ ಚಮಚ ಎಣ್ಣೆ
  2. 1 ಟೀ ಚಮಚ ಸಾಸಿವೆ 
  3. 1 ಟೀ ಚಮಚ ಜೀರಿಗೆ
  4. 1 ಟೀ ಚಮಚ ಉದ್ದಿನಬೇಳೆ 
  5. 1 ಟೀ ಚಮಚ ಕಡ್ಲೆಬೇಳೆ
  6. 1 ಒಣಮೆಣಸು
  7. 5 - 6 ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  8. ಒಂದು ದೊಡ್ಡ ಚಿಟಿಕೆ ಇಂಗು 
  9. ಒಂದು ದೊಡ್ಡ ಚಿಟಿಕೆ ಅರಿಶಿನ
  10. ನಿಮ್ಮ ರುಚಿ ಪ್ರಕಾರ ಉಪ್ಪು
  11. ನಿಂಬೆರಸ (ಬೇಕಾದಲ್ಲಿ)

ಮಟವಾಡಿ ಪಲ್ಯ ಮಾಡುವ ವಿಧಾನ:

  1. ಬೇಳೆಯನ್ನು ತೊಳೆದು 2 ಘಂಟೆಗಳ ಕಾಲ ನೆನೆಸಿಡಿ. 
  2. ನೆನೆದ ನಂತರ ನೀರು ಬಗ್ಗಿಸಿ. ಹಸಿರುಮೆಣಸಿನಕಾಯಿ ಮತ್ತು ಶುಂಠಿಯೊಂದಿಗೆ, ನೀರು ಹಾಕದೆ ತರಿ ತರಿಯಾಗಿ ರುಬ್ಬಿ ಕೊಳ್ಳಿ. 
  3. ಅದಕ್ಕೆ ಹೆಚ್ಚಿದ ಮೆಂತ್ಯ ಸೊಪ್ಪು ಮತ್ತು ತೆಂಗಿನತುರಿ ಹಾಕಿ ಕಲಸಿ. 
  4. ೧೫ ನಿಮಿಷಗಳ ಕಾಲ ಆವಿ ಅಥವಾ ಸೆಕೆಯಲ್ಲಿ ಬೇಯಿಸಿ. ನಂತ್ರ ಪುಡಿಪುಡಿ ಮಾಡಿಟ್ಟುಕೊಳ್ಳಿ. 
  5. ಒಂದು ಬಾಣಲೆಯಲ್ಲಿ ಒಗ್ಗರಣೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. 
  6. ಅದಕ್ಕೆ ಪುಡಿ ಮಾಡಿಟ್ಟ ಬೇಳೆ ಮತ್ತು ಮೆಂತ್ಯಸೊಪ್ಪಿನ ಮಿಶ್ರಣ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  7. ಸಣ್ಣ ಉರಿಯಲ್ಲಿ ಬೇಯಿಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. 
  8. ಕೊನೆಯಲ್ಲಿ ನಿಂಬೆರಸ ಹಾಕಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ. 


Related Posts Plugin for WordPress, Blogger...