ಭಾನುವಾರ, ಡಿಸೆಂಬರ್ 31, 2017

Kesuvina gadde palya recipe in Kannada | ಕೆಸುವಿನ ಗಡ್ಡೆ ಪಲ್ಯ ಮಾಡುವ ವಿಧಾನ

Kesuvina gadde palya maduva vidhana

Kesuvina gadde palya maduva vidhana | ಕೆಸುವಿನ ಗಡ್ಡೆ ಪಲ್ಯ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 250gm ಕೆಸುವಿನ ಗೆಡ್ಡೆ
  2. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ 
  3. 1 ಟೀಸ್ಪೂನ್ ಧನಿಯಾ ಪುಡಿ 
  4. 1/2 ಟೀಸ್ಪೂನ್ ಜೀರಿಗೆ ಪುಡಿ 
  5. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ 
  6. ಒಂದು ದೊಡ್ಡ ಚಿಟಿಕೆ ಇಂಗು 
  7. ಒಂದು ಟೇಬಲ್ ಚಮಚ ಅಕ್ಕಿಹಿಟ್ಟು
  8. 2 ಟೇಬಲ್ ಚಮಚ ಮೊಸರು
  9. ಉಪ್ಪು ರುಚಿಗೆ ತಕ್ಕಷ್ಟು
  10. ಒಂದು ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 2 ಟೇಬಲ್ ಚಮಚ ಅಡುಗೆ ಎಣ್ಣೆ 
  2. 1/2 ಚಮಚ ಸಾಸಿವೆ 
  3. 1/2 ಟೀಸ್ಪೂನ್ ಜೀರಿಗೆ  
  4. 4 - 5 ಕರಿಬೇವಿನ ಎಲೆ 

ಕೆಸುವಿನ ಗಡ್ಡೆ ಪಲ್ಯ ಮಾಡುವ ವಿಧಾನ:

  1. ಕೆಸುವಿನಗಡ್ಡೆಯನ್ನು ತೊಳೆದು, ಒಂದು ಕುಕ್ಕರ್ನಲ್ಲಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿ ಒಂದು ವಿಷಲ್ ಮಾಡಿದರೆ ಸಾಕು. 
  2. ನಂತ್ರ ಸಿಪ್ಪೆ ತೆಗೆದು  ದಪ್ಪದ ಗಾಲಿಗಳನ್ನಾಗಿ ಕತ್ತರಿಸಿ. 
  3. ಒಂದು ಬಟ್ಟಲಿನಲ್ಲಿ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ಇಂಗು, ಅಕ್ಕಿ ಹಿಟ್ಟು ಮತ್ತು ಮೊಸರು ತೆಗೆದುಕೊಂಡು ಕಲಸಿ. 
  4. ಅದಕ್ಕೆ ಬೇಯಿಸಿ, ಕತ್ತರಿಸಿದ ಕೆಸುವಿನ ಗಡ್ಡೆ ಹಾಕಿ, ಚೆನ್ನಾಗಿ ಕಲಸಿ ಪಕ್ಕಕ್ಕಿಡಿ. 
  5. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  6. ಅದಕ್ಕೆ ಕಲಸಿಟ್ಟ ಕೆಸುವಿನ ಗಡ್ಡೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಆಗಾಗ್ಯೆ ಮಗುಚುತ್ತಾ ಇರಿ. ಗರಿಗರಿಯಾಗುವವರೆಗೆ ಬೇಯಿಸಬೇಕು. 
  7. ಕೊನೆಯಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ. ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಗುರುವಾರ, ಡಿಸೆಂಬರ್ 21, 2017

Rave onion dose recipe in Kannada | ರವೆ ಈರುಳ್ಳಿ ದೋಸೆ ಮಾಡುವ ವಿಧಾನ

Rave onion dose recipe in Kannada

Rave onion dose recipe in Kannada | ರವೆ ಈರುಳ್ಳಿ ದೋಸೆ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು
  2. 1/4 ಕಪ್ ಮೀಡಿಯಂ ರವೆ
  3. 1/8 ಕಪ್ ಮೈದಾ ಹಿಟ್ಟು
  4. 1 ಟೇಬಲ್ ಚಮಚ ಕಡ್ಲೆಹಿಟ್ಟು (ಬೇಕಾದಲ್ಲಿ)
  5. 2 ಸಣ್ಣಗೆ ಹೆಚ್ಚಿದ ಈರುಳ್ಳಿ
  6. 2.5 ಕಪ್ ನೀರು (ಸ್ವಲ್ಪ ಹೆಚ್ಚು ಕಡಿಮೆ; ದೋಸೆಕಲ್ಲು ಮತ್ತು ಹಿಟ್ಟಿನ ಗುಣಮಟ್ಟ ಅವಲಂಬಿಸಿ)
  7. ಎಣ್ಣೆ ಅಥವಾ ತುಪ್ಪ (ದೋಸೆ ಮಾಡುವಾಗ ಬಳಸಲು)
  8. ಉಪ್ಪು ರುಚಿಗೆ ತಕ್ಕಷ್ಟು

ಪದಾರ್ಥಗಳು (ಬೇಕಾದಲ್ಲಿ): ( ಅಳತೆ ಕಪ್ = 240 ಎಂಎಲ್ )

  1. 1/2 ಟೀಸ್ಪೂನ್ ಜೀರಿಗೆ
  2. 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು 
  3. 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು 
  4. 5 - 6 ಜಜ್ಜಿದ ಕಾಳುಮೆಣಸು
  5. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  6. 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
  7. ಚಿಟಿಕೆ ಇಂಗು
  8. 1 ಟೇಬಲ್ ಚಮಚ ತೆಂಗಿನ ತುರಿ (ನಾನು ಬಳಸಲಿಲ್ಲ)

ರವೆ ಈರುಳ್ಳಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ, ಕಡ್ಲೆಹಿಟ್ಟು ಮತ್ತು ಮೈದಾ ಹಿಟ್ಟು ತೆಗೆದುಕೊಳ್ಳಿ.
  2. ನೀರು ಮತ್ತು ಉಪ್ಪು ಸೇರಿಸಿ ತೆಳುವಾದ ಹಿಟ್ಟು ತಯಾರಿಸಿಕೊಳ್ಳಿ. 
  3. ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿರುಮೆಣಸಿನಕಾಯಿ, ಕಾಳುಮೆಣಸು, ಇಂಗು ಮತ್ತು ಶುಂಠಿ ಸೇರಿಸಿ. 
  4. ಚೆನ್ನಾಗಿ ಕಲಸಿ ಪಕ್ಕಕ್ಕಿಡಿ.
  5. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ತೆಗೆದುಕೊಂಡು ಮೆತ್ತಗಾಗುವವರೆಗೆ ಹುರಿಯಿರಿ. 
  6. ಬಿಸಿ ಆರಿದ ಮೇಲೆ ತಯಾರಿಸಿದ ಹಿಟ್ಟಿಗೆ ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ತೆಳ್ಳನೆ ಹಿಟ್ಟು ತಯಾರಿಸಿಕೊಳ್ಳಿ.  
  7. ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ. 
  8. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  9. ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಈ ದೋಸೆಗೆ ಮುಚ್ಚಳ ಮುಚ್ಚ ಬೇಕಾಗಿಲ್ಲ. 
  10. ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.

ಮಂಗಳವಾರ, ಡಿಸೆಂಬರ್ 19, 2017

Hunasekayi thokku recipe in Kannada | ಹುಣಸೆಕಾಯಿ ತೊಕ್ಕು ಮಾಡುವ ವಿಧಾನ

Hunasekayi thokku recipe in Kannada

Hunasekayi thokku recipe in Kannada | ಹುಣಸೆಕಾಯಿ ತೊಕ್ಕು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 250gm ಹುಣಸೆಕಾಯಿ
  2. 5 - 10 ಒಣ ಮೆಣಸಿನಕಾಯಿ
  3. 1 ಟೀಸ್ಪೂನ್ ಮೆಂತೆ
  4. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಇಂಗು
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 1/4 ಟೀಸ್ಪೂನ್ ಇಂಗು
  5. 4 ಟೇಬಲ್ ಚಮಚ ಎಣ್ಣೆ

ಹುಣಸೆಕಾಯಿ ತೊಕ್ಕು ಮಾಡುವ ವಿಧಾನ:

  1. ಹುಣಸೆಕಾಯಿಯನ್ನು ತೊಳೆದು ನೀರಾರಿಸಿ. 
  2. ಪ್ರತಿ ಕಾಯಿಯನ್ನು ಮುರಿಯುತ್ತಾ ನಾರನ್ನು ತೆಗೆಯಿರಿ. 
  3. ನಂತರ ಅದನ್ನು ಕುಟ್ಟಾಣಿಯಲ್ಲಿ ಜಜ್ಜಿ. ಬೀಜ ಗಟ್ಟಿ ಇದ್ದರೆ ತೆಗೆದುಹಾಕಿ.
  4. ಒಂದು ಬಾಣಲೆಯಲ್ಲಿ ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ತೆಗೆದಿಡಿ. 
  5. ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಇಂಗು ಮತ್ತು ಅರಿಶಿನ ಪುಡಿಯ ಒಗ್ಗರಣೆ ಮಾಡಿ. ಸ್ಟವ್ ಆಫ್ ಮಾಡಿ, ಆರಲು ಬಿಡಿ. 
  6. ಈಗ ಮಿಕ್ಸಿ ಜಾರಿನಲ್ಲಿ ಹುರಿದ ಮೆಂತೆ ಮತ್ತು ಹಸಿರುಮೆಣಸಿನಕಾಯಿ (ತೊಳೆದು, ಆರಿಸಿದ್ದು) ಹಾಕಿ. ನೀರು ಸೇರಿಸದೆ ಅರೆಯಿರಿ. 
  7. ನಂತ್ರ ಅದಕ್ಕೆ ಜಜ್ಜಿದ ಹುಣಸೆಕಾಯಿ ಹಾಕಿ, ನೀರು ಹಾಕದೆ ಅರೆಯಿರಿ. 
  8. ಉಪ್ಪು ಸೇರಿಸಿ ಪುನಃ ಅರೆಯಿರಿ. 
  9. ಬಾಣಲೆಯಲ್ಲಿನ ಒಗ್ಗರಣೆ ಬಿಸಿ ಆರಿದ ಮೇಲೆ ಅರೆದ ಮಿಶ್ರಣವನ್ನು ಹಾಕಿ. 
  10. ಚೆನ್ನಾಗಿ ಮಗುಚಿ. ತಣ್ಣಗಾದ ಮೇಲೆ ಗಾಜಿನ ಬಾಟಲಿಯಲ್ಲಿ ಹಾಕಿ ಎತ್ತಿಡಿ. 
  11. ಹುಣಸೆಕಾಯಿ ತೊಕ್ಕು ಸವಿಯಲು ಸಿದ್ಧ. ಹೆಚ್ಚಿನ ಪ್ರಮಾಣದಲ್ಲಿ ಮಾಡುವುದಾದಲ್ಲಿ, ಒಗ್ಗರಣೆಯನ್ನು ಬಳಸುವ ಮುನ್ನ ಸೇರಿಸಿದರೆ ಸಾಕು. 

ಭಾನುವಾರ, ಡಿಸೆಂಬರ್ 17, 2017

Home remedy for kapha in Kannada | ಕಫಕ್ಕೆ ಮನೆಮದ್ದು ಮಾಡುವ ವಿಧಾನ

Home remedy for kapha in Kannada

Home remedy for kapha in Kannada | ಕಫಕ್ಕೆ ವೀಳ್ಯದೆಲೆ, ತುಳಸಿ ಮತ್ತು ಜೇನಿನ ಮನೆಮದ್ದು

ವೀಳ್ಯದೆಲೆ-ತುಳಸಿ ಮನೆಮದ್ದು ವಿಡಿಯೋ

ಬೇಕಾಗುವ ಪದಾರ್ಥಗಳು (ಮಕ್ಕಳಿಗೆ): (ಅಳತೆ ಕಪ್ = 240 ಎಂಎಲ್ )

  1. 1 ವೀಳ್ಯದೆಲೆ
  2. 9 ದಳ ತುಳಸಿ
  3. 1/2 ಚಮಚ ಜೇನುತುಪ್ಪ

ಬೇಕಾಗುವ ಪದಾರ್ಥಗಳು (ದೊಡ್ಡವರಿಗೆ): (ಅಳತೆ ಕಪ್ = 240 ಎಂಎಲ್ )

  1. 2 ವೀಳ್ಯದೆಲೆ
  2. 9 ದಳ ತುಳಸಿ
  3. ದೊಡ್ಡ ಚಿಟಿಕೆ ಒಣ ಶುಂಠಿ ಪುಡಿ
  4. 2 - 4 ಕಾಳುಮೆಣಸು
  5. 1/2 ಚಮಚ ಜೇನುತುಪ್ಪ

ಮಕ್ಕಳಿಗೆ ಮನೆಮದ್ದು ತಯಾರಿಸುವ ವಿಧಾನ:

  1. ವೀಳ್ಯದೆಲೆ ಮತ್ತು ತುಳಸಿಯನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ. 
  2. ಎಲೆಗಳನ್ನು ಚೂರುಗಳಾಗಿ ಮಾಡಿ, ಒಂದು ಸಣ್ಣ ಬಟ್ಟಲಿನಲ್ಲಿ ಅಥವಾ ಒರಳಿನಲ್ಲಿ ತೆಗೆದುಕೊಳ್ಳಿ. 
  3. ನಂತರ ಚೂರುಮಾಡಿದ ಎಲೆಗಳನ್ನು ಚೆನ್ನಾಗಿ ಗುದ್ದಿ.
  4. ಒಂದು ಬಟ್ಟೆಯ ಸಹಾಯದಿಂದ ಅಥವಾ ಕೈಬೆರಳುಗಳ ಸಹಾಯದಿಂದ ರಸವನ್ನು ಹಿಂಡಿ ತೆಗೆಯಿರಿ.
  5. ಅದಕ್ಕೆ ಅರ್ಧ ಚಮಚ ಜೇನು ಬೆರೆಸಿ, ಮಗುವಿಗೆ ಕುಡಿಸಿ. ದಿನಕ್ಕೆ ಎರಡು ಬಾರಿ ಕುಡಿಸಿದರೆ ಸಾಕು. 

ದೊಡ್ಡವರಿಗೆ ಮನೆಮದ್ದು ತಯಾರಿಸುವ ವಿಧಾನ:

  1. ವೀಳ್ಯದೆಲೆ ಮತ್ತು ತುಳಸಿಯನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ. 
  2. ಎಲೆಗಳೊಂದಿಗೆ ಒಣ ಶುಂಠಿ ಪುಡಿ, ಕಾಳುಮೆಣಸು ಮತ್ತು ಜೇನು ತೆಗೆದುಕೊಳ್ಳಿ. 
  3. ಎಲ್ಲವನ್ನು ಒಟ್ಟು ಸೇರಿಸಿ, ಮಡಸಿ ಜಗಿದು ತಿನ್ನಿ. 
  4. ದಿನಕ್ಕೆ ಎರಡರಿಂದ  ಮೂರು ಬಾರಿ ತಿನ್ನಬಹುದು. 


ಶುಕ್ರವಾರ, ಡಿಸೆಂಬರ್ 15, 2017

Mango ginger chutney recipe in Kannada | ಮಾವಿನಕಾಯಿ ಶುಂಠಿ ಚಟ್ನಿ ಮಾಡುವ ವಿಧಾನ

 Mango ginger chutney recipe in Kannada

Mango ginger chutney recipe in Kannada | ಮಾವಿನಕಾಯಿ ಶುಂಠಿ ಚಟ್ನಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು (ವಿಧಾನ 1): (ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ 
  2. ಒಂದು ಬೆರಳುದ್ದ ಮಾವಿನಕಾಯಿ ಶುಂಠಿ
  3. 1 - 2 ಹಸಿರು ಮೆಣಸಿನಕಾಯಿ 
  4. ಸ್ವಲ್ಪ ಹುಣಿಸೆ ಹಣ್ಣು 
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಎಣ್ಣೆ 
  2. 4 ಕರಿಬೇವಿನ ಎಲೆ
  3. 1/4 ಟಿಸ್ಪೂನ್ ಸಾಸಿವೆ 
  4. ಒಂದು ಒಣ ಮೆಣಸು (ಬೇಕಾದಲ್ಲಿ)
  5. ಒಂದು ಚಿಟಿಕೆ ಇಂಗು

ಬೇಕಾಗುವ ಪದಾರ್ಥಗಳು (ವಿಧಾನ 2): (ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ 
  2. ಒಂದು ಬೆರಳುದ್ದ ಮಾವಿನಕಾಯಿ ಶುಂಠಿ
  3. ಸ್ವಲ್ಪ ಹುಣಿಸೆ ಹಣ್ಣು 
  4. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಎಣ್ಣೆ 
  2. 2 ಟಿಸ್ಪೂನ್ ಉದ್ದಿನಬೇಳೆ
  3. 1/4 ಟಿಸ್ಪೂನ್ ಸಾಸಿವೆ 
  4. ಎರಡು ಒಣ ಮೆಣಸು
  5. ಒಂದು ಚಿಟಿಕೆ ಇಂಗು

ಮಾವಿನಕಾಯಿ ಶುಂಠಿ ಚಟ್ನಿ ಮಾಡುವ ವಿಧಾನ - ವಿಧಾನ ೧:

  1. ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುಣಿಸೆ ಹಣ್ಣು, ಹಸಿರುಮೆಣಸಿನ ಕಾಯಿ, ಸ್ವಚ್ಛಗೊಳಿಸಿದ ಮಾವಿನಕಾಯಿ ಶುಂಠಿ ಮತ್ತು ಉಪ್ಪು ಹಾಕಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  3. ಒಂದು ಬಟ್ಟಲಿಗೆ ತೆಗೆದು, ಸಾಸಿವೆ, ಕರಿಬೇವು, ಒಣ ಮೆಣಸು ಮತ್ತು ಇಂಗಿನ ಒಗ್ಗರಣೆ ಕೊಡಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಮಾವಿನಕಾಯಿ ಶುಂಠಿ ಚಟ್ನಿ ಮಾಡುವ ವಿಧಾನ - ವಿಧಾನ ೨:

  1. ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುಣಿಸೆ ಹಣ್ಣು, ಸ್ವಚ್ಛಗೊಳಿಸಿದ ಮಾವಿನಕಾಯಿ ಶುಂಠಿ ಮತ್ತು ಉಪ್ಪು ಹಾಕಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ.
  3. ಸಾಸಿವೆ, ಉದ್ದಿನಬೇಳೆ, ಒಣ ಮೆಣಸು ಮತ್ತು ಇಂಗಿನ ಒಗ್ಗರಣೆ ಮಾಡಿ. ಚಟ್ನಿ ಇರುವ ಮಿಕ್ಸಿ ಜಾರಿಗೆ ಹಾಕಿ ಪುನಃ ಅರೆಯಿರಿ. ಒಂದು ಬಟ್ಟಲಿಗೆ ತೆಗೆಯಿರಿ. ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

ಬುಧವಾರ, ಡಿಸೆಂಬರ್ 13, 2017

Nippattu recipe in Kannada | ನಿಪ್ಪಟ್ಟು ಮಾಡುವ ವಿಧಾನ

Nippattu recipe in Kannada

Nippattu recipe in Kannada | ನಿಪ್ಪಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1/4 ಕಪ್ ಹುರಿಗಡಲೆ ಅಥವಾ ಪುಟಾಣಿ
  3. 1/4 ಕಪ್ ನೆಲಗಡಲೆ ಅಥವಾ ಶೇಂಗಾ
  4. 1/4 ಕಪ್ ಚಿರೋಟಿ ರವೇ ಅಥವಾ ಮೈದಾ ಹಿಟ್ಟು
  5. 1/4 ಕಪ್ ತೆಂಗಿನ ತುರಿ 
  6. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  7. 1/2 ಟೀಸ್ಪೂನ್ ಓಂಕಾಳು
  8. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  9. ಒಂದು ದೊಡ್ಡ ಚಿಟಿಕೆ ಇಂಗು
  10. 2 ಎಸಳು ಕರಿಬೇವು
  11. 2.5 ಟೇಬಲ್ ಚಮಚ ಬಿಸಿ ಎಣ್ಣೆ
  12. ಎಣ್ಣೆ ಕೋಡುಬಳೆ ಕಾಯಿಸಲು


ನಿಪ್ಪಟ್ಟು ಮಾಡುವ ವಿಧಾನ:

  1. ಅಕ್ಕಿ ಹಿಟ್ಟು ಮತ್ತು ಚಿರೋಟಿ ರವೇ (ಅಥವಾ ಮೈದಾ ಹಿಟ್ಟ) ನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ.
  2. ಅದಕ್ಕೆ ಅದಕ್ಕೆ ಒಂದು ಟೇಬಲ್ ಚಮಚ ಹುರಿಗಡಲೆ ಸೇರಿಸಿ. 
  3. ಉಳಿದ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಸೇರಿಸಿ. 
  4. ನೆಲಗಡಲೆಯನ್ನು ಗರಿಗರಿಯಾಗುವವರೆಗೆ ಹುರಿದು, ತರಿತರಿಯಾಗಿ  ಪುಡಿಮಾಡಿ ಸೇರಿಸಿ.  
  5. ನಂತರ ಅಚ್ಚಖಾರದ ಪುಡಿ, ಇಂಗು, ಓಂಕಾಳು ಮತ್ತು ಉಪ್ಪನ್ನು ಹಾಕಿ ಕಲಸಿ. 
  6. ತೆಂಗಿನ ತುರಿ ಮತ್ತು ಸಣ್ಣಗೆ ಕತ್ತರಿಸಿದ ಕರಿಬೇವು ಸೇರಿಸಿ ಕಲಸಿ. 
  7. ನಂತ್ರ 2 ಟೇಬಲ್ ಚಮಚ ಬಿಸಿ ಬಿಸಿ ಎಣ್ಣೆಯನ್ನು ಹಾಕಿ, ಚೆನ್ನಾಗಿ ಒತ್ತಿ ಕಲಸಿ. 
  8. ಕಲಸಿದ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಹಿಟ್ಟು ಮೆತ್ತಗಿದ್ದರೆ ನಿಪ್ಪಟ್ಟು ಗರಿಗರಿಯಾಗುವುದಿಲ್ಲ.
  9. ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ನಿಪ್ಪಟ್ಟು ಮಾಡಿ. 
  10. ಎಣ್ಣೆ ಬಿಸಿ ಮಾಡಿ ನಿಪ್ಪಟ್ಟನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.

ಸೋಮವಾರ, ಡಿಸೆಂಬರ್ 11, 2017

Genasina palya recipe in Kannada | ಗೆಣಸಿನ ಪಲ್ಯ ಅಥವಾ ಒಗ್ಗರಣೆ ಮಾಡುವ ವಿಧಾನ

Genasina palya recipe in Kannada

Genasina palya recipe in Kannada | ಗೆಣಸಿನ ಪಲ್ಯ ಅಥವಾ ಒಗ್ಗರಣೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 kg ಗೆಣಸು
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  5. 1 ದೊಡ್ಡ ಚಿಟಿಕೆ ಇಂಗು
  6. 1 - 2 ಹಸಿ ಮೆಣಸಿನಕಾಯಿ
  7. 4 - 5 ಕರಿಬೇವಿನ ಎಲೆ
  8. 1/2 ಟೀಸ್ಪೂನ್ ಹೆಚ್ಚಿದ ಶುಂಠಿ
  9. 1 ದೊಡ್ಡ ಈರುಳ್ಳಿ
  10. 4 ಟೀಸ್ಪೂನ್ ಅಡುಗೆ ಎಣ್ಣೆ
  11. ಉಪ್ಪು ರುಚಿಗೆ ತಕ್ಕಷ್ಟು
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು

ಗೆಣಸಿನ ಪಲ್ಯ ಅಥವಾ ಒಗ್ಗರಣೆ ಮಾಡುವ ವಿಧಾನ:

  1. ಗೆಣಸನ್ನು ತೊಳೆದು, ಅಗತ್ಯವಿದ್ದಷ್ಟು ನೀರು ಸೇರಿಸಿ ಬೇಯಿಸಿ.
  2. ಬಿಸಿ ಆರಿದ ಮೇಲೆ ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ ಹಾಕಿ. 
  4. ಸಾಸಿವೆ ಸಿಡಿದ ಕೂಡಲೇ ಅರಶಿನ ಮತ್ತು ಇಂಗು ಸೇರಿಸಿ. 
  5. ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  6. ನಂತ್ರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ. 
  7. ಅದಕ್ಕೆ ಬೇಯಿಸಿ ಕತ್ತರಿಸಿದ ಗೆಣಸು ಹಾಕಿ. 
  8. ಪುಡಿ ಉಪ್ಪು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ. ಚೆನ್ನಾಗಿ ಮಗುಚಿ. 
  9. ಕೊತ್ತಂಬರಿ ಸೊಪ್ಪನ್ನು ಉದುರಿಸಿ ಒಮ್ಮೆ ಮಗುಚಿ.  ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ. ಉಪ್ಪು ಕಡಿಮೆ ಹಾಕಿದಲ್ಲಿ ಹಾಗೇ ತಿನ್ನಬಹುದು. 

ಶುಕ್ರವಾರ, ಡಿಸೆಂಬರ್ 8, 2017

Hasi batani parota recipe in Kannada | ಹಸಿ ಬಟಾಣಿ ಪರೋಟ ಮಾಡುವ ವಿಧಾನ

Hasi batani parota recipe in Kannada

Hasi batani parota recipe in Kannada | ಹಸಿ ಬಟಾಣಿ ಪರೋಟ ಮಾಡುವ ವಿಧಾನ 

ಹಸಿ ಬಟಾಣಿ ಪರೋಟ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಗೋಧಿ ಹಿಟ್ಟು (8 ದೊಡ್ಡ ಚಪಾತಿಗಾಗುವಷ್ಟು)
  2. 2 ಕಪ್ ಹಸಿ ಬಟಾಣಿ 
  3. 4 ಎಸಳು ಬೆಳ್ಳುಳ್ಳಿ 
  4. 1 cm ಉದ್ದದ ಶುಂಠಿ
  5. 2 - 3 ಹಸಿರುಮೆಣಸಿನಕಾಯಿ 
  6. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 1 ಟೀಸ್ಪೂನ್ ಜೀರಿಗೆ
  8. 1/4 ಟೀಸ್ಪೂನ್ ಗರಂ ಮಸಾಲಾ 
  9. ಚಿಟಿಕೆ ಅರಶಿನ ಪುಡಿ 
  10. 12 ಟೀಸ್ಪೂನ್ ಅಡುಗೆ ಎಣ್ಣೆ
  11. ಉಪ್ಪು ರುಚಿಗೆ ತಕ್ಕಷ್ಟು

ಹಸಿ ಬಟಾಣಿ ಪರೋಟ ಮಾಡುವ ವಿಧಾನ:

  1. ಮೃದುವಾದ ಚಪಾತಿ ಹಿಟ್ಟು ಕಲಸಿ ಮುಚ್ಚಿಡಿ. 
  2. ಹಸಿಬಟಾಣಿಯನ್ನು ನೀರು ಹಾಕದೆ ಆವಿಯಲ್ಲಿ ಬೇಯಿಸಿ. ನೀರು ಹಾಕಿ ಬೇಯಿಸಿದಲ್ಲಿ ಸಂಪೂರ್ಣವಾಗಿ ನೀರನ್ನು ಬಸಿಯಿರಿ.  
  3. ಒಂದು ಮಿಕ್ಸಿ ಜಾರಿನಲ್ಲಿ ಬೆಳ್ಳುಳ್ಳಿ, ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಅರೆಯಿರಿ. 
  4. ಅದಕ್ಕೆ ಬೇಯಿಸಿದ ಬಟಾಣಿ ಹಾಕಿ ತರಿತರಿಯಾಗಿ ಅರೆಯಿರಿ. 
  5. ಒಂದು ಬಾಣಲೆಗೆ 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. 
  6. ಕಾದ ಎಣ್ಣೆಗೆ ಜೀರಿಗೆ ಹಾಕಿ. 
  7. ಜೀರಿಗೆ ಸಿಡಿದ ಕೂಡಲೇ ಅರೆದಿಟ್ಟ ಮಿಶ್ರಣ ಹಾಕಿ ಕೈಯಾಡಿಸಿ. 
  8. ನಂತರ ಅದಕ್ಕೆ ಉಪ್ಪು, ಗರಂ ಮಸಾಲಾ ಮತ್ತು ಅರಿಶಿನ ಹಾಕಿ ಕಲಸಿ. ಹೆಚ್ಚಿನ ನೀರಿನಂಶ ಆರಿದ ಮೇಲೆ ಸ್ಟವ್ ಆಫ್ ಮಾಡಿ. 
  9. ಬಿಸಿ ಆರಿದ ಮೇಲೆ ನಿಂಬೆಗಾತ್ರದ ಉಂಡೆಗಳನ್ನು ಮಾಡಿ. 
  10. ನಂತರ ಕಲಸಿಟ್ಟ ಚಪಾತಿ ಹಿಟ್ಟಿನಿಂದ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಅದರೊಳಗೆ ಬಟಾಣಿಯ ಉಂಡೆಗಳನ್ನು ಸೇರಿಸಿ. 
  11. ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
  12. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. 
  13. ಖಾಯಿಸಿದ ಮೇಲೆ ಎರಡೂ ಬದಿಯೂ ಸ್ವಲ್ಪ ತುಪ್ಪ ಹಚ್ಚಿ ಬಡಿಸಿ.

ಗುರುವಾರ, ಡಿಸೆಂಬರ್ 7, 2017

Basale soppu thambli in kannada | ಬಸಳೆ ಸೊಪ್ಪು ತಂಬುಳಿ ಮಾಡುವ ವಿಧಾನ

Basale soppu thambli in kannada

Basale soppu thambli in kannada | ಬಸಳೆ ಸೊಪ್ಪು ತಂಬುಳಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಹಿಡಿ ಬಸಳೆಸೊಪ್ಪು
  2. 1/2 ಟೀಸ್ಪೂನ್ ಜೀರಿಗೆ
  3. 1/2 ಟೀಸ್ಪೂನ್ ಕಾಳುಮೆಣಸು
  4. 1/4 ಕಪ್ ತೆಂಗಿನತುರಿ
  5. 1/2 ಕಪ್ ಮೊಸರು
  6. 1 ಒಣ ಮೆಣಸಿನಕಾಯಿ
  7. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  8. 1/4 ಟೀಸ್ಪೂನ್ ಸಾಸಿವೆ
  9. ಉಪ್ಪು ರುಚಿಗೆ ತಕ್ಕಷ್ಟು.

ಬಸಳೆ ಸೊಪ್ಪು ತಂಬುಳಿ ಮಾಡುವ ವಿಧಾನ:

  1. ಬಸಳೆ ಸೊಪ್ಪನ್ನು ಆಯ್ದು, ತೊಳೆದು ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. 
  3. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಬಸಳೆ ಸೊಪ್ಪನ್ನು ಹಾಕಿ.
  4. ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
  5. ಹುರಿದ ಪದಾರ್ಥಗಳು ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ.  
  6. ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  7. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. 
  8. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಡಿಸೆಂಬರ್ 5, 2017

Suvarna gadde sambar recipe in Kannada | ಸುವರ್ಣ ಗಡ್ಡೆ ಸಾಂಬಾರ್ ಮಾಡುವ ವಿಧಾನ

Suvarna gadde sambar recipe in Kannada

Suvarna gadde sambar recipe in Kannada | ಸುವರ್ಣ ಗಡ್ಡೆ ಸಾಂಬಾರ್ ಮಾಡುವ ವಿಧಾನ

ಸುವರ್ಣ ಗಡ್ಡೆ ಸಾಂಬಾರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 kg ಸುವರ್ಣ ಗಡ್ಡೆ
  2. 4 ಟೇಬಲ್ ಚಮಚ ತೊಗರಿಬೇಳೆ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. 1 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ, ಹಾಕಿದರೆ ಒಳ್ಳೆಯದು)
  6. ಗೋಲಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/ ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1.5 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು (ಬೇಕಾದಲ್ಲಿ)
  7. ಒಂದು ಚಿಟಿಕೆ ಇಂಗು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಸುವರ್ಣ ಗಡ್ಡೆ ಸಾಂಬಾರ್ ಮಾಡುವ ವಿಧಾನ:

  1. ಸುವರ್ಣ ಗಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು ಕತ್ತರಿಸಿ.
  2. ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಬೇಳೆಯನ್ನು ಬೇಯಿಸಿ.
  3. ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ಸುವರ್ಣ ಗಡ್ಡೆ, ಸ್ವಲ್ಪ ಉಪ್ಪು, ಬೆಲ್ಲ ಮತ್ತು ಹುಣಿಸೆ ರಸ ಹಾಕಿ. 1 ಲೋಟ ನೀರು ಹಾಕಿ ಒಂದು ವಿಷಲ್ ಮಾಡಿ. ಸುವರ್ಣ ಗಡ್ಡೆ ಬೇಗ ಬೇಯುವುದರಿಂದ ವಿಷಲ್ ಮಾಡದೇ ಹಾಗೇ ಸಹ ಬೇಯಿಸಬಹುದು. 
  4. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  6. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ. 
  7. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
  8. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಡಿಸೆಂಬರ್ 1, 2017

Instant uppittu mix recipe in Kannada | ದಿಢೀರ್ ಉಪ್ಪಿಟ್ಟು ಮಿಕ್ಸ್ ಮಾಡುವ ವಿಧಾನ

Instant uppittu mix recipe in Kannada

Instant uppittu mix recipe in Kannada | ದಿಢೀರ್ ಉಪ್ಪಿಟ್ಟು ಮಿಕ್ಸ್ ಮಾಡುವ ವಿಧಾನ 

ಮಿಕ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ರವೆ
  2. 1/4 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಉದ್ದಿನಬೇಳೆ
  4. 1/2 ಟೀಸ್ಪೂನ್ ಕಡ್ಲೆಬೇಳೆ (ಬೇಕಾದಲ್ಲಿ)
  5. ದೊಡ್ಡ ಚಿಟಿಕೆ ಇಂಗು
  6. 1-2 ಹಸಿರು ಮೆಣಸಿನಕಾಯಿ
  7. 5-6 ಕರಿ ಬೇವಿನ ಎಲೆ
  8. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. ದೊಡ್ಡ ಚಿಟಿಕೆ ಅರಶಿನ ಪುಡಿ
  10. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ
  11. 1/2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  12. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)

ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1.25 ಕಪ್ ನೀರು
  2. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  3. 2 ಟೇಬಲ್ ಸ್ಪೂನ್ ತೆಂಗಿನತುರಿ


ದಿಢೀರ್ ಉಪ್ಪಿಟ್ಟು ಮಿಕ್ಸ್ ಮಾಡುವ ವಿಧಾನ:

  1. ಮೊದಲಿಗೆ ರವೆಯನ್ನು ಹುರಿದಿಟ್ಟುಕೊಳ್ಳಿ. 
  2. ಆಮೇಲೆ ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ ಒಗ್ಗರಣೆ ತಯಾರಿಸಿ
  3. ಸಾಸಿವೆ ಸಿಡಿದ ಕೂಡಲೇ ಗೋಡಂಬಿ, ಇಂಗು ಮತ್ತು ಅರಿಶಿನ ಪುಡಿ ಸೇರಿಸಿ. 
  4. ನಂತರ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಕೈಯಾಡಿಸಿ. 
  5. ಹುರಿದಿಟ್ಟ ರವೆ ಸೇರಿಸಿ ಮಧ್ಯಮ ಉರಿಯಲ್ಲಿ ಒಂದೆರಡು ನಿಮಿಷಗಳ ಕಾಲ ಹುರಿಯಿರಿ.
  6. ಉಪ್ಪು ,ಮತ್ತು ಸಕ್ಕರೆ ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಎತ್ತಿಡಿ. 
  7. ನಂತರ ಉಪ್ಪಿಟ್ಟು ಮಾಡಲು ಒಂದು ಬಾಣಲೆಯಲ್ಲಿ ನೀರನ್ನು ಕುದಿಯಲು ಇಡಿ. 
  8. ನೀರು ಕುದಿಯಲಾರಂಭಿಸಿದಾಗ ಅದಕ್ಕೆ ಉಪ್ಪಿಟ್ಟು ಮಿಕ್ಸ್ ಹಾಕಿ ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ. 
  9. ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ.

Related Posts Plugin for WordPress, Blogger...