ಬುಧವಾರ, ಜನವರಿ 31, 2018

Berake soppu sambar recipe in Kannada | ಬೆರಕೆ ಸೊಪ್ಪು ಸಾಂಬಾರ್ ಮಾಡುವ ವಿಧಾನ

Berake soppu sambar recipe in Kannada

Berake soppu sambar recipe in Kannada | ಬೆರಕೆ ಸೊಪ್ಪು ಸಾಂಬಾರ್ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:

  1. 1 ದೊಡ್ಡ ಕಟ್ಟು ಬೆರಕೆ ಸೊಪ್ಪು (ಪಾಲಕ್, ದಂಟು, ಹರಿವೆ, ಸಬ್ಸಿಗೆ, ಮೆಂತೆ ಇತ್ಯಾದಿ)
  2. 1 ಟೊಮೇಟೊ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  5. 1 ಟೀಸ್ಪೂನ್ ಬೆಲ್ಲ
  6. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿ ಪ್ರಕಾರ)

ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 1/4 ಟೀಸ್ಪೂನ್ ಸಾಸಿವೆ
  7. 10 -12 ಮೆಂತ್ಯ 
  8. 5 - 6 ಕಾಳುಮೆಣಸು (ಬೇಕಾದಲ್ಲಿ)
  9. 1/4 ಟೀಸ್ಪೂನ್ ಇಂಗು
  10. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವಿನ ಎಲೆ
  3. 1/4 ಟೀಸ್ಪೂನ್ ಸಾಸಿವೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ
  5. ಒಂದು ಈರುಳ್ಳಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
  6. 5 - 6 ಬೇಳೆ ಬೆಳ್ಳುಳ್ಳಿ  (ಬೇಕಾದಲ್ಲಿ)

ಬೆರಕೆ ಸೊಪ್ಪು ಸಾಂಬಾರ್ ಮಾಡುವ ವಿಧಾನ:

  1. ಸೊಪ್ಪುಗಳನ್ನು ಆಯ್ದು, ತೊಳೆದು, ಕತ್ತರಿಸಿ.
  2. ಒಂದು ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು ತೊಳೆಯಿರಿ. ಅರಿಶಿನ ಪುಡಿ, ಒಂದೆರಡು ಹನಿ ಎಣ್ಣೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಬೇಳೆಯನ್ನು ಮೆತ್ತಗೆ ಬೇಯಿಸಿ. 
  3. ನಂತ್ರ ಅದಕ್ಕೆ ಕತ್ತರಿಸಿದ ಸೊಪ್ಪು, ಉಪ್ಪು ಮತ್ತು ಟೊಮೇಟೊ ಹಾಕಿ. 
  4.  ಅಗತ್ಯವಿದ್ದಷ್ಟು ನೀರು ಸೇರಿಸಿ ಸೊಪ್ಪು ಮೆತ್ತಗಾಗುವವರೆಗೆ ಬೇಯಿಸಿ. 
  5. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಸಾಸಿವೆ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  6. ಉದ್ದಿನಬೇಳೆ ಹೊಂಬಣ್ಣಕ್ಕೆ ತಿರುಗಿದ ಕೂಡಲೇ ಸ್ಟವ್ ಆಫ್ ಮಾಡಿ. 
  7. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  8. ಅರೆದ ಮಸಾಲೆಯನ್ನು ಬೇಯಿಸಿದ ಸೊಪ್ಪು+ಬೇಳೆ+ಟೊಮೇಟೊ ಇರುವ ಕುಕ್ಕರ್ ಗೆ ಹಾಕಿ. 
  9. ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ.
  10. ನಿಮಗೆ ಸಾಂಬಾರ್ ಎಷ್ಟು ದಪ್ಪ ಬೇಕೋ ಅಷ್ಟು ನೀರು ಸೇರಿಸಿ, ಮಗುಚಿ, ಕುದಿಸಿ. 
  11. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬೇಕಾದಲ್ಲಿ ಸಣ್ಣಗೆ ಕತ್ತರಿಸಿದ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಒಗ್ಗರಣೆಗೆ ಸೇರಿಸಬಹುದು. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಜನವರಿ 30, 2018

Sabakki paddu recipe in kannada | ಸಾಬಕ್ಕಿ ಪಡ್ದು ಮಾಡುವ ವಿಧಾನ

Sabakki paddu recipe in kannada

Sabakki paddu recipe in kannada | ಸಾಬಕ್ಕಿ ಪಡ್ದು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಾಬಕ್ಕಿ
  2. 1/4 ಕಪ್ ಸಣ್ಣ ರವೆ
  3. 1 ಟೇಬಲ್ ಸ್ಪೂನ್ ಮೊಸರು (ಬೇಕಾದಲ್ಲಿ)
  4. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
  5. 1 - 2 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  6. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  7. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು 
  8. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. ಎಣ್ಣೆ ಪಡ್ಡು ಮಾಡಲು 
  10. ಉಪ್ಪು ರುಚಿಗೆ ತಕ್ಕಷ್ಟು.

ಸಾಬಕ್ಕಿ ಪಡ್ದು ಮಾಡುವ ವಿಧಾನ:

  1. ಸಾಬಕ್ಕಿಯನ್ನು 4 - 5 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅಥವಾ ಎರಡು ಬೆರಳುಗಳಿಂದ ಒತ್ತಿ ಪುಡಿಮಾಡಲು ಆಗುವಷ್ಟು ನೆನೆಸಬೇಕು. 
  2. ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಡಿ.
  3. ನೆನೆಸಿದ ಸಾಬಕ್ಕಿಯ ನೀರು ಬಗ್ಗಿಸಿ. ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. 
  4. ಅದಕ್ಕೆ ರವೇ, ಉಪ್ಪು ಮತ್ತು ಮೊಸರು ಸೇರಿಸಿ. 
  5. ಚೆನ್ನಾಗಿ ಕೈಯಲ್ಲಿ ಹಿಸುಕಿ ಕಲಸಿ.
  6. ನಂತ್ರ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕಲಸಿ.
  7. ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  8. ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ಸಣ್ಣ-ಮಧ್ಯಮ ಉರಿಯಲ್ಲಿ ಬೇಯಿಸಿ. 
  9. ಸುಮಾರು ಒಂದು ನಿಮಿಷದ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  10. ಪಡ್ಡುವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ಬಿಸಿ ಅಥವಾ ತಣ್ಣಗೆ ಬಡಿಸಿ. 


ಗುರುವಾರ, ಜನವರಿ 25, 2018

Bellulli rice recipe in Kannada | ಬೆಳ್ಳುಳ್ಳಿ ರೈಸ್ ಮಾಡುವ ವಿಧಾನ

Bellulli rice recipe in Kannada

Bellulli rice recipe in Kannada | ಬೆಳ್ಳುಳ್ಳಿ ರೈಸ್ ಮಾಡುವ ವಿಧಾನ 

ಬೆಳ್ಳುಳ್ಳಿ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1/4 ಕಪ್ ತೆಂಗಿನ ತುರಿ
  3. 1 ಮಧ್ಯಮ ಗಾತ್ರದ ಬೆಳ್ಳುಳ್ಳಿ
  4. 3 - 4 ಒಣ ಮೆಣಸಿನಕಾಯಿ
  5. 1/2 ಟೀಸ್ಪೂನ್ ಸಾಸಿವೆ
  6. 2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
  7. 1 ಟೀಸ್ಪೂನ್ ಉದ್ದಿನ ಬೇಳೆ
  8. 1 ಟೀಸ್ಪೂನ್ ಕಡ್ಲೆಬೇಳೆ
  9. 1 ಟೇಬಲ್ ಸ್ಪೂನ್ ಗೋಡಂಬಿ
  10. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  11. 5 - 6 ಕರಿಬೇವಿನ ಎಲೆ
  12. 1/4 ಟೀಸ್ಪೂನ್ ಅರಿಶಿನ ಪುಡಿ
  13. 2 ಟೀಸ್ಪೂನ್ ನಿಂಬೆರಸ (ಬೇಕಾದಲ್ಲಿ)
  14. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಬೆಳ್ಳುಳ್ಳಿ ರೈಸ್ ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಬೆಳ್ಳುಳ್ಳಿ ಸಿಪ್ಪೆ ತೆಗೆದು ದೊಡ್ಡದಾಗಿ ಕತ್ತರಿಸಿಕೊಳ್ಳಿ. ಅದರಲ್ಲಿ ಸ್ವಲ್ಪ ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿ. 
  3. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಒಣ ಮೆಣಸನ್ನು ಹುರಿಯಿರಿ. 
  4. ಅದಕ್ಕೆ ದೊಡ್ಡದಾಗಿ ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಗಮನಿಸಿ ಸ್ವಲ್ಪ ಹುರಿದರೆ ಸಾಕು. 
  5. ನಂತ್ರ ಅದಕ್ಕೆ ತೆಂಗಿನತುರಿ ಹಾಕಿ ಹುರಿಯಿರಿ. 
  6. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಿ. 
  7. ಆಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
  8. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿಯನ್ನು ಸೇರಿಸಿ.
  9. ಸಾಸಿವೆ ಸಿಡಿದ ಕೂಡಲೇ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. 
  10. ಮತ್ತು ಕರಿಬೇವು ಸೇರಿಸಿ ಹುರಿಯಿರಿ.
  11. ಅರೆದಿಟ್ಟ ಮಸಾಲೆ  ಮತ್ತು ಅರಿಶಿನ ಪುಡಿಸೇರಿಸಿ ಕಲಸಿ.  
  12. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಸ್ಟೋವ್ ಆಫ್ ಮಾಡಿ.
  13. ನಂತರ ಬೇಯಿಸಿದ ಅನ್ನ ಸೇರಿಸಿ. 
  14. ಒಂದು ಚಪ್ಪಟೆಯಾದ ಸಟ್ಟುಗದಿಂದ ಕಲಸಿ.
  15. ಬೇಕಾದಲ್ಲಿ ನಿಂಬೆರಸ ಸೇರಿಸಬಹುದು. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Gorikayi gojju recipe in Kannada | ಗೋರಿಕಾಯಿ ಗೊಜ್ಜು ಮಾಡುವ ವಿಧಾನ

Gorikayi gojju recipe in Kannada

Gorikayi gojju recipe in Kannada | ಗೋರಿಕಾಯಿ ಗೊಜ್ಜುಮಾಡುವ ವಿಧಾನ 

ಗೋರಿಕಾಯಿ ಗೊಜ್ಜು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಹಿಡಿ ಎಳೆ ಗೋರಿಕಾಯಿ ಅಥವಾ ಚವಳಿ ಕಾಯಿ
  2. 1 ಈರುಳ್ಳಿ
  3. 2 ಟೊಮೇಟೊ
  4. 1/2 ಚಮಚ ಸಾಸಿವೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. ಒಂದು ಚಿಟಿಕೆ ಇಂಗು
  7. 5 - 6 ಕರಿಬೇವಿನ ಎಲೆ 
  8. 1 ನೆಲ್ಲಿಕಾಯಿ ಗಾತ್ರದ ಬೆಲ್ಲ
  9. 1 - 2 ಚಮಚ ಸಾರಿನಪುಡಿ
  10. 1/4 ಟೀಸ್ಪೂನ್ ಅರಿಶಿನ ಪುಡಿ
  11. 1/4 ಕಪ್ ತೆಂಗಿನತುರಿ
  12. ಒಂದು ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. ಉಪ್ಪು ರುಚಿಗೆ ತಕ್ಕಷ್ಟು
  14. 2 ಟೇಬಲ್ ಚಮಚ ಅಡುಗೆ ಎಣ್ಣೆ

ಗೋರಿಕಾಯಿ ಗೊಜ್ಜು ಮಾಡುವ ವಿಧಾನ:

  1. ಗೋರಿಕಾಯಿಯನ್ನು ಆಯ್ದು, ಕಡೆಗಳನ್ನು ತೆಗೆದು, 1 " ತುಂಡುಗಳಾಗಿ ಕತ್ತರಿಸಿ.
  2. ಕತ್ತರಿಸಿದ ಗೋರಿಕಾಯಿ, ಸ್ವಲ್ಪ ಉಪ್ಪು, ಚಿಟಿಕೆ ಅರಿಶಿನ ಮತ್ತು ಸ್ವಲ್ಪ ನೀರು ಹಾಕಿ ಗೋರಿಕಾಯಿಯನ್ನು ಬೇಯಿಸಿಕೊಳ್ಳಿ. ಗಮನಿಸಿ, ಸ್ವಲ್ಪ ನೀರು ಹಾಕಿದರೆ ಸಾಕು. 
  3. ಒಂದು ಬಾಣಲೆಯಲ್ಲಿ ಸಾಸಿವೆ, ಉದ್ದಿನ ಬೇಳೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬೇಕಾದಲ್ಲಿ ಹಸಿರುಮೆಣಸಿನಕಾಯಿ ಅಥವಾ ಒಣಮೆಣಸಿನಕಾಯಿಯನ್ನು ಸೇರಿಸಬಹುದು. 
  4. ಸಾಸಿವೆ ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ. 
  5. ನಂತ್ರ ಕತ್ತರಿಸಿದ ಟೊಮೇಟೊ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಅದಕ್ಕೆ ಬೇಯಿಸಿದ ಗೋರಿಕಾಯಿ ಸೇರಿಸಿ. 
  7. ಸಾರಿನ ಪುಡಿ ಮತ್ತು ಬೆಲ್ಲ ಸೇರಿಸಿ. ಸಾರಿನ ಪುಡಿ ಇಲ್ಲದಿದ್ದಲ್ಲಿ ಸಾಂಬಾರ್ ಪುಡಿ ಅಥವಾ ವಾಂಗೀಬಾತ್ ಪುಡಿ (ಪಲ್ಯದ ಪುಡಿ) ಸೇರಿಸಬಹುದು. ಬೇಕಿದ್ದಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿ. 
  8. ಹೆಚ್ಚಿನ ನೀರಾರುವವರೆಗೆ ಮತ್ತು ಬೆಲ್ಲ ಕರಗುವವರೆಗೆ ಬೇಯಿಸಿ. 
  9. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. ಸ್ಟವ್ ಆಫ್ ಮಾಡಿ. 
  10. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ. 

ಮಂಗಳವಾರ, ಜನವರಿ 23, 2018

Menasina saaru recipe in Kannada | ಮೆಣಸಿನ ಸಾರು ಮಾಡುವ ವಿಧಾನ

Menasina saaru recipe in Kannada

Menasina saaru recipe in Kannada | ಮೆಣಸಿನ ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಟೀಸ್ಪೂನ್ ಸಾಸಿವೆ
  2. 1/2 ಟೀಸ್ಪೂನ್ ಜೀರಿಗೆ
  3. 5 - 6 ಬೆಳ್ಳುಳ್ಳಿ, ಜಜ್ಜಿದ್ದು
  4. 1 ಹಸಿರುಮೆಣಸಿನಕಾಯಿ
  5.  5 - 6 ಕರಿಬೇವಿನ ಎಲೆ
  6. ಇಂಗು ಒಂದು ದೊಡ್ಡ ಚಿಟಿಕೆ
  7. 4 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ತುಪ್ಪ 
  8. 1 ದೊಡ್ಡ ಟೊಮೆಟೋ 
  9. ಅರಿಶಿನ ಪುಡಿ ಒಂದು ದೊಡ್ಡ ಚಿಟಿಕೆ 
  10. 1 ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  11. 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
  12. 2 ಟೀಸ್ಪೂನ್ ಕಾಳು ಮೆಣಸು (ಪುಡಿಮಾಡಲು)
  13. 1 ಟೀಸ್ಪೂನ್ ಜೀರಿಗೆ (ಪುಡಿಮಾಡಲು)
  14. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  15. 1 ಟೀ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು


ಮೆಣಸಿನ ಸಾರು ಮಾಡುವ ವಿಧಾನ:

  1. ಒಂದು ಕುಟ್ಟಾಣಿಯಲ್ಲಿ 2 ಟೀಸ್ಪೂನ್ ಕಾಳು ಮೆಣಸು ಮತ್ತು 1 ಟೀಸ್ಪೂನ್ ಜೀರಿಗೆಯನ್ನು ಜಜ್ಜಿಟ್ಟುಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಜಜ್ಜಿದ ಬೆಳ್ಳುಳ್ಳಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ ಹುರಿಯಿರಿ. 
  4. ಆಮೇಲೆ ಇಂಗನ್ನು ಸೇರಿಸಿ. 
  5. ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೇಟೊ ಮತ್ತು ಅರಿಶಿನ ಪುಡಿ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  6. ಅದಕ್ಕೆ ಹುಣಸೆರಸ ಹಾಕಿ ಕುದಿಸಿ.
  7. ಜಜ್ಜಿದ ಕಾಳುಮೆಣಸು ಮತ್ತು ಜೀರಿಗೆ ಸೇರಿಸಿ. 
  8. ಅಗತ್ಯವಿದ್ದಷ್ಟು ನೀರು ಸೇರಿಸಿ. 
  9. ಉಪ್ಪು ಮತ್ತು ಬೆಲ್ಲ ಸೇರಿಸಿ, ಕುದಿಸಿ. 
  10. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  11. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಜನವರಿ 18, 2018

Kobbari-Bellulli chutney pudi recipe in Kannada | ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ ಪುಡಿ ಮಾಡುವ ವಿಧಾನ

Kobbari-Bellulli chutney pudi recipe in Kannada

Kobbari-Bellulli chutney pudi recipe in Kannada | ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ ಪುಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಒಣಕೊಬ್ಬರಿ
  2. 1 ಟೀಸ್ಪೂನ್ ಅಚ್ಚಖಾರದ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ) 
  3. 4 - 5 ಬೇಳೆ ಬೆಳ್ಳುಳ್ಳಿ 
  4. ನಿಮ್ಮ ರುಚಿಗೆ ತಕ್ಕಂತೆ ಉಪ್ಪು


ಕೊಬ್ಬರಿ-ಬೆಳ್ಳುಳ್ಳಿ ಚಟ್ನಿ ಪುಡಿ ಮಾಡುವ ವಿಧಾನ:

  1. ಒಣಕೊಬ್ಬರಿಯನ್ನು ತುರಿದು ಒಂದು ಕಪ್ನಷ್ಟು ತೆಗೆದುಕೊಳ್ಳಿ. ನೀವು ಒಣಕೊಬ್ಬರಿ ಪುಡಿಯನ್ನೂ ಸಹ ಬಳಸಬಹುದು. 
  2. ಅದನ್ನು ಒಂದು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಗರಿಗರಿ ಯಾಗುವವರೆಗೆ ಹುರಿಯಿರಿ. 
  3. ಹುರಿದ ಒಣಕೊಬ್ಬರಿ ತುರಿ ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ.
  4. ನಂತ್ರ ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ. ಬೆಳ್ಳುಳ್ಳಿ ಸಿಪ್ಪೆ ತೆಗೆಯಬೇಕಿಲ್ಲ.
  5. ನಂತರ ಅದಕ್ಕೆ ಉಪ್ಪು ಮತ್ತು ಅಚ್ಚಖಾರದ ಪುಡಿ ಸೇರಿಸಿ ಪುನಃ ಒಂದೆರಡು ಸುತ್ತು ಮಿಕ್ಸಿ ಮಾಡಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ಖಾರದ ಪ್ರಮಾಣ ಹೊಂದಿಸಿ. 
  6. ತಯಾರಾದ ಚಟ್ನಿ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ದೋಸೆ ಅಥವಾ ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ. 


Avarekalu kodubale recipe in Kannada | ಅವರೇಕಾಳು ಕೋಡುಬಳೆ ಮಾಡುವ ವಿಧಾನ

Avarekalu kodubale recipe in Kannada

Avarekalu kodubale recipe in Kannada | ಅವರೇಕಾಳು ಕೋಡುಬಳೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಅಕ್ಕಿ ಹಿಟ್ಟು 
  2. 1 ಕಪ್ ಅವರೇಕಾಳು
  3. 1/4 ಕಪ್ ಮೈದಾ ಹಿಟ್ಟು
  4. 1/4 ಕಪ್ ಕೊಬ್ಬರಿ ತುರಿ (ಬೇಕಾದಲ್ಲಿ)
  5. 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1/2 ಟೀಸ್ಪೂನ್ ಜೀರಿಗೆ
  7. ಉಪ್ಪು ರುಚಿಗೆ ತಕ್ಕಷ್ಟು
  8. ಒಂದು ದೊಡ್ಡ ಚಿಟಿಕೆ ಇಂಗು
  9. 2 ಎಸಳು ಕರಿಬೇವು
  10. 2.5 ಟೇಬಲ್ ಚಮಚ ಬಿಸಿ ಎಣ್ಣೆ ಅಥವಾ ದೊಡ್ಡ ನಿಂಬೆಗಾತ್ರದ ಬೆಣ್ಣೆ
  11. ಎಣ್ಣೆ ಕೋಡುಬಳೆ ಕಾಯಿಸಲು


ಅವರೇಕಾಳು ಕೋಡುಬಳೆ ಮಾಡುವ ವಿಧಾನ:

  1. ಅವರೆಕಾಯಿಯನ್ನು ಬಿಡಿಸಿ ಒಂದು ಕಪ್ ನಷ್ಟು ಅವರೇಕಾಳು ತೆಗೆದುಕೊಳ್ಳಿ. 
  2. ಅದನ್ನು 4 - 5 ಘಂಟೆ ನೀರಿನಲ್ಲಿ ನೆನೆಸಿ, ಹಿಸುಕಿ ಹೊರಗಿನ ಸಿಪ್ಪೆ ತೆಗೆಯಿರಿ. 
  3. ನಂತ್ರ ಅವರೆಕಾಳನ್ನು ಕುಕ್ಕರ್ ನಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ. 
  4. ಬಿಸಿ ಆರಿದ ಮೇಲೆ, ನೀರು ಬಸಿದು, ಪುಡಿ ಮಾಡಿಕೊಳ್ಳಿ. ಬಸಿದ ನೀರನ್ನು ಆಮೇಲೆ ಹಿಟ್ಟು ಕಲಸಲು ಬಳಸಬಹುದು. 
  5. ಒಣ ಕೊಬ್ಬರಿ ಪುಡಿ, ಅಚ್ಚಖಾರದ ಪುಡಿ, ಇಂಗು ಮತ್ತು ಜೀರಿಗೆ ಸೇರಿಸಿ ಕಲಸಿ. 
  6. ಸಣ್ಣಗೆ ಕತ್ತರಿಸಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ) ಸೇರಿಸಿ ಕಲಸಿ. 
  7. ಅಕ್ಕಿ ಹಿಟ್ಟು ಸೇರಿಸಿ. 
  8. ನಂತ್ರ 2 - 3 ಟೇಬಲ್ ಚಮಚ ಬಿಸಿ ಎಣ್ಣೆಯನ್ನು ಹಾಕಿ, ಚೆನ್ನಾಗಿ ಒತ್ತಿ ಕಲಸಿ.
  9. ನಂತ್ರ ಉಪ್ಪು ಸೇರಿಸಿ ಕಲಸಿ. 
  10. ಕಲಸಿದ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತ ಗಟ್ಟಿಯಾದ ಹಿಟ್ಟನ್ನು ಸಿದ್ಧ ಪಡಿಸಿಕೊಳ್ಳಿ. ಕೋಡುಬಳೆ ಮಾಡುವಷ್ಟು ಮೆತ್ತಗಿದ್ದರೆ ಸಾಕು. ಅವರೇಕಾಳು ಬೇಯಿಸಿದ ನೀರು ಹಾಕಿ ಕಲಸಬಹುದು. 
  11. ಈಗ ನೆಲ್ಲಿಕಾಯಿ ಗಾತ್ರದ ಹಿಟ್ಟು ತೆಗೆದು ಕೊಂಡು ಬಳೆಗಳನ್ನು ಮಾಡಿ. 
  12. ಎಣ್ಣೆ ಬಿಸಿ ಮಾಡಿ ಕೋಡುಬಳೆಗಳನ್ನು ಸಣ್ಣ ಉರಿಯಲ್ಲಿ ಕಾಯಿಸಿ. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆಯಿರಿ. ಪ್ರತಿಸಲ ಕೋಡುಬಳೆ ಕಾಯಿಸುವ ಮೊದಲು ಎಣ್ಣೆ ಬಿಸಿ ಇರಲಿ. ನಂತರ ಸಣ್ಣ ಉರಿಯಲ್ಲಿ ಕಾಯಿಸಿ.

ಸೋಮವಾರ, ಜನವರಿ 15, 2018

Avarekalu sagu recipe in Kannada | ಅವರೇಕಾಳು ಸಾಗು ಮಾಡುವ ವಿಧಾನ

Avarekalu sagu recipe in Kannada

Avarekalu sagu recipe in Kannada |ಅವರೇಕಾಳು ಸಾಗು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅವರೇಕಾಳು
  2. 1 ದೊಡ್ಡ ಈರುಳ್ಳಿ
  3. 1 ಟೊಮ್ಯಾಟೋ
  4. 1/4 ಟೀಸ್ಪೂನ್ ಅರಶಿನ ಪುಡಿ
  5. 4 ಟೀಸ್ಪೂನ್ ಅಡುಗೆ ಎಣ್ಣೆ
  6. 1/2 ಟೀಸ್ಪೂನ್ ಸಾಸಿವೆ
  7. 1 ಟೀಸ್ಪೂನ್ ಉದ್ದಿನ ಬೇಳೆ
  8. 4 - 5 ಕರಿಬೇವಿನ ಎಲೆ
  9. ಉಪ್ಪು ರುಚಿಗೆ ತಕ್ಕಷ್ಟು

ಬೇಕಾಗುವ ಪದಾರ್ಥಗಳು (ಮಸಾಲೆಗೆ):

  1. 1/2 ಕಪ್ ತೆಂಗಿನತುರಿ
  2. 1 ಸೆಮೀ ಉದ್ದದ ಶುಂಠಿ
  3. 3 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 2 ಟೇಬಲ್ ಸ್ಪೂನ್ ಹುರಿಗಡಲೆ 
  7. 1 ಟೀಸ್ಪೂನ್ ಗಸಗಸೆ 
  8. 1 - 2 ಹಸಿರುಮೆಣಸಿನಕಾಯಿ
  9. 1/2 ಬೆರಳುದ್ದ ಚಕ್ಕೆ
  10. 4 - 5 ಲವಂಗ
  11. 1 ಏಲಕ್ಕಿ
  12. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು

ಅವರೇಕಾಳು ಸಾಗು ಮಾಡುವ ವಿಧಾನ:

  1. ಒಂದು ಕಪ್ ನಷ್ಟು ಅವರೆಕಾಳನ್ನು ಕುಕ್ಕರ್ಗೆ ಹಾಕಿ. ಬೇಕಾದಷ್ಟು ನೀರು, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. 
  2. ಮಸಾಲೆಗೆ ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ಅರೆದು ಕೊಳ್ಳಿ.
  3. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ ಮತ್ತು ಉದ್ದಿನ ಬೇಳೆಯ ಒಗ್ಗರಣೆ ಮಾಡಿ. 
  4. ಸಾಸಿವೆ ಸಿಡಿದ ಕೂಡಲೇ ಅರಿಶಿನ, ಇಂಗು ಮತ್ತು ಕರಿಬೇವಿನ ಎಲೆ ಸೇರಿಸಿ. 
  5. ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
  7. ಈಗ ಅರೆದ ಮಸಾಲೆ ಹಾಕಿ. 
  8. ನಂತ್ರ ಬೇಯಿಸಿದ ಅವರೇಕಾಳನ್ನು ಹಾಕಿ.
  9. ಉಪ್ಪು ಮತ್ತು ಬೇಕಾದಷ್ಟು ನೀರು ಸೇರಿಸಿ. 
  10. ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಕುದಿಸಿ
  11. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ.

ಶುಕ್ರವಾರ, ಜನವರಿ 12, 2018

Shenga holige recipe in Kannada | ಶೇಂಗಾ ಹೋಳಿಗೆ ಮಾಡುವ ವಿಧಾನ

Shenga holige recipe in Kannada

Shenga holige recipe in Kannada | ಶೇಂಗಾ ಹೋಳಿಗೆ ಮಾಡುವ ವಿಧಾನ 

ಕಣಕಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 2 ಕಪ್ ಗೋಧಿ ಹಿಟ್ಟು 
  2. ಉಪ್ಪು ರುಚಿಗೆ ತಕ್ಕಷ್ಟು
  3. 6 ಟೇಬಲ್ ಚಮಚ ಅಡುಗೆ ಎಣ್ಣೆ

ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1 ಕಪ್ ಶೇಂಗಾ
  2. 3/4 ಕಪ್ ಪುಡಿಮಾಡಿದ ಬೆಲ್ಲ
  3. 1/4 ಕಪ್ ಎಳ್ಳು 
  4. 2 ಚಮಚ ಗಸಗಸೆ
  5. 2 ಏಲಕ್ಕಿ

ಶೇಂಗಾ ಹೋಳಿಗೆ ಅಥವಾ ಒಬ್ಬಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಹಾಕಿ. 
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ಕಲಸಿ. 
  3. ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ. 
  4. ಈಗ ಹೂರಣ ತಯಾರಿಸಲು, ಮೊದಲಿಗೆ ಶೇಂಗಾವನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. 
  5. ಎಳ್ಳನ್ನು ಕಂದು ಬಣ್ಣ ಬರುವವರೆಗೆ ಅಥವಾ ಚಟಪಟ ಅನ್ನುವವರೆಗೆ ಹುರಿಯಿರಿ. 
  6. ಹುರಿದ ಶೇಂಗಾ, ಎಳ್ಳು, ಗಸಗಸೆ ಮತ್ತು ಏಲಕ್ಕಿಯನ್ನು ಪುಡಿ ಮಾಡಿ. 
  7.  ನಂತ್ರ ಪುಡಿಮಾಡಿದ ಬೆಲ್ಲವನ್ನು ಸೇರಿಸಿ ಅರೆಯಿರಿ. ನೀರು ಹಾಕಬೇಡಿ. 
  8. ಅರೆದ ಮಿಶ್ರಣಕ್ಕೆ ಒಂದೆರಡು ಚಮಚ ನೀರು ಅಥವಾ ಹಾಲು ಹಾಕಿ ಕಲಸಿ.  
  9. ನಂತರ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಉಂಡೆ ಮೃದುವಾಗಿರಬೇಕು. 
  10. ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಒಂದು ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಬಟ್ಟಲಿನಾಕಾರ ಮಾಡಿ.  ಹೂರಣಇಟ್ಟು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ.
  11. ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ.
  12. ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ. ರುಚಿ ರುಚಿಯಾದ ಶೇಂಗಾ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

ಗುರುವಾರ, ಜನವರಿ 11, 2018

Ellu pajji recipe in Kannada | ಎಳ್ಳು ಪಜ್ಜಿ ಅಥವಾ ಎಳ್ಳು ಚಟ್ನಿ ಮಾಡುವ ವಿಧಾನ

Ellu pajji recipe in Kannada

Ellu pajji recipe in Kannada |ಎಳ್ಳು ಪಜ್ಜಿ ಅಥವಾ ಎಳ್ಳು ಚಟ್ನಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಎಳ್ಳು
  2. 1/2 ಕಪ್ ತೆಂಗಿನ ತುರಿ
  3. 2 - 3 ಹಸಿರು ಮೆಣಸಿನಕಾಯಿ
  4. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  5. ದೊಡ್ಡ ಗೋಲಿಗಾತ್ರದ ಬೆಲ್ಲ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 ಕರಿಬೇವಿನ ಎಲೆ 
  3. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  4. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಎಳ್ಳು ಪಜ್ಜಿ ಅಥವಾ ಎಳ್ಳು ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆ ಬಿಸಿ ಮಾಡಿ ಎಳ್ಳನ್ನು ಚಟಪಟ ಅನ್ನುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  2. ನಂತರ ಅರೆಯಲು ಬೇಕಾಗುವ ಪದಾರ್ಥಗಳಾದ ಹುರಿದ  ಎಳ್ಳು, ತೆಂಗಿನತುರಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಹಸಿರುಮೆಣಸಿನಕಾಯಿಯನ್ನು ತೆಗೆದುಕೊಳ್ಳಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ ತರಿತರಿಯಾಗಿ ಅರೆದು ಪಾತ್ರೆಗೆ ಹಾಕಿ. 
  4. ನಂತ್ರ ಬಾಣಲೆಯಲ್ಲಿ ಎರಡು ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. 
  5. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. 
  6. ಹುರಿದ ಈರುಳ್ಳಿಯನ್ನು ಅರೆದಿಟ್ಟ ಚಟ್ನಿಗೆ ಹಾಕಿ. ಅನ್ನ, ಇಡ್ಲಿ, ರೊಟ್ಟಿ ಅಥವಾ ದೋಸೆಯೊಂದಿಗೆ ಬಡಿಸಿ.

ಮಂಗಳವಾರ, ಜನವರಿ 9, 2018

Badam halwa recipe in Kannada | ಬಾದಾಮ್ ಹಲ್ವಾ ಮಾಡುವ ವಿಧಾನ

Badam halwa recipe in Kannada

Badam halwa recipe in Kannada | ಬಾದಾಮ್ ಹಲ್ವಾ ಮಾಡುವ ವಿಧಾನ

ಬಾದಾಮ್ ಹಲ್ವಾ ವಿಡಿಯೋ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಬಾದಾಮಿ
  2. 1/2 ಕಪ್ ಹಾಲು
  3. 1/2 ಕಪ್ ಸಕ್ಕರೆ 
  4. 2 ಟೇಬಲ್ ಚಮಚ ತುಪ್ಪ
  5. ಚಿಟಿಕೆ ಕೇಸರಿ (ಬೇಕಾದಲ್ಲಿ)
  6. ಚಿಟಿಕೆ ಏಲಕ್ಕಿ ಪುಡಿ

ಬಾದಾಮ್ ಹಲ್ವಾ ಮಾಡುವ ವಿಧಾನ:

  1. ಎರಡು ಟೇಬಲ್ ಚಮಚ ಹಾಲಿನಲ್ಲಿ ಕೇಸರಿಯನ್ನು ನೆನೆಸಿಡಿ. 
  2. ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಬಾದಾಮಿ ಹಾಕಿ ಎರಡು ನಿಮಿಷದ ನಂತ್ರ ಸ್ಟವ್ ಆಫ್ ಮಾಡಿ. 
  3. ಬಿಸಿ ಆರಿದ ಮೇಲೆ ಬಾದಾಮಿ ಸಿಪ್ಪೆ ತೆಗೆದು ಒಂದು ಘಂಟೆ ನೀರಿನಲ್ಲಿ ನೆನೆಸಿಡಿ. 
  4. ನೆನೆಸಿದ ಬಾದಾಮಿಯನ್ನು ಹಾಲು ಹಾಕಿ ನುಣ್ಣನೆ ಅರೆಯಿರಿ. 
  5. ಒಂದು ನಾನ್-ಸ್ಟಿಕ್ ಬಾಣಲೆಯಲ್ಲಿ ತುಪ್ಪ ಮತ್ತು ಅರೆದ ಮಿಶ್ರಣ ಹಾಕಿ ಸ್ಟೋವ್ ಮೇಲಿಟ್ಟು ಮಗುಚಲು ಪ್ರಾರಂಭಿಸಿ.  
  6. ಸಕ್ಕರೆಯನ್ನು ಸೇರಿಸಿ ಮಗುಚುವುದನ್ನು ಮುಂದುವರೆಸಿ. 
  7. ಕೇಸರಿ ನೆನೆಸಿದ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಮಗುಚುವುದನ್ನು ಮುಂದುವರೆಸಿ. 
  8. ಸ್ವಲ್ಪ ಗಟ್ಟಿಯಾದಾಗ ಎರಡು ಟೇಬಲ್ ಚಮಚ ತುಪ್ಪ ಸೆರಿಸ್ ಮಗುಚುವುದನ್ನು ಮುಂದುವರೆಸಿ. 
  9. ಸ್ವಲ್ಪ ಸಮಯದ ನಂತರ ತಳ ಬಿಡಲು ಪ್ರಾರಂಭಿಸಿದಾಗ, ಏಲಕ್ಕಿ ಪುಡಿ ಸೇರಿಸಿ. 
  10. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ. 
  11. ಬಾದಾಮ್ ಹಲ್ವಾ ಸವಿಯಲು ಸಿದ್ದ. ಬಿಸಿ ಅಥವಾ ತಣ್ಣಗೆ ಬಡಿಸಿ.

ಭಾನುವಾರ, ಜನವರಿ 7, 2018

Avarekalu uppittu recipe in kannada | ಅವರೇಕಾಳು ಉಪ್ಪಿಟ್ಟು ಮಾಡುವ ವಿಧಾನ

Avarekalu uppittu recipe in kannada

Avarekalu uppittu recipe in kannada | ಅವರೇಕಾಳು ಉಪ್ಪಿಟ್ಟು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಉಪ್ಪಿಟ್ಟು ರವೆ
  2. 1.25 ಕಪ್ ನೀರು
  3. 1/2 ಕಪ್ ಅವರೇಕಾಳು
  4. 1/2 ಟೀಸ್ಪೂನ್ ಸಾಸಿವೆ
  5. 1 ಟೀಸ್ಪೂನ್ ಉದ್ದಿನಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1 ಈರುಳ್ಳಿ
  8. 1 ಟೊಮ್ಯಾಟೋ 
  9. 2-3 ಹಸಿರು ಮೆಣಸಿನಕಾಯಿ
  10. 4-5 ಕರಿ ಬೇವಿನ ಎಲೆ
  11. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  12. 1/4 ಟೀಸ್ಪೂನ್ ಅರಶಿನ ಪುಡಿ
  13. 6-8 ಟೀಸ್ಪೂನ್ ಅಡುಗೆ ಎಣ್ಣೆ
  14. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  15. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  16. 1/2 ಕಪ್ ತೆಂಗಿನತುರಿ

ಅವರೇಕಾಳು ಉಪ್ಪಿಟ್ಟು ಮಾಡುವ ವಿಧಾನ:

  1. ಅವರೆಕಾಳನ್ನು ಸುಲಿದು, ಬೇಯಿಸಿಟ್ಟುಕೊಳ್ಳಿ. 
  2. ರವೆಯನ್ನು ಒಂದು ಚಮಚ ತುಪ್ಪ ಅಥವಾ ಎಣ್ಣೆಯೊಂದಿಗೆ ಹುರಿದಿಟ್ಟುಕೊಳ್ಳಿ. 
  3. ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  4. ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  5. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  6. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ. 
  7. ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
  8. ಬೇಯಿಸಿದ ಅವರೆಕಾಳನ್ನು ಸೇರಿಸಿ. 
  9. ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ಹುರಿದಿಟ್ಟ ರವೆಯನ್ನು ನಿಧಾನವಾಗಿ ಹಾಕುತ್ತಾ ಮಗುಚಿ. 
  10. ಸ್ವಲ್ಪ ಗಟ್ಟಿಯಾದ ಮೇಲೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಬೇಯಲು ಬಿಡಿ. 
  11. ನಂತ್ರ ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಸ್ಟವ್ ಆಫ್ ಮಾಡಿ, ಬಡಿಸಿ.


ಗುರುವಾರ, ಜನವರಿ 4, 2018

Huruli chutney recipe in Kannada | ಹುರುಳಿ ಚಟ್ನಿ ಮಾಡುವ ವಿಧಾನ

Huruli chutney recipe in Kannada

Huruli chutney recipe in Kannada | ಹುರುಳಿ ಚಟ್ನಿ ಮಾಡುವ ವಿಧಾನ

ಹುರುಳಿ ಚಟ್ನಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಹುರುಳಿಕಾಳು
  2. 1/2 ಕಪ್ ತೆಂಗಿನ ತುರಿ
  3. 2 - 3 ಒಣ ಮೆಣಸಿನಕಾಯಿ
  4. 2 ಟೀಸ್ಪೂನ್ ಉದ್ದಿನ ಬೇಳೆ (ಬೇಕಾದಲ್ಲಿ)
  5. 2 ಟೀಸ್ಪೂನ್ ಕಡ್ಲೆ ಬೇಳೆ (ಬೇಕಾದಲ್ಲಿ)
  6. 1/4 ಟೀಸ್ಪೂನ್ ಕೊತ್ತಂಬರಿ ಬೀಜ
  7. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು 
  8. 2 ಬೇಳೆ ಬೆಳ್ಳುಳ್ಳಿ
  9. 1/2 ಟೀಸ್ಪೂನ್ ಅಡುಗೆ ಎಣ್ಣೆ
  10. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 ಕರಿಬೇವಿನ ಎಲೆ 
  3. ಚಿಟಿಕೆ ಇಂಗು
  4. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಹುರುಳಿ ಚಟ್ನಿ ಮಾಡುವ ವಿಧಾನ:

  1. ಒಂದು ಬಾಣಲೆಗೆ ಎಣ್ಣೆ, ಒಣ ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. ಬೇಕಾದಲ್ಲಿ ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಸೇರಿಸಿ. ಬೇಳೆ ಸೇರಿಸಿದಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
  2. ನಂತರ ಅದೇ ಬಾಣಲೆಯಲ್ಲಿ ಹುರುಳಿಯನ್ನು ಚಟಪಟ ಅನ್ನುವವರೆಗೆ ಹುರಿಯಿರಿ. ಗಮನಿಸಿ ಜಾಸ್ತಿ ಹುರಿಯಬೇಡಿ. ಜಾಸ್ತಿ ಹುರಿದಲ್ಲಿ ಚಟ್ನಿ ಕಹಿಯಾಗಬಹುದು. 
  3. ನಂತರ ತೆಂಗಿನ ತುರಿ, ಹುರಿದ ಪದಾರ್ಥಗಳು, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಕೊನೆಯಲ್ಲಿ ಎರಡು ಬೇಳೆ ಬೆಳ್ಳುಳ್ಳಿ ಹಾಕಿ ಅರೆಯಿರಿ. 
  5. ಇಂಗು, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. ಅನ್ನ, ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

ಬುಧವಾರ, ಜನವರಿ 3, 2018

Hunasekayi thokku saaru recipe in Kannada | ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ

Hunasekayi thokku saaru recipe in Kannada

Hunasekayi thokku saaru recipe in Kannada | ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1 ಟೀಸ್ಪೂನ್ ಸಾಸಿವೆ
  2. 1 ಟೀಸ್ಪೂನ್ ಜೀರಿಗೆ
  3. 5 - 6 ಬೆಳ್ಳುಳ್ಳಿ, ಜಜ್ಜಿದ್ದು
  4. ಇಂಗು ಒಂದು ದೊಡ್ಡ ಚಿಟಿಕೆ
  5.  5 - 6 ಕರಿಬೇವಿನ ಎಲೆ
  6. 4 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ತುಪ್ಪ 
  7. 1 ದೊಡ್ಡ ಟೊಮೆಟೋ 
  8. ಅರಿಶಿನ ಪುಡಿ ಒಂದು ದೊಡ್ಡ ಚಿಟಿಕೆ 
  9. 2 ಟೇಬಲ್ ಸ್ಪೂನ್ ಹುಣಸೆಕಾಯಿ ತೊಕ್ಕು  
  10. 1 ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ನಿಮ್ಮ ರುಚಿಗೆ ಅನುಗುಣವಾಗಿ)
  11. 1/2 ಟೀಸ್ಪೂನ್ ಕಾಳು ಮೆಣಸು, ಪುಡಿಮಾಡಿದ್ದು 
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ) 
  13. 1 ಟೀ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು


ಹುಣಸೆಕಾಯಿ ತೊಕ್ಕು ಸಾರು ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆ ಹಾಕಿ. 
  2. ಸಾಸಿವೆ ಸಿಡಿದ ಕೂಡಲೇ ಜಜ್ಜಿದ ಬೆಳ್ಳುಳ್ಳಿ, ಇಂಗು ಮತ್ತು ಕರಿಬೇವಿನ ಎಲೆ ಸೇರಿಸಿ. ಬೆಳ್ಳುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  3. ನಂತ್ರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೇಟೊ ಮತ್ತು ಅರಿಶಿನ ಪುಡಿ ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  4. ಅದಕ್ಕೆ ಹುಣಸೆ ತೊಕ್ಕು ಹಾಕಿ.
  5. ಅಗತ್ಯವಿದ್ದಷ್ಟು ನೀರು ಸೇರಿಸಿ. 
  6. ಉಪ್ಪು ಮತ್ತು ಬೆಲ್ಲ ಸೇರಿಸಿ. 
  7. ಜಜ್ಜಿದ ಕಾಳುಮೆಣಸು ಸೇರಿಸಿ ಕುದಿಸಿ. 
  8. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  9. ಬಿಸಿಯಾದ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...