ಬುಧವಾರ, ಫೆಬ್ರವರಿ 28, 2018

Cornflakes mixture recipe in Kannada | ಕಾರ್ನ್ ಫ್ಲೇಕ್ಸ್ ಕುರುಕಲು ತಿಂಡಿ ಮಾಡುವ ವಿಧಾನ

Cornflakes mixture recipe in Kannada

Cornflakes mixture recipe in Kannada | ಕಾರ್ನ್ ಫ್ಲೇಕ್ಸ್ ಕುರುಕಲು ತಿಂಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಕಾರ್ನ್ ಫ್ಲೇಕ್ಸ್
  2. 2 ಟೇಬಲ್ ಚಮಚ ನೆಲಗಡಲೆ ಅಥವಾ ಶೇಂಗಾ
  3. 2 ಟೇಬಲ್ ಚಮಚ ಹುರಿಗಡಲೆ ಅಥವಾ ಕಡಲೆಪಪ್ಪು
  4. 2 ಟೇಬಲ್ ಚಮಚ ಗೋಡಂಬಿ
  5. 2 ಟೇಬಲ್ ಚಮಚ ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ
  6. 1/2 - 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ) 
  7. 2 ದೊಡ್ಡ ಚಿಟಿಕೆ ಅರಿಶಿನ ಪುಡಿ 
  8. 2 ದೊಡ್ಡ ಚಿಟಿಕೆ ಇಂಗು 
  9. 5 - 6 ಕರಿಬೇವಿನ ಎಲೆ 
  10. 2 ಟೇಬಲ್ ಚಮಚ ಎಣ್ಣೆ
  11. 1 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
  12. 1/2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಂತೆ)

ಕಾರ್ನ್ ಫ್ಲೇಕ್ಸ್ ಕುರುಕಲು ತಿಂಡಿ ಮಾಡುವ ವಿಧಾನ:

  1. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನೆಲಗಡಲೆಯನ್ನು ಹುರಿಯಿರಿ.  
  2. ಅದಕ್ಕೆ ಗೋಡಂಬಿ ಮತ್ತು ತೆಳ್ಳಗೆ ಹೆಚ್ಚಿದ ಒಣಕೊಬ್ಬರಿ ಹಾಕಿ ಹುರಿಯಿರಿ. 
  3. ಹುರಿಗಡಲೆ ಮತ್ತು ಕರಿಬೇವನ್ನು ಸೇರಿಸಿ ಹುರಿಯಿರಿ.
  4. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ, ಉಪ್ಪು, ಸಕ್ಕರೆ ಮತ್ತು ಇಂಗು ಹಾಕಿ. ಬೇಕಾದಲ್ಲಿ ಚಾಟ್ ಮಸಾಲಾ ಸೇರಿಸಬಹುದು. 
  5. ನಂತರ ಕಾರ್ನ್ ಫ್ಲೇಕ್ಸ್  ಹಾಕಿ ಸಣ್ಣ ಉರಿಯಲ್ಲಿ ಒಂದೈದು ನಿಮಿಷ ಚೆನ್ನಾಗಿ ಮಗುಚಿ. ಬಿಸಿ ಬಿಸಿ ಚಹಾದೊಂದಿಗೆ ಸವಿಯಿರಿ.

ಮಂಗಳವಾರ, ಫೆಬ್ರವರಿ 27, 2018

Ananas menaskai recipe in Kannada | ಅನಾನಸ್ ಮೆಣಸ್ಕಾಯಿ ಮಾಡುವ ವಿಧಾನ

Ananas menaskai recipe in Kannada

Ananas menaskai recipe in Kannada | ಅನಾನಸ್ ಮೆಣಸ್ಕಾಯಿ ಮಾಡುವ ವಿಧಾನ 

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಸಣ್ಣ ಗಾತ್ರದ ಅನಾನಸ್
  2. 1 ಹಸಿರುಮೆಣಸಿನಕಾಯಿ (ಬೇಕಾದಲ್ಲಿ)
  3. 1 ಚಿಟಿಕೆ ಅರಿಶಿನ ಪುಡಿ
  4. ಬೆಲ್ಲ 2 ದೊಡ್ಡ ನಿಂಬೆಹಣ್ಣಿನ ಗಾತ್ರ
  5. 1 ಟೀಸ್ಪೂನ್ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು - ವಿಧಾನ ೧: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕೊತ್ತಂಬರಿ ಬೀಜ
  2. 3 - 6 ಒಣ ಮೆಣಸಿನಕಾಯಿ
  3. 1 ಕಪ್ ತೆಂಗಿನ ತುರಿ
  4. 1/4 ಟೀಸ್ಪೂನ್ ಮೆಂತ್ಯ
  5. 3 ಟೀಸ್ಪೂನ್ ಎಳ್ಳು
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಅರೆಯಲು ಬೇಕಾಗುವ ಪದಾರ್ಥಗಳು - ವಿಧಾನ ೨: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಉದ್ದಿನ ಬೇಳೆ
  2. 3 - 6 ಒಣ ಮೆಣಸಿನಕಾಯಿ
  3. 1 ಕಪ್ ತೆಂಗಿನ ತುರಿ
  4. 1/4 ಟೀಸ್ಪೂನ್ ಮೆಂತ್ಯ
  5. 3 ಟೀಸ್ಪೂನ್ ಎಳ್ಳು
  6. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 1 ಒಣಮೆಣಸಿನಕಾಯಿ (ಬೇಕಾದಲ್ಲಿ)
  3. 4 - 5 ಕರಿಬೇವಿನ ಎಲೆ
  4. 4 ಟೀಸ್ಪೂನ್ ಅಡುಗೆ ಎಣ್ಣೆ

ಅನಾನಸ್ ಮೆಣಸ್ಕಾಯಿ ಮಾಡುವ ವಿಧಾನ:

  1. ಅನಾನಸ್ ನ್ನು ತೊಳೆದು, ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ.
  2. ಕತ್ತರಿಸಿದ ಅನಾನಸ್, ಉಪ್ಪು, ಬೆಲ್ಲ, ಅರಿಶಿನ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಕುಕ್ಕರ್ ನಲ್ಲಿ ತೆಗೆದುಕೊಂಡು, ಅನಾನಸ್ ಮೆತ್ತಗಾಗುವವರೆಗೆ ಬೇಯಿಸಿ. 
  3. ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಳ್ಳನ್ನು ಹುರಿದು ತೆಗೆದಿಡಿ. 
  4. ನಂತರ ಅದೇ ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ನಂತರ (ಉದ್ದಿನ ಬೇಳೆ + ಮೆಂತೆ + ಒಣಮೆಣಸು) ಅಥವಾ (ಕೊತ್ತಂಬರಿ ಬೀಜ + ಮೆಂತೆ + ಒಣಮೆಣಸು) ಹಾಕಿ ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಡಿ. ಉದ್ದಿನಬೇಳೆ ಅಥವಾ ಕೊತ್ತಂಬರಿ ಯಾವುದು ಹಾಕಿದರೂ ರುಚಿ ಅಷ್ಟು ವ್ಯತ್ಯಾಸ ಬರುವುದಿಲ್ಲ. 
  5. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ ಅರೆಯಿರಿ. 
  6. ಬೇಯಿಸಿದ ಅನಾನಸ್ ಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು ಮತ್ತು ಬೆಲ್ಲ ಹೊಂದಿಸಿ. ಬೇಕಾದಷ್ಟು ನೀರು ಸೇರಿಸಿ, ಒಂದು ಕುದಿ ಕುದಿಸಿ.  
  7. ನಂತರ ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.

ಶುಕ್ರವಾರ, ಫೆಬ್ರವರಿ 23, 2018

Mosaru avalakki recipe in Kannada | ಮೊಸರು ಅವಲಕ್ಕಿ ಮಾಡುವ ವಿಧಾನ

Mosaru avalakki recipe in Kannada

Mosaru avalakki recipe in Kannada | ಮೊಸರು ಅವಲಕ್ಕಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1 ಕಪ್ ಗಟ್ಟಿ ಅವಲಕ್ಕಿ
  2. 1 ಕಪ್ ಮೊಸರು
  3. 1/4 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ) 
  4. 1/2 ಚಮಚ ಸಾಸಿವೆ 
  5. 1 ಟೀಸ್ಪೂನ್ ಉದ್ದಿನ ಬೇಳೆ 
  6. 5 - 6 ಗೋಡಂಬಿ
  7. 4 - 5 ಕರಿಬೇವಿನ ಎಲೆ 
  8. 1 ಹಸಿರು ಮೆಣಸಿನಕಾಯಿ ಅಥವಾ ಮಜ್ಜಿಗೆ ಮೆಣಸು
  9. ಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು
  10. ಒಂದು ಚಿಟಿಕೆ ಇಂಗು
  11. 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತಂಬರಿ ಸೊಪ್ಪು
  12. 1 ಟೇಬಲ್ ಚಮಚ ತೆಂಗಿನತುರಿ
  13. 1/2 ಟೀ ಚಮಚ ಸಕ್ಕರೆ (ನಿಮ್ಮ ರುಚಿಗನುಗುಣವಾಗಿ)
  14. 2 ಟೀ ಚಮಚ ಅಡುಗೆ ಎಣ್ಣೆ 
  15. ಉಪ್ಪು ರುಚಿಗೆ ತಕ್ಕಷ್ಟು

ಮೊಸರು ಅವಲಕ್ಕಿ ಮಾಡುವ ವಿಧಾನ:

  1. ಮೊದಲಿಗೆ ಗಟ್ಟಿ ಅವಲಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ತೆಳು ಅವಲಕ್ಕಿ ಆದಲ್ಲಿ ನೆನೆಸುವುದು ಬೇಡ. ಮೀಡಿಯಂ ಅವಲಕ್ಕಿ ಆದಲ್ಲಿ ಒಂದೆರಡು ನಿಮಿಷ ನೆನೆಸಿದರೆ ಸಾಕು. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ ಮತ್ತು ಗೋಡಂಬಿಯ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಮೇಲೆ ಕರಿಬೇವಿನ ಎಲೆ, ಹಸಿರು ಮೆಣಸಿನಕಾಯಿ (ಅಥವಾ ಮಜ್ಜಿಗೆ ಮೆಣಸು), ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಹಾಕಿ. ಅಲಂಕಾರಕ್ಕೆ ಸ್ವಲ್ಪ ಒಗ್ಗರಣೆ ತೆಗೆದಿಟ್ಟುಕೊಳ್ಳಿ. 
  4. ನೆನೆಸಿಟ್ಟ ಅವಲಕ್ಕಿ ಹಾಕಿ ಒಮ್ಮೆ ಮಗುಚಿ ಸ್ಟವ್ ಆಫ್ ಮಾಡಿ. 
  5. ಉಪ್ಪು, ಸಕ್ಕರೆ ಮತ್ತು ತೆಂಗಿನ ತುರಿ ಹಾಕಿ, ಮಗುಚಿ ತಣ್ಣಗಾಗಲು ಬಿಡಿ. 
  6. ಬಿಸಿ ಆರಿದ ಮೇಲೆ ಮೊಸರು ಹಾಕಿ. ಮೊಸರು ಹುಳಿ ಇದ್ದಲ್ಲಿ ಹಾಲನ್ನು ಸೇರಿಸಿ. ಅಗತ್ಯವಿದ್ದಲ್ಲಿ, ಸ್ವಲ್ಪ ಮಜ್ಜಿಗೆ ಅಥವಾ ನೀರು ಅಥವಾ ಇನ್ನು ಸ್ವಲ್ಪ ಮೊಸರು ಸೇರಿಸಬಹುದು. 
  7. ಕೊತಂಬರಿ ಸೊಪ್ಪು, ತೆಗೆದಿಟ್ಟ ಒಗ್ಗರಣೆ ಮತ್ತು ದಾಳಿಂಬೆಯಿಂದ (ದಾಳಿಂಬೆ ಬೇಕಾದಲ್ಲಿ) ಅಲಂಕರಿಸಿ.

ಗುರುವಾರ, ಫೆಬ್ರವರಿ 22, 2018

Padavalakai palya recipe in Kannada | ಪಡವಲಕಾಯಿ ಪಲ್ಯ ಮಾಡುವ ವಿಧಾನ

Padavalakai palya recipe in Kannada

Padavalakai palya recipe in Kannada | ಪಡುವಲಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಪಡವಲಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ಒಣ ಮೆಣಸಿನಕಾಯಿ
  7. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  8. 1 ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  11. ಉಪ್ಪು ರುಚಿಗೆ ತಕ್ಕಷ್ಟು
  12. 1/4 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 1 - 2 ಒಣ ಮೆಣಸಿನ ಕಾಯಿ
  3. 1/2 ಟೀಸ್ಪೂನ್ ಜೀರಿಗೆ

ಪಡವಲಕಾಯಿ ಪಲ್ಯ ಮಾಡುವ ವಿಧಾನ:

  1. ಪಡವಲಕಾಯಿಯ ಸಿಪ್ಪೆ ಹೆರೆಸಿ ತೊಳೆದು, ಸಣ್ಣಗೆ ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ. 
  4. ಅದಕ್ಕೆ ಕತ್ತರಿಸಿದ ಪಡವಲಕಾಯಿ ಹಾಕಿ. 
  5. ಉಪ್ಪುಮತ್ತು ಬೆಲ್ಲ ಹಾಕಿ ಮಗುಚಿ.
  6. ಸ್ವಲ್ಪ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/2 ಚಮಚ ಜೀರಿಗೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿ. 
  8. ಪುಡಿ ಮಾಡಿದ ಮಸಾಲೆಯನ್ನು ಬೆಂದಿರುವ ಪಡುವಲಕಾಯಿಗೆ ಹಾಕಿ. 
  9. ಚೆನ್ನಾಗಿ ಮಗುಚಿ ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಫೆಬ್ರವರಿ 21, 2018

Southekai paddu recipe in kannada | ಸೌತೆಕಾಯಿ ಪಡ್ದು ಮಾಡುವ ವಿಧಾನ

Southekai paddu recipe in kannada

Southekai paddu recipe in kannada | ಸೌತೆಕಾಯಿ ಪಡ್ದು ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಕ್ಕಿ ಹಿಟ್ಟು
  2. 1 ಕಪ್ ತುರಿದ ಮುಳ್ಳು ಸೌತೆಕಾಯಿ
  3. 2 ಟೇಬಲ್ ಸ್ಪೂನ್ ಮೊಸರು
  4. 1/2 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  5. 1 ಹಸಿರು ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿದ್ದು 
  6. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ 
  7. 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  8. 2 ಟೇಬಲ್ ಸ್ಪೂನ್ ತೆಂಗಿನ ತುರಿ
  9. 1/2 ಟೀಸ್ಪೂನ್ ಜೀರಿಗೆ 
  10. ಎಣ್ಣೆ ಪಡ್ಡು ಮಾಡಲು 
  11. ಉಪ್ಪು ರುಚಿಗೆ ತಕ್ಕಷ್ಟು.

ಸೌತೆಕಾಯಿ ಪಡ್ದು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ.
  2. ಅದಕ್ಕೆ ತುರಿದ ಸೌತೆಕಾಯಿಯನ್ನು ಸೇರಿಸಿ. 
  3. ನಂತ್ರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ. 
  4. ಅದಕ್ಕೆ ಎರಡು ಟೇಬಲ್ ಚಮಚದಷ್ಟು ಮೊಸರು ಸೇರಿಸಿ ಕಲಸಿ. 
  5. ನಂತ್ರ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕಲಸಿ.
  6. ಆಮೇಲೆ ಜೀರಿಗೆ ಮತ್ತು ತೆಂಗಿನತುರಿ ಸೇರಿಸಿ ಕಲಸಿ. 
  7. ಹಿಟ್ಟು ದಪ್ಪ ದೋಸೆ ಹಿಟ್ಟಿನಂತಿರಬೇಕು. ಅಗತ್ಯವಿದ್ದಲ್ಲಿ ನೀರು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಿ. 
  8. ಪಡ್ಡು ತವಾವನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
  9. ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ. ಸಣ್ಣ-ಮಧ್ಯಮ ಉರಿಯಲ್ಲಿ ಬೇಯಿಸಿ. 
  10. ಸುಮಾರು ಒಂದು ನಿಮಿಷದ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ. 
  11. ಪಡ್ಡುವನ್ನು ತಿರುಗಿಸಿ ಹಾಕಿ.  ಇನ್ನೊಂದು ಬದಿಯೂ ಬೇಯಿಸಿ. ಬಿಸಿ ಅಥವಾ ತಣ್ಣಗೆ ಬಡಿಸಿ. 


ಶುಕ್ರವಾರ, ಫೆಬ್ರವರಿ 16, 2018

Home remedy for gantalu keretha | ಗಂಟಲು ಕೆರೆತ ಮತ್ತು ನೋವಿಗೆ ಕಾಳುಮೆಣಸಿನ ಕಷಾಯ ಮನೆಮದ್ದು

Home remedy for gantalu keretha

Home remedy for gantalu keretha | ಗಂಟಲು ಕೆರೆತ ಮತ್ತು ನೋವಿಗೆ ಕಾಳುಮೆಣಸಿನ ಕಷಾಯದ ಮನೆಮದ್ದು

ಕಾಳುಮೆಣಸಿನ ಕಷಾಯ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕಾಳುಮೆಣಸು
  2. 1 ಏಲಕ್ಕಿ
  3. 1 ನೆಲ್ಲಿಕಾಯಿ ಗಾತ್ರದ ಬೆಲ್ಲ 
  4. 1 ಲೋಟ ನೀರು 
  5. 1/4 ಲೋಟ ಹಾಲು

ಕಾಳುಮೆಣಸಿನ ಕಷಾಯ ಮಾಡುವ ವಿಧಾನ:

  1. ಕಾಳುಮೆಣಸು ಮತ್ತು ಏಲಕ್ಕಿಯನ್ನು ಜಜ್ಜಿ ಪುಡಿ ಮಾಡಿಕೊಳ್ಳಿ.
  2. ನಂತ್ರ ಅದನ್ನು ಒಂದು ಪಾತ್ರೆಗೆ ಹಾಕಿ. ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ . 
  3. ಸುಮಾರು ಐದು ನಿಮಿಷಗಳ ಕಾಲ ಅಥವಾ ನೀರು ಮುಕ್ಕಾಲು ಕಪ್ ಆಗುವವರೆಗೆ ಕುದಿಸಿ. 
  4. ಅದಕ್ಕೆ ಕಾಲು ಕಪ್ ಬಿಸಿ ಹಾಲು ಸೇರಿಸಿ. ಬೇಕಾದಲ್ಲಿ ಜಾಸ್ತಿ ಸೇರಿಸಬಹುದು.   
  5. ಬಿಸಿ ಇರುವಾಗಲೇ ನಿಧಾನವಾಗಿ ಕುಡಿಯಿರಿ. ದಿನಕ್ಕೆ ಒಂದು ಬಾರಿ ಮಲಗುವ ಮುನ್ನ ಕುಡಿದರೆ ಸಾಕು. ಜೋರಿದ್ದರೆ ಎರಡು ಬಾರಿ ಕುಡಿಯಬಹುದು. 

ಗುರುವಾರ, ಫೆಬ್ರವರಿ 15, 2018

Ragi ambli recipe in Kannada | ರಾಗಿ ಅಂಬಲಿ ಮಾಡುವ ವಿಧಾನ

Ragi ambli recipe in Kannada

Ragi ambli recipe in Kannada | ರಾಗಿ ಅಂಬಲಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3 ಟೇಬಲ್ ಚಮಚ ರಾಗಿ ಹಿಟ್ಟು
  2. 2 ಕಪ್ ನೀರು
  3. 1 ಕಪ್ ಮಜ್ಜಿಗೆ
  4. ಒಂದು ಚಿಟಿಕೆ ಇಂಗು
  5. ರುಚಿಗೆ ಉಪ್ಪು 
  6. ಅರ್ಧ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  7. 4 - 5 ಕರಿಬೇವಿನ ಎಲೆ ಸಣ್ಣಗೆ ಹೆಚ್ಚಿದ್ದು
  8. ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)

ರಾಗಿ ಅಂಬಲಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಅರ್ಧ ಕಪ್ ನೀರು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. 
  3. ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ನೀರು ಕುದಿಯಲು ಇಡೀ. 
  4. ನೀರು ಕುದಿಯಲು ಪ್ರಾರಂಭಿಸಿದಾಗ, ನೀರಲ್ಲಿ ಕಲಸಿದ ರಾಗಿ ಹಿಟ್ಟು ಹಾಕಿ. 
  5. ಮಗುಚುತ್ತಾ ಒಂದೈದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ. 
  6. ಸಂಪೂರ್ಣ ಬಿಸಿ ಆರಿದ ಮೇಲೆ ಉಪ್ಪು, ಮಜ್ಜಿಗೆ ಮತ್ತು ಇಂಗು ಹಾಕಿ ಕಲಸಿ. 
  7. ಆಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಹಾಕಿ ಮಗುಚಿ. 
  8. ಆರೋಗ್ಯಕರ ರಾಗಿ ಅಂಬಲಿ ಕುಡಿದು ಆನಂದಿಸಿ.

    ಶುಕ್ರವಾರ, ಫೆಬ್ರವರಿ 9, 2018

    Hurigadale thambittu recipe in Kannada | ಹುರಿಗಡಲೆ ತಂಬಿಟ್ಟು ಮಾಡುವ ವಿಧಾನ

    Hurigadale thambittu recipe in Kannada

    Hurigadale thambittu recipe in Kannada | ಹುರಿಗಡಲೆ ತಂಬಿಟ್ಟು ಮಾಡುವ ವಿಧಾನ

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. 1 ಕಪ್ ಹುರಿಗಡಲೆ
    2. 1/2 ಕಪ್ ಕೊಬ್ಬರಿ ತುರಿ
    3. 1/2 - 3/4 ಕಪ್ ಬೆಲ್ಲ
    4. 1/3 ಕಪ್ ತುಪ್ಪ
    5. 1 ಟೀಸ್ಪೂನ್ ಗಸಗಸೆ
    6. ಎರಡು ಏಲಕ್ಕಿ ಪುಡಿ

    ಹುರಿಗಡಲೆ ತಂಬಿಟ್ಟು ಮಾಡುವ ವಿಧಾನ:

    1. ಹುರಿಗಡಲೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. 
    2. ಗಸಗಸೆಯನ್ನು ಹುರಿದಿಟ್ಟುಕೊಳ್ಳಿ. 
    3. ಕೊಬ್ಬರಿಯನ್ನು ಹುರಿದು ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ  
    4. ಒಂದು ಬಾಣಲೆಯಲ್ಲಿ 1/4 ಕಪ್ ತುಪ್ಪ ಬಿಸಿ ಮಾಡಿ. ಅದಕ್ಕೆ ಪುಡಿಮಾಡಿದ ಬೆಲ್ಲ ಸೇರಿಸಿ.  
    5. ಬೆಲ್ಲ ಕರಗಿ ಕುದಿಯಲು ಪ್ರಾರಂಭವಾದಾಗ ಪುಡಿ ಮಾಡಿದ ಕೊಬ್ಬರಿ ಹಾಕಿ. 
    6. ಮತ್ತು ಗಸಗಸೆ ಹಾಕಿ ಒಮ್ಮೆ ಮಗುಚಿ. 
    7. ಪುಡಿಮಾಡಿದ ಹುರಿಗಡಲೆ ಸೇರಿಸಿ, ಸ್ಟವ್ ಆಫ್ ಮಾಡಿ. 
    8. ಚೆನ್ನಾಗಿ ಕಲಸಿ. 
    9. ಬಿಸಿ ಆರಿದ ಮೇಲೆ ಉಂಡೆ ಮಾಡಿ. ತುಂಬಾ ಪುಡಿ ಪುಡಿ ಎನಿಸಿದರೆ ಸ್ವಲ್ಪ ತುಪ್ಪ ಹಾಕಿ, ಕಲಸಿ ಉಂಡೆ ಕಟ್ಟಿ. 


    ಗುರುವಾರ, ಫೆಬ್ರವರಿ 8, 2018

    Iyengar bread toast recipe in Kannada | ಐಯಂಗಾರ್ ಬ್ರೆಡ್ ಟೋಸ್ಟ್ ಮಾಡುವ ವಿಧಾನ

    Iyengar bread toast recipe in Kannada

    Iyengar bread toast recipe in Kannada | ಐಯಂಗಾರ್ ಬ್ರೆಡ್ ಟೋಸ್ಟ್ ಮಾಡುವ ವಿಧಾನ 


    ಮಸಾಲಾ ಬ್ರೆಡ್ ಟೋಸ್ಟ್ ವಿಡಿಯೋ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

    1. 6 ಬ್ರೆಡ್ 
    2. ಎರಡು ಟೇಬಲ್ ಚಮಚ ಬೆಣ್ಣೆ 
    3. ಒಂದು ಟೇಬಲ್ ಚಮಚ ಎಣ್ಣೆ
    4. 1/2 ಟೀಸ್ಪೂನ್ ಸಾಸಿವೆ 
    5. 1/2 ಟೀಸ್ಪೂನ್ ಜೀರಿಗೆ
    6. 1 ಹಸಿರುಮೆಣಸಿನಕಾಯಿ
    7. 1 ಈರುಳ್ಳಿ 
    8. 1 ಕ್ಯಾರೆಟ್ 
    9. 1/2 ದೊಣ್ಣೆಮೆಣಸು
    10. 1 ಟೊಮೇಟೊ
    11. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
    12. 1/2 ಟೀಸ್ಪೂನ್ ಅಚ್ಚ ಖಾರದ ಪುಡಿ
    13. 1/4 ಟೀಸ್ಪೂನ್ ಚಾಟ್ ಮಸಾಲಾ
    14. 1/4 ಟೀಸ್ಪೂನ್ ಗರಂ ಮಸಾಲಾ
    15. ಚಿಟಿಕೆ ಅರಿಶಿನ
    16. ಉಪ್ಪು ರುಚಿಗೆ ತಕ್ಕಷ್ಟು.

    ಐಯಂಗಾರ್ ಬ್ರೆಡ್ ಟೋಸ್ಟ್ ಮಾಡುವ ವಿಧಾನ:

    1. ಮೊದಲಿಗೆ ಎಲ್ಲ ತರಕಾರಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಕ್ಯಾರಟ್ ನ್ನು ತುರಿದಿಟ್ಟುಕೊಳ್ಳಿ. 
    2. ನಂತ್ರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿಕೊಳ್ಳಿ. 
    3. ಸಣ್ಣಗೆ ಕತ್ತರಿಸಿದ ಹಸಿರುಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
    4. ಆಮೇಲೆ ಸಣ್ಣಗೆ ಕತ್ತರಿಸಿದ ದೊಣ್ಣೆಮೆಣಸು ಮತ್ತು ತುರಿದ ಕ್ಯಾರಟ್ ಹಾಕಿ ಹುರಿಯಿರಿ. 
    5. ಆಮೇಲೆ ಸಣ್ಣಗೆ ಕತ್ತರಿಸಿದ ಟೊಮೇಟೊ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿ. ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. ನೀರು ಸೇರಿಸಬೇಡಿ. 
    6. ಕೊನೆಯಲ್ಲಿ ಅಚ್ಚಖಾರದ ಪುಡಿ, ಚಾಟ್ ಮಸಾಲಾ ಮತ್ತು ಗರಂ ಮಸಾಲಾ ಸೇರಿಸಿ, ಮಗುಚಿ. 
    7. ನಂತ್ರ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಆಫ್ ಮಾಡಿ. ಮಸಾಲೆ ತಯಾರಾಯಿತು. 
    8. ಬ್ರೆಡ್ ನ್ನು, ಬೆಣ್ಣೆ ಹಚ್ಚಿ, ಕಾವಲಿ ಅಥವಾ ತವಾದಲ್ಲಿ ಕಾಯಿಸಿ. 
    9. ನಂತರ ತಯಾರಿಸಿದ ಮಸಾಲೆಯನ್ನು ಮೇಲಿನಿಂದ ಹಚ್ಚಿ, ಮಸಾಲೆ ಬ್ರೆಡ್ ಟೋಸ್ಟ್ ತಯಾರಿಸಿ. ಸವಿದು ಆನಂದಿಸಿ. 

    To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

    ಬುಧವಾರ, ಫೆಬ್ರವರಿ 7, 2018

    Idli recipe using idli rice in Kannada | ಇಡ್ಲಿ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ

    Idli recipe using idli rice in Kannada

    Idli recipe using idli rice in Kannada | ಇಡ್ಲಿ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ


    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. 1.5 ಕಪ್ ಇಡ್ಲಿ ಅಕ್ಕಿ
    2. 1/2 ಕಪ್ ಉದ್ದಿನ ಬೇಳೆ 
    3. 1 ಟೀಸ್ಪೂನ್ ಮೆಂತೆ
    4. 1/4 - 1/2 ಕಪ್ ಗಟ್ಟಿ ಅವಲಕ್ಕಿ 
    5. ಉಪ್ಪು ನಿಮ್ಮ ರುಚಿ ಪ್ರಕಾರ


    ಇಡ್ಲಿ ಅಕ್ಕಿಯಿಂದ ಇಡ್ಲಿ ಮಾಡುವ ವಿಧಾನ:

    1. ಉದ್ದಿನಬೇಳೆ, ಅಕ್ಕಿ ಮತ್ತು ಮೆಂತೆಯನ್ನು ಬೇರೆ ಬೇರೆ ಪಾತ್ರೆಯಲ್ಲಿ ತೆಗೆದುಕೊಳ್ಳಿ. 
    2. ಎಲ್ಲವನ್ನು ತೊಳೆದು 5 - 6 ಗಂಟೆಗಳ ಕಾಲ ನೆನೆಸಿಡಿ.
    3. ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 15 ನಿಮಿಷಗಳ ಕಾಲ ನೆನೆಸಿಡಿ. 
    4. ನಂತರ ಮೊದಲಿಗೆ ಮೆಂತೆಯನ್ನು ಸಣ್ಣ ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು. 
    5. ಆಮೇಲೆ ಉದ್ದಿನಬೇಳೆಯನ್ನು ದೊಡ್ಡ ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು. 
    6. ನಂತರ ನೆನೆಸಿದ ಅಕ್ಕಿಯ ನೀರು ಬಸಿದು, ಸ್ವಲ್ಪ ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ಮಾತ್ರ ನೀರು ಸೇರಿಸಿ. ಗಮನಿಸಿ, ಹೆಚ್ಚು ನೀರು ಸೇರಿಸಬೇಡಿ ಮತ್ತು ಸ್ವಲ್ಪ ತರಿ ತರಿ ಇದ್ದರೆ ಸಾಕು. 
    7. ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ. 
    8. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
    9. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
    10. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.

    ಮಂಗಳವಾರ, ಫೆಬ್ರವರಿ 6, 2018

    Heralekai gojju huli recipe in Kannada | ಹೇರಳೇಕಾಯಿ ಗೊಜ್ಜುಹುಳಿ ಮಾಡುವ ವಿಧಾನ

    Heralekai gojju huli recipe in Kannada

    Heralekai gojju huli recipe in Kannada | ಹೇರಳೇಕಾಯಿ ಗೊಜ್ಜುಹುಳಿ ಮಾಡುವ ವಿಧಾನ 

    ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. 1 ಮಧ್ಯಮ ಗಾತ್ರದ ಹೇರಳೇಕಾಯಿ ಅಥವಾ ಕಂಚಿಕಾಯಿ
    2. 1 ಚಿಟಿಕೆ ಅರಿಶಿನ ಪುಡಿ
    3. ಬೆಲ್ಲ 2 ದೊಡ್ಡ ನಿಂಬೆಹಣ್ಣಿನ ಗಾತ್ರ
    4. 2 ಟೀಸ್ಪೂನ್ ಅಡುಗೆ ಎಣ್ಣೆ
    5. ಉಪ್ಪು ರುಚಿಗೆ ತಕ್ಕಷ್ಟು.

    ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. 1 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
    2. 2 ಟೀಸ್ಪೂನ್ ಉದ್ದಿನ ಬೇಳೆ
    3. 1 ಟೀಸ್ಪೂನ್ ಕಡ್ಲೆಬೇಳೆ
    4. 5 - 6 ಒಣ ಮೆಣಸಿನಕಾಯಿ
    5. 1/4 ಟೀಸ್ಪೂನ್ ಇಂಗು
    6. 1 ಕಪ್ ತೆಂಗಿನ ತುರಿ
    7. 3 ಟೀಸ್ಪೂನ್ ಎಳ್ಳು
    8. 1 ಟೀಸ್ಪೂನ್ ಅಡುಗೆ ಎಣ್ಣೆ

    ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

    1. 1/2 ಟೀಸ್ಪೂನ್ ಸಾಸಿವೆ
    2. 1 ಒಣಮೆಣಸಿನಕಾಯಿ (ಬೇಕಾದಲ್ಲಿ)
    3. 4 - 5 ಕರಿಬೇವಿನ ಎಲೆ
    4. 4 ಟೀಸ್ಪೂನ್ ಅಡುಗೆ ಎಣ್ಣೆ

    ಹೇರಳೇಕಾಯಿ ಗೊಜ್ಜುಹುಳಿ ಮಾಡುವ ವಿಧಾನ:

    1. ಹೇರಳೇಕಾಯಿಯನ್ನು ಹೊರಗಿನ ತೆಳುವಾದ ಸಿಪ್ಪೆ ತೆಗೆದು, ಕತ್ತರಿಸಿ, ರಸ ತೆಗೆಯಿರಿ. ರಸವನ್ನು ಆಮೇಲೆ ಸೇರಿಸಲಾಗಿದೆ. 
    2. ಬೀಜ ತೆಗೆದು, ಸಣ್ಣಗೆ ಕತ್ತರಿಸಿ. 
    3. ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಳ್ಳನ್ನು ಹುರಿದು ತೆಗೆದಿಡಿ. 
    4. ನಂತರ ಅದೇ ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ನಂತರ ಉದ್ದಿನ ಬೇಳೆ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಒಣಮೆಣಸು ಮತ್ತು ಇಂಗು ಹಾಕಿ ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಡಿ. 
    5. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ ಅರೆಯಿರಿ. 
    6. ನಂತರ ಬಾಣಲೆಯಲ್ಲಿ ಕತ್ತರಿಸಿದ ಹೇರಳೇಕಾಯಿ ಹಾಕಿ, ಒಂದೆರಡು ನಿಮಿಷ ಹುರಿಯಿರಿ. 
    7. ನಂತರ ಅರಿಶಿನ, ಉಪ್ಪು, ಬೆಲ್ಲ ಮತ್ತು ತೆಗೆದಿಟ್ಟ ರಸ ಹಾಕಿ. 
    8. ಅಗತ್ಯವಿದ್ದಷ್ಟು ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
    9. ಬೇಯಿಸಿದ ಹೇರಳೇಕಾಯಿಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು, ಹುಳಿ ಮತ್ತು ಬೆಲ್ಲ ಹೊಂದಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ, ಒಂದು ಕುದಿ ಕುದಿಸಿ. 
    10. ನಂತರ ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.

    ಶುಕ್ರವಾರ, ಫೆಬ್ರವರಿ 2, 2018

    Southekayi sihi dose recipe in Kannada | ಸೌತೆಕಾಯಿ ಸಿಹಿ ದೋಸೆ ಮಾಡುವ ವಿಧಾನ

    Southekayi sihi dose recipe in Kannada

    Southekayi sihi dose recipe in Kannada | ಸೌತೆಕಾಯಿ ಸಿಹಿ ದೋಸೆ ಮಾಡುವ ವಿಧಾನ 

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. 1 ಕಪ್ ದೋಸೆ ಅಕ್ಕಿ
    2. 1 ಟೇಬಲ್ ಚಮಚ ಮೆಂತೆ
    3. 1/2 ಕಪ್ ಅವಲಕ್ಕಿ
    4. 1/2 ಕಪ್ ತೆಂಗಿನ ತುರಿ
    5. 1 ಮಧ್ಯಮ ಗಾತ್ರದ ಸೌತೆಕಾಯಿ ಅಥವಾ ಒಂದು ಕಪ್ ಸೌತೆಕಾಯಿ 
    6. 1/2 ಕಪ್ ಬೆಲ್ಲ (ನಿಮ್ಮ ರುಚಿಗೆ ತಕ್ಕಂತೆ ಬದಲಾಯಿಸಿ)
    7. ಉಪ್ಪು ರುಚಿಗೆ ತಕ್ಕಷ್ಟು
    8. 4 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ

    ಸೌತೆಕಾಯಿ ಸಿಹಿ ದೋಸೆ ಮಾಡುವ ವಿಧಾನ:

    1. ಅಕ್ಕಿ ಮತ್ತು ಮೆಂತೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
    2. ಅವಲಕ್ಕಿಯನ್ನು ತೊಳೆದು 15 ನಿಮಿಷಗಳ ಕಾಲ ನೆನೆಸಿ. 
    3. ನೆನೆಸಿದ ನಂತರ ನೀರನ್ನು ಬಗ್ಗಿಸಿ. ನೆನೆಸಿದ ಅಕ್ಕಿ, ಮೆಂತೆ, ಅವಲಕ್ಕಿ, ತೆಂಗಿನ ತುರಿ ಮತ್ತು ಹೆಚ್ಚಿದ ಸೌತೆಕಾಯಿ ಯನ್ನು ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ರುಬ್ಬುವ ವೇಳೆ ಹೆಚ್ಚು ನೀರು ಸೇರಿಸಬೇಡಿ. ರುಬ್ಬಲು ಬೇಕಾದಷ್ಟು ನೀರನ್ನು ಮಾತ್ರ ಹಾಕಿ.
    4. ಸೌತೆಕಾಯಿ ಸಿಹಿ ದೋಸೆ ಹಿಟ್ಟು ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಷ್ಟು ಗಟ್ಟಿ ಇರಲಿ. 
    5. ಮುಚ್ಚಳ ಮುಚ್ಚಿ 8 - 12 ಘಂಟೆಗಳ ಕಾಲ ಹುದುಗಲು ಬಿಡಿ. 
    6. ಹಿಟ್ಟು ಹುದುಗಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿ. 
    7. ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ, ಬಿಸಿ ಮಾಡಿ. ಸ್ಟವ್ ಮಧ್ಯಮ ಉರಿಯಲ್ಲಿರಲಿ. 
    8. ಮುಚ್ಚಳವನ್ನು ಮುಚ್ಚಿ ಬೇಯಿಸಿ. ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ಬಿಸಿ ದೋಸೆಯನ್ನು ತುಪ್ಪ ಅಥವಾ ಚಟ್ನಿಯೊಂದಿಗೆ ಬಡಿಸಿ.

    Related Posts Plugin for WordPress, Blogger...