ಬುಧವಾರ, ಮೇ 30, 2018

Jola recipe in Kannada | ಬೆಣ್ಣೆ ಜೋಳ ಮಾಡುವ ವಿಧಾನ

Jola recipe in Kannada

Jola recipe in Kannada | ಬೆಣ್ಣೆ ಜೋಳ ಮಾಡುವ ವಿಧಾನ 



ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಜೋಳ 
  2. 1 ಟೇಬಲ್ ಚಮಚ ಬೆಣ್ಣೆ
  3. 1/4 ಟೀಸ್ಪೂನ್ ಚಾಟ್ ಮಸಾಲಾ 
  4. ದೊಡ್ಡ ಚಿಟಿಕೆ ಕಾಳು ಮೆಣಸಿನ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಬದಲಾಯಿಸಿ) 
  5. 1/4 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಂತೆ

ಬೆಣ್ಣೆ ಜೋಳ ಮಾಡುವ ವಿಧಾನ:

  1. ಜೋಳದ ಸಿಪ್ಪೆ ಸುಲಿದು ತೊಳೆಯಿರಿ. 
  2. ಆಮೇಲೆ ಒಂದು ಚಾಕುವಿನ ಸಹಾಯದಿಂದ ಜೋಳದ ಕಾಳುಗಳನ್ನು ಹೆರೆದು ತೆಗೆಯಿರಿ. 
  3. ಈಗ ಜೋಳವನ್ನು ಆವಿಯಲ್ಲಿ ಅಥವಾ ಕುಕ್ಕರ್ ನಲ್ಲಿ ಅಥವಾ ಓವೆನ್ ನಲ್ಲಿ ಬೇಯಿಸಿ. ಕುಕ್ಕರ್ನಲ್ಲಿ ಬೇಯಿಸಿದರೆ, ನೀರನ್ನು ಸಂಪೂರ್ಣ ಬಸಿದು ತೆಗೆಯಿರಿ.  
  4. ನಂತ್ರ ಬೇಯಿಸಿದ ಜೋಳಕ್ಕೆ ಬಿಸಿ ಇರುವಾಗಲೇ ಬೆಣ್ಣೆ, ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ. 
  5. ಚೆನ್ನಾಗಿ ಕಲಸಿ, ಬಿಸಿ ಇರುವಾಗಲೇ ಸವಿದು ಆನಂದಿಸಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಸೋಮವಾರ, ಮೇ 28, 2018

Oats payasa recipe in Kannada | ಓಟ್ಸ್ ಪಾಯಸ ಮಾಡುವ ವಿಧಾನ

Oats payasa recipe in Kannada

Oats payasa recipe in Kannada | ಓಟ್ಸ್ ಪಾಯಸ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಓಟ್ಸ್ 
  2. 1/2 ಕಪ್ ಬೆಲ್ಲ
  3. 2.5 ಕಪ್ ಹಾಲು
  4. 1 ಕಪ್ ನೀರು
  5. 2 ಟೇಬಲ್ ಚಮಚ ತುಪ್ಪ
  6. 5-6 ಗೋಡಂಬಿ
  7. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ

ಓಟ್ಸ್ ಪಾಯಸ ಮಾಡುವ ವಿಧಾನ:

  1. ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ. 
  2. ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ ಓಟ್ಸ್ ಮತ್ತು ತುಪ್ಪ ಹಾಕಿ. 
  3. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ. 
  4. ಒಂದು ಕಪ್ ಬಿಸಿ ಹಾಲು ಮತ್ತು ಒಂದು ಕಪ್ ನೀರನ್ನು ಸೇರಿಸಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಉರಿ ತಗ್ಗಿಸಿ, ಆಗಾಗ್ಯೆ ಮಗುಚುತ್ತಾ ಓಟ್ಸ್ ನ್ನು ಬೇಯಿಸಿ. ಬೇಗ ಬೇಯುವ ಓಟ್ಸ್ ಆದಲ್ಲಿ ಮೂರು ನಿಮಿಷ ಸಾಕು. 
  5. ಸಣ್ಣಗೆ ಕತ್ತರಿಸಿದ ಗೋಡಂಬಿ ಸೇರಿಸಿ. 
  6. ಪುಡಿ ಮಾಡಿದ ಬೆಲ್ಲ ಸೇರಿಸಿ. 
  7. ಮತ್ತು ಏಲಕ್ಕಿ ಪುಡಿ ಸೇರಿಸಿ. 
  8. ಬೆಲ್ಲ ಕರಗಿದ ಮೇಲೆ ಉಳಿದ ಹಾಲು ಹಾಕಿ, ಕುದಿಸಿ. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟು ಬೇಕಾದಲ್ಲಿ ಹಾಲನ್ನು ಸೇರಿಸಿ. ಸ್ಟೋವ್ ಆಫ್ ಮಾಡಿ. 
  9. ರುಚಿಕರ ಪಾಯಸವನ್ನು ಸವಿಯಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಮೇ 24, 2018

Badanekayi hasi masale huli recipe in Kannada | ಬದನೇಕಾಯಿ ಹಸಿ ಮಸಾಲೆ ಹುಳಿ ಮಾಡುವ ವಿಧಾನ

Badanekayi hasi masale huli recipe in Kannada

Badanekayi hasi masale huli recipe in Kannada | ಬದನೇಕಾಯಿ ಹಸಿ ಮಸಾಲೆ ಹುಳಿ ಮಾಡುವ ವಿಧಾನ

ಬದನೇಕಾಯಿ ಹಸಿ ಮಸಾಲೆ ಹುಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 - 4 ಬದನೇಕಾಯಿ (ಗಾತ್ರ ಅವಲಂಬಿಸಿ)
  2. ಒಂದು ಚಿಟಿಕೆ ಅರಶಿನ ಪುಡಿ 
  3. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಟೀಸ್ಪೂನ್ ಕೊತ್ತಂಬರಿ ಬೀಜ 
  2. 1/2 ಟೀಸ್ಪೂನ್ ಜೀರಿಗೆ 
  3. 1/4 ಟೀಸ್ಪೂನ್ ಸಾಸಿವೆ 
  4. 1/2 ಕಪ್ ತೆಂಗಿನ ತುರಿ 
  5. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  6. ಸ್ವಲ್ಪ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  7. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬದನೇಕಾಯಿ ಹಸಿ ಮಸಾಲೆ ಹುಳಿ ಮಾಡುವ ವಿಧಾನ:

  1. ಬದನೆಕಾಯಿಯನ್ನು ತೊಳೆದು ಕತ್ತರಿಸಿ. ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ. 
  2. ನಂತ್ರ ಬದನೆಕಾಯಿಯನ್ನು ನೀರಿನಿಂದ ತೆಗೆದು, ಇನ್ನೊಂದು ಪಾತ್ರೆಗೆ ಹಾಕಿ. 
  3. ಅರಶಿನ, ಉಪ್ಪು ಮತ್ತು ನೀರು ಹಾಕಿ ಬೇಯಿಸಿ. ಬದನೇಕಾಯಿ ಬೇಗ ಬೇಯುತ್ತದೆ  ಹಾಗಾಗಿ ಪ್ರೆಷರ್ ಕುಕ್ಕರ್ ನ ಅಗತ್ಯವಿಲ್ಲ. 
  4. ಆ ಸಮಯದಲ್ಲಿ, ಮಿಕ್ಸಿಯಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ ಮತ್ತು ತೆಂಗಿನ ತುರಿ ಹಾಕಿ ಅರೆಯಿರಿ. 
  5. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸಿನಕಾಯಿ ಹಾಕಿ ಅರೆಯಿರಿ. 
  6. ಬೇಯಿಸಿದ ಬದನೇಕಾಯಿಗೆ ಅರೆದ ಮಸಾಲೆ ಹಾಕಿ.
  7. ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
  8. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ, ಆನಂದಿಸಿ !!


ಮಂಗಳವಾರ, ಮೇ 22, 2018

Jolada dose recipe in Kannada | ಜೋಳದ ದೋಸೆ ಮಾಡುವ ವಿಧಾನ

Jolada dose recipe in Kannada

Jolada dose recipe in Kannada |  ಜೋಳದ ದೋಸೆ ಮಾಡುವ ವಿಧಾನ


ಜೋಳದ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಜೋಳದ ಹಿಟ್ಟು
  2. 1/2 ಕಪ್ ಅಕ್ಕಿ ಹಿಟ್ಟು
  3. 2 ಟೇಬಲ್ ಚಮಚ ರವೆ (ಬೇಕಾದಲ್ಲಿ)
  4. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು 
  8. 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
  9. ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
  10. ಉಪ್ಪು ರುಚಿಗೆ ತಕ್ಕಷ್ಟು

ಜೋಳದ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
  2. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ. 
  3. ಆಮೇಲೆ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ. 
  4. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತ ತೆಳುವಾದ ಹಿಟ್ಟು ತಯಾರಿಸಿಕೊಳ್ಳಿ. ಆದರೆ ಹಿಟ್ಟು ನೀರು ದೋಸೆ ಅಥವಾ ರವೇ ದೋಸೆಗಿಂತ ಸ್ವಲ್ಪ ಗಟ್ಟಿ ಇರಲಿ.   
  5. ಬೇಕಾದಲ್ಲಿ ಎರಡು ಟೇಬಲ್ ಚಮಚ ರವೇ ಸೇರಿಸಿ. ರವೇ ಸೇರಿಸಿದರೇ ದೋಸೆ ಗರಿಗರಿಯಾಗುವುದು ಮತ್ತು ದೋಸೆ ಮಾಡಲು ಸುಲಭವಾಗುವುದು.
  6. ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ. 
  7. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  8. ಮುಚ್ಚಳ ಮುಚ್ಚಿ ಬೇಯಿಸಿ. 
  9. ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
  10. ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಸೋಮವಾರ, ಮೇ 21, 2018

Sabakki sandige recipe in Kannada | ಸಾಬಕ್ಕಿ ಸಂಡಿಗೆ ಮಾಡುವ ವಿಧಾನ

Sabakki sandige recipe in Kannada

Sabakki sandige recipe in Kannada | ಸಬಕ್ಕಿ ಸಂಡಿಗೆ ಮಾಡುವ ವಿಧಾನ

ಸಬ್ಬಕ್ಕಿ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಾಬಕ್ಕಿ 
  2. 2 ಕಪ್ ನೀರು
  3. 2 - 3 ಹಸಿರುಮೆಣಸಿನಕಾಯಿ ಅಥವಾ ನಿಮ್ಮ ರುಚಿ ಪ್ರಕಾರ
  4. 1 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿ ಪ್ರಕಾರ
  5. 1/2 ಟೀಸ್ಪೂನ್ ಜೀರಿಗೆ
  6. 1/4 ಟೀಸ್ಪೂನ್ ಇಂಗು
  7. ಎಣ್ಣೆ ಕಾಯಿಸಲು

ಸಾಬಕ್ಕಿ ಸಂಡಿಗೆ ಮಾಡುವ ವಿಧಾನ:

  1. ಸಾಬಕ್ಕಿಯನ್ನು ಮೂವತ್ತು ನಿಮಿಷಗಳ ಕಾಲ ನೀರಿನಲ್ಲಿನೆನೆಸಿಡಿ. 
  2. ನಂತರ ನೀರು ಬಗ್ಗಿಸಿ, ಎರಡು ಕಪ್ ನಷ್ಟು ನೀರು ಸೇರಿಸಿ (೧ ಕಪ್ ಸಾಬಕ್ಕಿಗೆ ೪ ಕಪ್ ನೀರು). 
  3. ಸಾಬಕ್ಕಿಯನ್ನು ಮೆತ್ತಗೆ ಬೇಯಿಸಿ. ನಾನು ಕುಕ್ಕರ್ ನಲ್ಲಿ ಎರಡು ವಿಷಲ್ ಮಾಡಿ ಬೇಯಿಸುತ್ತೇನೆ.  
  4. ನಂತ್ರ ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಮಿಕ್ಸಿಯಲ್ಲೂ ಪುಡಿ ಮಾಡಬಹುದು. 
  5. ಅದನ್ನು ಬೇಯಿಸಿದ ಸಾಬಕ್ಕಿಗೆ ಹಾಕಿ. 
  6. ಜೀರಿಗೆ ಮತ್ತು ಇಂಗನ್ನು ಸೇರಿಸಿ. ಚೆನ್ನಾಗಿ ಕಲಸಿ. 
  7. ಬಿಸಿ ಆರಿದ ಮೇಲೆ, ಬಟ್ಟೆ ಅಥವಾ ಪ್ಲಾಸ್ಟಿಕ್ ಶೀಟ್ನ ಮೇಲೆ ಸಂಡಿಗೆ ಹಾಕಿ. 
  8. ಬಿಸಿಲಿನಲ್ಲಿ ಗರಿಗರಿಯಾಗುವವರೆಗೆ ಒಣಗಿಸಿ. 
  9. ಎರಡು ದಿನದ ನಂತ್ರ ತಿರುಗಿಸಿ ಹಾಕಿ ಒಣಗಿಸಿ. ಒಣಗಲು ಬೇಕಾದ ದಿನ, ಬಿಸಿಲಿನ ಮೇಲೆ ಅವಲಂಬಿತವಾಗಿರುತ್ತದೆ. 
  10. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಒಣಗಿಸಿದ ಸಂಡಿಗೆಯನ್ನು ಬಿಸಿ ಎಣ್ಣೆಗೆ ಹಾಕಿ ಕಾಯಿಸಿ.
  11. ಊಟ, ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಶನಿವಾರ, ಮೇ 19, 2018

Heerekai thove recipe in Kannada | ಹೀರೆಕಾಯಿ ತೊವೆ ಮಾಡುವ ವಿಧಾನ

Heerekai thove recipe in Kannada

Heerekai thove recipe in Kannada | ಹೀರೆಕಾಯಿ ತೊವೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/4 ಕಪ್ ಹೆಸರುಬೇಳೆ
  2. 1 ಮಧ್ಯಮ ಗಾತ್ರದ ಹೀರೆಕಾಯಿ
  3. 1 - 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  4. 1 cm ಉದ್ದದ ಶುಂಠಿ
  5. ಒಂದು ಚಿಟಿಕೆ ಅರಶಿನ ಪುಡಿ
  6. 1 - 2 ಚಮಚ ಲಿಂಬೆರಸ
  7. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನತುರಿ
  2. 1/4 ಟೀಸ್ಪೂನ್ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 4 - 5 ಕರಿಬೇವಿನ ಎಲೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಹೀರೆಕಾಯಿ ತೊವೆ ಮಾಡುವ ವಿಧಾನ:

  1. ಹೀರೇಕಾಯಿಯನ್ನು ತೊಳೆದು, ದಪ್ಪ ಸಿಪ್ಪೆ ತೆಗೆದು, ಕತ್ತರಿಸಿಟ್ಟುಕೊಳ್ಳಿ. ಸಿಪ್ಪೆಯಿಂದ ಚಟ್ನಿ ಅಥವಾ ದೋಸೆ ತಯಾರಿಸಬಹುದು. 
  2. ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು, ಒಂದೆರಡು ಹನಿ ಎಣ್ಣೆ ಮತ್ತು ಅರಶಿನ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. 
  3. ಅದಕ್ಕೆ ಕತ್ತರಿಸಿದ ಹೀರೆಕಾಯಿ, ಹಸಿರುಮೆಣಸಿನಕಾಯಿ ಮತ್ತು ಶುಂಠಿ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  4. ತೆಂಗಿನತುರಿ ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. 
  5. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಹೆಸರುಬೇಳೆ ಮತ್ತು ಹೀರೆಕಾಯಿಗೆ ಸೇರಿಸಿ. 
  6. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
  7. ಸ್ಟವ್ ಆಫ್ ಮಾಡಿ, ಲಿಂಬೆಹಣ್ಣಿನ ರಸ ಸೇರಿಸಿ. 
  8. ಎಣ್ಣೆ, ಒಣಮೆಣಸು, ಸಾಸಿವೆ ಮತ್ತುಕರಿಬೇವು ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. 

ಬುಧವಾರ, ಮೇ 2, 2018

Ragi sandige recipe in Kannada | ರಾಗಿ ಸಂಡಿಗೆ ಮಾಡುವ ವಿಧಾನ

Ragi sandige recipe in Kannada

Ragi sandige recipe in Kannada | ರಾಗಿ ಸಂಡಿಗೆ ಮಾಡುವ ವಿಧಾನ

ರಾಗಿ ಸಂಡಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)

  1. 1/4 ಕಪ್ ರಾಗಿಹಿಟ್ಟು
  2. 1.5 ಕಪ್ ನೀರು (ಅರೆಯುವ ನೀರು ಸೇರಿಸಿ)
  3. ದೊಡ್ಡ ಚಿಟಿಕೆ ಇಂಗು
  4. 2 - 3 ಹಸಿರುಮೆಣಸಿನಕಾಯಿ
  5. 1/2 ಟೀಸ್ಪೂನ್ ಜೀರಿಗೆ
  6. 1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು

ರಾಗಿ ಸಂಡಿಗೆ ಮಾಡುವ ವಿಧಾನ:

  1. ರಾಗಿ ಹಿಟ್ಟು, ಉಪ್ಪು, ಹಸಿರುಮೆಣಸಿನಕಾಯಿ ಮತ್ತು ಇಂಗನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ. 
  2. ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆಯಿರಿ. ಒಂದರ್ಧ ಘಂಟೆ ನೆನೆಯಲು ಬಿಡಿ. ಗಮನಿಸಿ ಅರೆಯದೆಯೂ ಮಾಡಬಹುದು. ರಾಗಿ ಹಿಟ್ಟಿಗೆ ಉಪ್ಪು ಮತ್ತು ಹಸಿರುಮೆಣಸಿನಕಾಯಿಯನ್ನು ಜಜ್ಜಿ ಹಾಕಿದರಾಯಿತು. 
  3. ಅರೆದ ರಾಗಿ ಹಿಟ್ಟನ್ನು, ಉಳಿದ ನೀರಿನೊಂದಿಗೆ ಒಂದು ಬಾಣಲೆಗೆ ಹಾಕಿ, ಕುದಿಯಲು ಇಡೀ. 
  4. ಐದಾರು ನಿಮಿಷ ಅಥವಾ ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ.  
  5. ಜೀರಿಗೆ ಸೇರಿಸಿ, ಸ್ಟವ್ ಆಫ್ ಮಾಡಿ.
  6. ಬಿಸಿ ಕಡಿಮೆ ಆದ ಮೇಲೆ, ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ನಲ್ಲಿ ಸಂಡಿಗೆ ಹಾಕಿ. ಬಿಸಿಲಿನಲ್ಲಿ ಒಣಗಲು ಇಡಿ. 
  7. ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ. 
  8. ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ..ಆದರೆ ಬೇಗ-ಬೇಗ ಖಾಯಿಸಬೇಕು. 

ಮಂಗಳವಾರ, ಮೇ 1, 2018

Halasina hannina dose recipe in Kannada | ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ

Halasina hannina dose recipe in Kannada

Halasina hannina dose recipe in Kannada | ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಹಲಸಿನ ಹಣ್ಣು 
  2. 1/2 ಕಪ್ ಅಕ್ಕಿ
  3. 1/4 ಕಪ್ ತೆಂಗಿನ ತುರಿ 
  4. ಸ್ವಲ್ಪ ಬೆಲ್ಲ (ಬೇಕಾದಲ್ಲಿ; ನಾನು ಹಾಕಲಿಲ್ಲ) 
  5. ಉಪ್ಪು ರುಚಿಗೆ ತಕ್ಕಷ್ಟು. 
  6. ಎಣ್ಣೆ ದೋಸೆ ಮಾಡಲು

ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ಕನಿಷ್ಟ 2 - 3 ಘಂಟೆಗಳ ಕಾಲ ನೆನೆಸಿ. 
  2. ಹಲಸಿನ ಹಣ್ಣನ್ನು ಬಿಡಿಸಿ ಇಟ್ಟುಕೊಳ್ಳಿ. ಬಿಡಿಸಿದ ಹಣ್ಣನ್ನು ಪುನಃ ಕತ್ತರಿಸಿದಲ್ಲಿ ಅರೆಯಲು ಸುಲಭವಾಗುವುದು.  
  3. ಮಿಕ್ಸಿಯಲ್ಲಿ ನೆನೆಸಿದ ಅಕ್ಕಿ, ಹಲಸಿನ ಹಣ್ಣು ಮತ್ತು ತೆಂಗಿನತುರಿ ಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  5. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಸಿ. 
  6. ದೋಸೆಕಲ್ಲು ಬಿಸಿ ಮಾಡಿ, ದೋಸೆ ಮಾಡಿರಿ. 
  7. ಮುಚ್ಚಳ ಮುಚ್ಚಿ ಬೇಯಿಸಿ. 
  8. ನಂತ್ರ ಮೇಲಿನಿಂದ ಎಣ್ಣೆ ಹಾಕಿ, ಇನ್ನೊಂದು ಬದಿ ಕಾಯಿಸಿ. 
  9. ಬಿಸಿ ದೋಸೆಯನ್ನು ಚಟ್ನಿ ಯೊಂದಿಗೆ ಬಡಿಸಿ. 
Related Posts Plugin for WordPress, Blogger...